ತ್ವಯಾ ಪುರಾ ಕರ್ಣಪುಟಾದ್ ವಿನಿರ್ಮಿತೌ ಮಹಾಸುರೌ ತೌ ಮಧುಗಕೈಟಭಾಖ್ಯೌ
।
ಪ್ರಭಞ್ಜನಾವೇಶವಶಾತ್ ತವಾsಜ್ಞಯಾ ಬಲೋದ್ಧತಾವಾಶು
ಜಲೇ ವ್ಯವರ್ಧತಾಮ್ ॥೩.೫೮॥
ನೀನು ಹಿಂದೆ
ಕರ್ಣಪುಟದಿಂದ ಸೃಜಿಸಿದ ಮಧುಕೈಟಭರು,
ವಾಯುವಿನಾವೇಷದಿಂದ
ಬಲಾಢ್ಯರಾಗಿ ದೇವಪೀಡಕರಾದರು.
ನಿನ್ನಾಜ್ಞೆಯಂತೆಯೇ
ಬಲದರ್ಪದಿಂದ ಪ್ರಳಯ ಜಲದಿ ಪ್ರಬಲರಾದರು.
ತ್ವದಾಜ್ಞಯಾ ಬ್ರಹ್ಮವರಾದವಧ್ಯೌ ಚಿಕ್ರೀಡಿಷಾಸಮ್ಭವಯಾ ಮುಖೋದ್ಗತಾನ್
।
ಸ್ವಯಮ್ಭುವೋ ವೇದಗಣಾನಹಾರ್ಷತಾಂ ತದಾsಭವಸ್ತ್ವಂ ಹಯಶೀರ್ಷ
ಈಶ್ವರಃ ॥೩.೫೯॥
ನಿನ್ನಾಜ್ಞೆ
ಬ್ರಹ್ಮವರದಿಂದ ಅವಧ್ಯರಾದ ಮಧುಕೈಟಭರು,
ಬ್ರಹ್ಮಮುಖದಿಂದ
ಬಂದ ವೇದಾಭಿಮಾನಿಗಳ ಅಪಹರಿಸಿದರು.
ಅನಂತರೂಪಿ/ಅವತಾರಿಯಾದ
ನೀನಾದೆ ಆಗ ಹಯಗ್ರೀವದೇವರು.
ಆಹೃತ್ಯ ವೇದಾನಖಿಲಾನ್ ಪ್ರದಾಯ ಸ್ವಯಮ್ಭುವೇ ತೌ ಚ ಜಘನ್ಥ ದಸ್ಯೂ ।
ನಿಷ್ಪೀಡ್ಯ ತಾವೂರುತಳೇ ಕರಾಭ್ಯಾಂ ತನ್ಮೇದಸೈವಾsಶು ಚಕರ್ಥ
ಮೇದಿನೀಮ್ ॥೩.೬೦॥
ಅಪಹರಿಸಿದ ವೇದಗಳ
ಕಸಿದು ಬ್ರಹ್ಮಗಿತ್ತೆ,
ಕಳ್ಳರ
ತೊಡೆಯಲಿಟ್ಟು ತಾಡನದಿ ಅವರ ಜೀವ ಕಿತ್ತೆ.
ಅವರಿಂದ
ಸೆಳೆಯಲ್ಪಟ್ಟ ಮೇದಸ್ಸು,
ಮೇದಿನಿ
ಸೃಷ್ಟಿಗಾಯ್ತದು ರೇತಸ್ಸು.
ಏವಂ ಸುರಾಣಾಂ ಚ ನಿಸರ್ಗಜಂ ಬಲಂ ತಥಾsಸುರಾಣಾಂ ವರದಾನಸಮ್ಭವಮ್
।
ವಶೇ ತವೈತದ್ ದ್ವಯಮಪ್ಯತೋ ವಯಂ ನಿವೇದಯಾಮಃ ಪಿತುರೇವ ತೇsಖಿಲಮ್
॥೩.೬೧॥
ದೇವತೆಗಳಲ್ಲಿರುವ
ಸಹಜವಾದ ಬಲ,
ದೈತ್ಯರಲ್ಲಿ
ತುಂಬಿಕೊಂಡಿರುವ ವರ ಬಲ,
ಎರಡೂ ನಿನ್ನದೇ ವಶ-
ನೀನೇ ಕಾರಣ,
ತಂದೇ ನಿನಗೆ ವಂದನ
-ನಿನ್ನಲ್ಲೇ ನಿವೇದನ.
ಇಮೌ ಚ ರಕ್ಷೋಧಿಪತೀ ವರೋದ್ಧತೌ ಜಹಿ ಸ್ವವೀರ್ಯೇಣ ನೃಷು ಪ್ರಭೂತಃ ।
ಇತೀರಿತೇ ತೈರಖಿಲೈಃ ಸುರೇಶ್ವರೈರ್ಬಭೂವ ರಾಮೋ ಜಗತೀಪತಿಃ ಪ್ರಭುಃ
॥೩.೬೨॥
ಹಿರಣ್ಯಾಕ್ಷ
ಹಿರಣ್ಯಕಶಿಪುಗಳಾಗಿದ್ದಾರೆ ರಾವಣ ಕುಂಭಕರ್ಣ,
ವರಬಲದಿಂದ
ಅವಧ್ಯರಾದವರ ಅಟ್ಟಹಾಸವದು ಬಲು ದಾರುಣ.
ದೇವತೆಗಳು
ಪ್ರಾರ್ಥಿಸಿದರು ಹರಿಗೆ ತಾಳಲು ಮಾನವ ಜನ್ಮ,
ಪ್ರಾರ್ಥನೆಗೊಲಿದ
ನಾರಾಯಣನಾದ ದಶರಥ ಪುತ್ರ ರಾಮ.
[Contributed by
Shri Govind Magal]
No comments:
Post a Comment
ಗೋ-ಕುಲ Go-Kula