ಅಗ್ರೇ ಶಿವೋsಹಮ್ಭವ ಏವ ಬುದ್ಧೇರುಮಾ ಮನೋಜೌ ಸಹ ಶಕ್ರಕಾಮೌ ।
ಗುರುರ್ಮನುರ್ದಕ್ಷ ಉತಾನಿರುದ್ಧಃ ಸಹೈವ ಪಶ್ಚಾನ್ಮನಸಃ ಪ್ರಸೂತಾಃ
॥೩.೨೬॥
ಮೊದಲಿಗೆ
ಅಹಂಕಾರದಿಂದ ಶಿವನ ಜನನ,
ಬುದ್ಧಿಯಿಂದಾಯ್ತು ಪಾರ್ವತಿಯ ಆಗಮನ.
ಮನಸ್ಸಿನಿಂದ ಇಂದ್ರ
-ಕಾಮರ ಉತ್ಪತ್ತಿ,
ಹಾಗೇ ದಕ್ಷ ಮನು
ಅನಿರುದ್ಧ ಬೃಹಸ್ಪತಿ.
ಚಕ್ಷುಃಶ್ರುತಿಭ್ಯಾಂ ಸ್ಪರ್ ಶಾತ್ ಸಹೈವ ರವಿಃ ಶಶೀ ಧರ್ಮ ಇಮೇ
ಪ್ರಸೂತಾಃ ।
ಜಿಹ್ವಾಭವೋ ವಾರಿಪತಿರ್ನಸೋಶ್ಚ ನಾಸತ್ಯದಸ್ರೌ ಕ್ರಮಶಃ ಪ್ರಸೂತಾಃ
॥೩.೨೭॥
ಬ್ರಹ್ಮನ ಕಣ್ಣಿಂದ
ಸೂರ್ಯ,
ಬ್ರಹ್ಮನ ಕಿವಿಯಿಂದ
ಚಂದ್ರ,
ಬ್ರಹ್ಮನ ಚರ್ಮದಿಂದ
ಧರ್ಮ,
ಇದವರ ಹುಟ್ಟಿನ
ಮರ್ಮ.
ನಾಲಿಗೆಯಿಂದ
ಹುಟ್ಟಿದವ ಅವ ವರುಣ,
ಮೂಗಹೊರಳೆಯಿಂದ
ಅಶ್ವೀದೇವತೆಗಳಾಗಮನ.
ತತಃ ಸನಾದ್ಯಾಶ್ಚ ಮರೀಚಿಮುಖ್ಯಾ ದೇವಾಶ್ಚ ಸರ್ವೇ ಕ್ರಮಶಃ ಪ್ರಸೂತಾಃ
।
ತತೋsಸುರಾದ್ಯಾ ಋಷಯೋ ಮನುಷ್ಯಾ ಜಗದ್ ವಿಚಿತ್ರಂ ಚ ವಿರಿಞ್ಚತೋsಭೂತ್
॥೩.೨೮॥
ಆಮೇಲೆ ಸನಕ ಸನಂದನ
ಮೊದಲಾದವರ ಜನನ,
ಪ್ರವಹ ವಾಯು
ಮೊದಲಾದ ದೇವತೆಗಳ ಆಗಮನ.
ಬಳಿಕ ಅಸುರ ಋಷಿ
ಮನುಷ್ಯರ ಸೃಷ್ಟಿ,
ಹುಟ್ಟಿತು
ವಿಚಿತ್ರವಾದ ಪ್ರಪಂಚವೂ ಸಮಷ್ಟಿ.
[Contributed by Shri Govind
Magal]
No comments:
Post a Comment
ಗೋ-ಕುಲ Go-Kula