ಅಥೋ ವಿಧಾತುರ್ಮುಖತೋ ವಿನಿಃಸೃತಾನ್ ವೇದಾನ್ ಹಯಾಸ್ಯೋ ಜಗೃಹೇsಸುರೇನ್ದ್ರಃ
।
ನಿಹತ್ಯ ತಂ ಮತ್ಸ್ಯವಪುರ್ಜುಗೋಪ ಮನುಂ ಮುನೀಂಸ್ತಾಂಶ್ಚ ದದೌ ವಿಧಾತುಃ
॥೩.೪೦॥
ಬಳಿಕ ಹೊರಟಿತು
ಬ್ರಹ್ಮನ ಮುಖದಿಂದ ವೇದಧಾರ,
ಅದಾಯಿತು
ಹಯಗ್ರೀವನೆಂಬ ಅಸುರನಿಂದ ಅಪಹಾರ.
ಮತ್ಸ್ಯಾವತಾರಿ
ಹರಿಯಿಂದ ಆಯಿತು ಅಸುರನ ಸಂಹಾರ,
ಮನು ಮುನಿಗಳ
ರಕ್ಷಿಸಿ ವೇದಗಳ ಬ್ರಹ್ಮಗೆ ಇತ್ತ ಶೂರ.
ವೇದಗಳ
ಅಪಹಾರವೆಂದರೆ ಅಭಿಮಾನಿ ದೇವತೆಗಳ ಅಪಹಾರ,
ವೇದವೇದ್ಯ
ಭಗವಂತನಿಂದ ರಕ್ಕಸ ಸಂಹಾರ-ಸೂಕ್ತ ಪರಿಹಾರ.
ಮನ್ವನ್ತರಪ್ರಳಯೇ ಮತ್ಸ್ಯರೂಪೋ ವಿದ್ಯಾಮದಾನ್ಮನವೇ ದೇವದೇವಃ ।
ವೈವಸ್ವತಾಯೋತ್ತಮಸಂವಿದಾತ್ಮಾ ವಿಷ್ಣೋಃ ಸ್ವರೂಪಪ್ರತಿಪತ್ತಿರೂಪಾಮ್
॥೩.೪೧॥
ಚಾಕ್ಷುಷ ಮನ್ವಂತರದ
ಪ್ರಳಯ ಕಾಲದ ಸಂದರ್ಭ,
ಮತ್ಸ್ಯರೂಪಿ ಹರಿ
ದೇವತೆಗಳಿಗೆಲ್ಲಾ ಮೂಲಗರ್ಭ.
ವೈವಸ್ವತ ಮನುವಿಗೆ
ತಿಳಿಸಿದ ವಿಷ್ಣು ಸ್ವರೂಪ,
ಉಪದೇಶಿಸುತ್ತಾ
ಹಚ್ಚಿದ ಶಾಸ್ತ್ರ ಜ್ಞಾನದ ದೀಪ.
[Contributed by Shri Govind
Magal]
No comments:
Post a Comment
ಗೋ-ಕುಲ Go-Kula