ವ್ಯೂಹಾತ್ ತೃತೀಯಾತ್ ಪುನರೇವ ವಿಷ್ಣೋರ್ದೇವಾಂಶ್ಚತುರ್ವರ್ಣಗತಾನ್
ಸಮಸ್ತಾನ್ ।
ಸಙ್ಗೃಹ್ಯ ಬೀಜಾತ್ಮತಯಾsನಿರುದ್ಧೋ ನ್ಯಧತ್ತ
ಶಾನ್ತ್ಯಾಂ ತ್ರಿಗುಣಾತ್ಮಿಕಾಯಾಮ್ ॥೩.೧೫॥
ಇವರೆಲ್ಲರ
ಸೃಷ್ಟಿಯಾದ ಮೇಲೆ ಪ್ರದ್ಯುಮ್ನ ರೂಪದ ನಾರಾಯಣ,
ಆದ ನಾಕು
ವರ್ಣಾಭಿಮಾನಿ ದೇವತೆಗಳ ಸಂಗ್ರಹಕೆ ಕಾರಣ.
ಸೂಕ್ಷ್ಮ ರೂಪದ
ಅವರನ್ನು ಸ್ವಾಮಿ ಅನಿರುದ್ಧ,
ತ್ರಿಗುಣಾಭಿಮಾನಿ
ಶಾಂತಿಯಲ್ಲಿಡಲು ಆದ ಬದ್ಧ.
ಶಾಂತಿದೇವಿಯಲ್ಲಿ
ಬೀಜ ರೂಪದಿ ಇಟ್ಟ,
ತೋರಲು ದೇವತೆಗಳ
ಬಹುಜನ್ಮಗಳ ಗುಟ್ಟ.
ತತೋ ಮಹತ್ತತ್ತ್ವತನುರ್ವಿರಿಞ್ಚಃ ಸ್ಥೂಲಾತ್ಮನೈವಾಜನಿ ವಾಕ್ ಚ ದೇವೀ
।
ತಸ್ಯಾಮಹಙ್ಕಾರತನುಂ ಸ ರುದ್ರಂ ಸಸರ್ಜ ಬುದ್ಧಿಂ ಚ ತದರ್ಧದೇಹಾಮ್
॥೩.೧೬॥
ತದನಂತರ ಅನಿರುದ್ಧ
ಹಾಗೂ ಶಾಂತಿಯಿಂದ,
ಸ್ಥೂಲದೇಹದ
ಬ್ರಹ್ಮದೇವ ಮೈದಾಳಿ ಬಂದ.
ಚತುರ್ಮುಖ ಮಹತ್
ತತ್ವದ ಅಭಿಮಾನಿ,
ಸರಸ್ವತಿ
ಹುಟ್ಟಿದಳಾಗ ಆಗಿ ವಾಗಭಿಮಾನಿ.
ಸರಸ್ವತಿ ಮತ್ತು
ಬ್ರಹ್ಮದೇವರ ದಾಂಪತ್ಯದಿಂದ,
ಅಹಂಕಾರವೇ
ಶರೀರವಾಗಿ ರುದ್ರ ತಾನು ಬಂದ.
ರುದ್ರನ
ಅರ್ಧದೇಹವೆನಿಸಿಕೊಳ್ಳುವ ಬುದ್ಧಿ,
ಉಮೆಯಾಗಿ ಹುಟ್ಟು
ಪಡೆದದ್ದವಳ ಸಿದ್ಧಿ.
ಅಹಂಕಾರ ಎಂದರೆ
ನಾನು ಎನ್ನುವ ಆ ಪ್ರಜ್ಞೆ,
"ನಾನು-ಬುದ್ಧಿ" -ಗಂಡಹೆಂಡಿರಾಗಿ ಕೂಡಿರುವ ಸಂಜ್ಞೆ.[Contributed by Shri Govind Magal]
No comments:
Post a Comment
ಗೋ-ಕುಲ Go-Kula