ಉಕ್ತಕ್ರಮಾತ್ ಪೂರ್ವಭವಸ್ತು ಯೋಯಃ ಶ್ರೇಷ್ಠಃ ಸಸ ಹ್ಯಾಸುರಕಾನೃತೇ ಚ
।
ಪೂರ್ವಸ್ತು ಪಶ್ಚಾತ್ ಪುನರೇವ ಜಾತೋ ನಾಶ್ರೇಷ್ಠತಾಮೇತಿ ಕಥಞ್ಚಿದಸ್ಯ
।
ಗುಣಾಸ್ತು ಕಾಲಾತ್ ಪಿತೃಮಾತೃದೋಷಾತ್ ಸ್ವಕರ್ಮತೋ ವಾsಭಿಭವಂ
ಪ್ರಯಾನ್ತಿ ॥೩.೨೯ ॥
ಕಾಶ್ಯಪಾದಿಗಳಿಂದ
ಸೃಷ್ಟಿಯಾಗುವ ಮೊದಲು,
ಹರಿ ಬ್ರಹ್ಮರಿಂದ
ಮೊದಲು ಹುಟ್ಟಿದವರೆಲ್ಲ ಮಿಗಿಲು.
ಮೊದಲು
ಹುಟ್ಟಿದವರಿಗೆಲ್ಲಾ ಸಹಜವಾಗಿ ಶ್ರೇಷ್ಠತೆ,
ಮರುಹುಟ್ಟು
ಪಡೆದಾಗಲೂ ಕುಂದದದು ಮಾನ್ಯತೆ.
ಕೆಲವೊಮ್ಮೆ
ದೇವತೆಗಳವತಾರಗಳಲ್ಲಿ ಕಾಣುವುದು ಕುಂದು ,
ಕಾಲ ಕೂಡಿ ಬಂದಾಗ
ಮೂಲ ಅಭಿವ್ಯಕ್ತವಾಗುತ್ತದೆ ಮುಂದು.
ಸ್ವಾಭಾವಿಕ ಗುಣಗಳು
ಕಾಲ ಪ್ರಭಾವದಿಂದ,
ತಂದೆ ತಾಯಿಯರಲ್ಲಿನ
ದೋಷಗಳಿಂದ,
ತನ್ನದೇ ಪ್ರಾರಬ್ಧ
ಕರ್ಮ ಫಲಗಳಿಂದ,
ಮಸುಕಾಗಿ ತೋರುವವು
ಮೇಲಿನ ಕಾರಣಗಳಿಂದ.
ಸೂಕ್ತ ಕಾಲದಿ
ಪ್ರಕಟ ಅವು ಮೂಲ ಶಕ್ತಿಯಿಂದ.
ಲಯೋ ಭವೇದ್ ವ್ಯುತ್ ಕ್ರಮತೋ ಹಿ ತೇಷಾಂ ತತೋ ಹರಿಃ ಪ್ರಳಯೇ
ಶ್ರೀಸಹಾಯಃ ।
ಶೇತೇ ನಿಜಾನನ್ದಮಮನ್ದಸಾನ್ದ್ರಸನ್ದೋಹಮೇಕೋsನುಭವನ್ನನನ್ತಃ
॥೩.೩೦॥
ಗಮನಿಸಬೇಕಿಲ್ಲಿ
ಲಯದ ವಿಧಾನ,
ಮೊದಲು ಹುಟ್ಟಿದವರ
ಲಯ ನಿಧಾನ.
ಕಡೆಗೆ
ಹುಟ್ಟಿದವರಿಗೆ ಮೊದಲು ಲಯ,
ಅವರ
ಹಿರಿಯರಾಗುತ್ತಾರವರಿಗೆ ಆಲಯ.
ಹೀಗಾಗಿ ತಮಗಿಂತ
ಹಿರಿಯರಲ್ಲಿ ಕಿರಿಯರ ಪ್ರವೇಶ,
ಎಲ್ಲರನೂ
ಹೊತ್ತುಳಿವ ನಾರಾಯಣನೆಂಬುದು ವಿಶೇಷ.
ಅನನ್ತಶೀರ್ಷಾಸ್ಯಕರೋರುಪಾದಃ ಸೋsನನ್ತಮೂರ್ತಿಃ ಸ್ವಗುಣಾನನನ್ತಾನ್
।
ಅನನ್ತಶಕ್ತಿಃ ಪರಿಪೂರ್ಣಭೋಗೋ ಭುಞ್ಜನ್ನಜಸ್ರಂ ನಿಜರೂಪ ಆಸ್ತೇ
॥೩.೩೧॥
ಎಣಿಸಲೇ ಆಗದಷ್ಟು
ಅಸಂಖ್ಯ ತಲೆ,
ಮುಖ ಕೈ ಕಾಲು
ಹೊತ್ತ ವಿಶೇಷ ಕಲೆ.
ಗುಣ ರೂಪ ಶಕ್ತಿ
ಎಲ್ಲದರಲ್ಲೂ ಅನಂತನಾತ,
ಅನುಭವಿಸುತ್ತಿರುತ್ತಾನೆ ಪೂರ್ಣಾನಂದವನಾತ.
[Contributed by
Shri Govind Magal]
No comments:
Post a Comment
ಗೋ-ಕುಲ Go-Kula