ತತಃ ಪುಲಸ್ತ್ಯಸ್ಯ ಕುಲೇ ಪ್ರಸೂತೌ ತಾವಾದಿದೈತ್ಯೌ ಜಗದೇಕಶತ್ರೂ ।
ಪರೈರವಧ್ಯೌ ವರತಃ ಪುರಾ ಹರೇಃ ಸುರೈರಜೈಯೌ ಚ ವರಾದ್ ವಿಧಾತುಃ ॥೩.೫೨॥
ಆನಂತರ ಪುಲಸ್ತ್ಯ
ಕುಲದಲ್ಲಿ ಹುಟ್ಟಿದ ಆದಿದೈತ್ಯರು,
ಬ್ರಹ್ಮವರಬಲದಿಂದಾದರು
ಅವಧ್ಯರು ಅಜೇಯರು.
ಸರ್ವೈರಜೇಯಃ ಸ ಚ ಕುಮ್ಭಕರ್ಣಃ ಪುರಾತನೇ ಜನ್ಮನಿ ಧಾತುರೇವ ।
ವರಾನ್ನರಾದೀನೃತ ಏವ ರಾವಣಸ್ತದಾತನಾತ್ ತೌ ತ್ರಿದಶಾನಬಾಧತಾಮ್ ॥೩.೫೩॥
ಕುಂಭಕರ್ಣಗೆ
ಬ್ರಹ್ಮವರದಿಂದ ಅಜೇಯತ್ವದ ಪಟ್ಟ,
ರಾವಣನೂ ನರವಾನರ
ಬಿಟ್ಟು ಅಜೇಯನಾದ ಘಟ್ಟ.
ಇವರಿಬ್ಬರಿಂದಲೂ
ದೇವತೆಗಳಿಗೆ ಬಗೆ ಬಗೆಯ ಪೀಡಾಟ.
ತದಾsಬ್ಜಜಂ ಶೂಲಿನಮೇವ ಚಾಗ್ರತೋ ನಿಧಾಯ ದೇವಾಃ ಪುರುಹೂತಪೂರ್ವಕಾಃ ।
ಪಯೋಮ್ಬುಧೌ ಭೋಗಿಪಭೋಗಶಾಯಿನಂಸಮೇತ್ಯ ಯೋಗ್ಯಾಂ ಸ್ತುತಿಮಭ್ಯಯೋಜಯನ್
॥೩.೫೪॥
ರಾವಣ
ಕುಂಭಕರ್ಣರಿಂದ ಪೀಡಿತ ದೇವತಾವೃಂದ,
ಬ್ರಹ್ಮರುದ್ರಾದಿಗಳು
ಧಾವಿಸಿದರು ಶೇಷಶಾಯಿಯ ಮುಂದ.
ಕ್ಷೀರಸಾಗರದಲ್ಲಿ
ಶೇಷನ ಮೇಲೆ ಮಲಗಿದ್ದ ಶ್ರೀಹರಿ,
ದೇವಾನುದೇವತೆಗಳೆಲ್ಲ
ಹರಿಸಿದರು ಸ್ತೋತ್ರದ ಝರಿ.
[Contributed by Shri Govind
Magal]
No comments:
Post a Comment
ಗೋ-ಕುಲ Go-Kula