ಬಭೂವಿರೇ ಚನ್ದ್ರಲಲಾಮತೋ ವರಾತ್ ಪುರಾ ಹ್ಯಜೇಯಾ ಅಸುರಾ ಧರಾತಳೇ ।
ತೈರರ್ದಿತಾ ವಾಸವನಾಯಕಾಃ ಸುರಾಃ ಪುರೋ ನಿಧಾಯಾಬ್ಜಜಮಸ್ತುವನ್ ಹರಿಮ್
॥೩.೪೮॥
ಸಜ್ಜನರ ರಕ್ಷಣಕೆ
ದುರ್ಜನರ ಶಿಕ್ಷಣಕೆ ಅವತಾರಗಳ ಮಾಡಿದ ಹರಿ,
ಈಗ ಕಾಣುತ್ತೇವೆ
ಪರಶುರಾಮಾವತಾರದ ಹಿನ್ನೆಲೆ ಮತ್ತು ಪರಿ.
ಹಿಂದೆ
ರುದ್ರವರದಿಂದ ಉನ್ಮತ್ತರಾದ ದೈತ್ಯರ ಹುಟ್ಟು,
ಪೀಡಿತ ದೇವತೆಗಳು
ಹರಿಯ ಬಳಿ ಸ್ತೋತ್ರ ಮಾಡಿದ ಗುಟ್ಟು.
ವಿರಿಞ್ಚಸೃಷ್ಟೈರ್ನಿತರಾಮವಧ್ಯೌ ವರಾದ್ ವಿಧಾತುರ್ದಿತಿಜೌ ಹಿರಣ್ಯಕೌ
।
ತಥಾ ಹಯಗ್ರೀವ ಉದಾರವಿಕ್ರಮಸ್ತ್ವಯಾ ಹತಾ ಬ್ರಹ್ಮಪುರಾತನೇನ ॥೩.೪೯॥
ಬ್ರಹ್ಮಸೃಷ್ಟಿಯಿಂದ
ಅವಧ್ಯರೆನಿಸಿದ ಹಿರಣ್ಯಾಕ್ಷ ಹಿರಣ್ಯಕಶಿಪು,
ಬಲಶಾಲಿ
ಉನ್ಮತ್ತನಾದ ಹಯಗ್ರೀವನೆಂಬಂಥ ದೇವರಿಪು.
ಯಾವ ದೇವತೆಗಳಿಗೂ
ಮಣಿಯದ ದುಷ್ಟ ರಕ್ಕಸ ಪಡೆ,
ನಿನ್ನವರ ಮಾತ
ಕಾಯುತ ದೈತ್ಯರ ನಿವಾರಿಸಿದ ನಿನ್ನ ನಡೆ.
ದೇವತೆಗಳ ಸಜ್ಜನರ
ಪರ ನಿನ್ನ ಯಾವತ್ತೂ ವ್ಯಾಪಾರ,
ಚಾಣಾಕ್ಷತನದಿ ಮಾಡಿ
ಮುಗಿಸಿದೆ ಅನೇಕ ರಾಕ್ಷಸರ ಸಂಹಾರ.
ಸ ಚಾಸುರಾನ್ ರುದ್ರವರಾದವಧ್ಯಾನಿಮಾನ್ ಸಮಸ್ತೈರಪಿ ದೇವದೇವ ।
ನಿಸ್ಸೀಮಶಕ್ತ್ಯೈವ ನಿಹತ್ಯ ಸರ್ವಾನ್ ಹೃದಮ್ಬುಜೇ ನೋ ನಿವಸಾಥ ಶಶ್ವತ್
॥೩.೫೦॥
ಅಂತಹ ಸರ್ವಶಕ್ತ
ಸರ್ವಸ್ವತಂತ್ರ ಸ್ವಾಮಿಯಾದವನೇ,
ರುದ್ರವರದಿ ಮೆರೆವ
ಕ್ಷತ್ರಿಯರ ನಿಗ್ರಹಿಸೆಲೆಂದು ಬಾ ನೀನೇ.
ದುಷ್ಟ
ಕ್ಷತ್ರಿಯರನೆಲ್ಲಾ ಬಿಡದೆ ಸಂಹರಿಸು,
ನಮ್ಮ ಹೃದಯಕಮಲದಲಿ
ಸದಾ ನೆಲೆಸು.
ಇತ್ಯಾದರೋಕ್ತಸ್ತ್ರಿದಶೈರಜೇಯಃ ಸ ಶಾರ್ಙ್ಗಧನ್ವಾsಥ ಭೃಗುದ್ವಹೋsಭೂತ್
ರಾಮೋ ನಿಹತ್ಯಾಸುರಪೂಗಮುಗ್ರಂ ನದಾನನಾದಿರ್ವಿದಧೇsಸೃಜೈವ ॥೩.೫೧॥
ಹೀಗೆ ದೇವತೆಗಳಿಂದ
ಸ್ತುತಿಸಲ್ಪಟ್ಟ ನಾರಾಯಣ,
ಕೊಡಲಿರಾಮನಾಗಿ
ಮಾಡಿದ ಕ್ಷತ್ರಿಯರ ಮಾರಣ.
ಹೀಗೆ ಕ್ಷತ್ರಿಯರ
ತರಿದ ಭೃಗುಕುಲೋದ್ಭವ,
ಹಾಗೇ ಮಾಡಿದ
ಸಮಂತಪಂಚಕ ತೀರ್ತೋದ್ಭವ.
[Contributed by Shri Govind
Magal]
No comments:
Post a Comment
ಗೋ-ಕುಲ Go-Kula