ಅಥೋ ದಿತೇರ್ಜ್ಯೇಷ್ಠಸುತೇನ ಶಶ್ವತ್ ಪ್ರಪೀಡಿತಾ ಬ್ರಹ್ಮವರಾತ್
ಸುರೇಶಾಃ ।
ಹರಿಂ ವಿರಿಞ್ಚೇನ ಸಹೋಪಜಗ್ಮುರ್ದೌರಾತ್ಮ್ಯಮಸ್ಯಾಪಿ
ಶಶಂಸುರಸ್ಮೈ ॥೩.೪೨॥
ಬ್ರಹ್ಮ ವರಬಲದಿಂದ
ದಿತಿಪುತ್ರ ಹಿರಣ್ಯಕಶಿಪು ಉನ್ಮತ್ತ,
ದೇವಗಣವೆಲ್ಲವೂ
ಅವನಿಂದ ವಿಧ ವಿಧವಾಗಿ ಪೀಡಿತ.
ದೇವೋತ್ತಮರೆಲ್ಲರೂ
ಬ್ರಹ್ಮನೊಂದಿಗೆ ಹರಿಯ ಬಳಿ ಬಂದು,
ದಿತಿಪುತ್ರನ
ದೌರ್ಜನ್ಯದ ಅರಿಕೆ ಮಾಡಿಕೊಂಡರು ನೊಂದು.
ಅಭಿಷ್ಟುತಸ್ತೈರ್ಹರಿರುಗ್ರವೀರ್ಯೋ ನೃಸಿಂಹರೋಪೇಣ ಸ ಆವಿರಾಸೀತ್ ।
ಹತ್ವಾಹಿರಣ್ಯಂ ಚ ಸುತಾಯ ತಸ್ಯ ದತ್ವಾsಭಯಂ
ದೇವಗಣಾನತೋಷಯತ್ ॥೩.೪೩॥
ದೇವತೆಗಳಿಂದ
ಸ್ತುತಿಸಲ್ಪಟ್ಟ ನಾರಾಯಣ,
ನಾರಸಿಂಹನಾಗಿ
ಕಂಬದಲ್ಲಾದ ಅನಾವರಣ.
ಮುಗಿಸಿದ
ಹಿರಣ್ಯಕಶಿಪುವಿನ ಸಂಹಾರದ ಕೆಲಸ,
ಪ್ರಹ್ಲಾದಗೆ
ಅಭಯವಿತ್ತು ದೇವತೆಗಳಿಗಿತ್ತ ಮಂದಹಾಸ.
[Contributed by
Shri Govind Magal]
No comments:
Post a Comment
ಗೋ-ಕುಲ Go-Kula