ಇತ್ಯಾದ್ಯನನ್ತವಾಕ್ಯಾನಿ ಸನ್ತ್ಯೇವಾರ್ಥೇ ವಿವಕ್ಷಿತೇ ।
ಕಾನಿಚಿದ್ ದರ್ಶಿತಾನ್ಯತ್ರ ದಿಙ್ ಮಾತ್ರಪ್ರತಿಪತ್ತಯೇ ॥೨.೧೬೯॥
ಹೀಗೆ ಮಹಾಭಾರತದಲ್ಲಿವೆ ಅನೇಕಾನೇಕ ವಾಕ್ಯ,
ಕೆಲವನ್ನು ಎತ್ತಿತೋರಿಸಿ ನಿಮಗಾಗಿಸಿದ್ದೇನೆ ಶಕ್ಯ.
ತಸ್ಮಾದುಕ್ತಕ್ರಮೇಣೈವ ಪುರುಷೋತ್ತಮತಾ ಹರೇಃ ।
ಅನೌಪಚಾರಿಕೀ ಸಿದ್ಧಾ ಬ್ರಹ್ಮತಾ ಚ ವಿನಿರ್ಣಯಾತ್ ॥೨.೧೭೦॥
ಸಿದ್ಧವಾಗುತ್ತದೆ ಪರಮಾತ್ಮನ ಪುರುಷೋತ್ತಮತ್ವ,
ಸಾಕ್ಷಾತ್ ಪರಬ್ರಹ್ಮಸ್ವರೂಪನೆಂಬ ಅಮೂಲ್ಯ ತತ್ವ.
ಪೂರ್ಣಪ್ರಜ್ಞಕೃತೇಯಂ ಸಙ್ಕ್ಷೇಪಾದುದ್ಧೃತಿಃ ಸುವಾಕ್ಯಾನಾಮ್ ।
ಶ್ರೀಮದ್ಭಾರತಗಾನಾಂ ವಿಷ್ಣೋಃ ಪೂರ್ಣತ್ವನಿರ್ಣಯಾಯೈವ ॥೨.೧೭೧॥
ಭಗವಂತನ ಪರಿಪೂರ್ಣತ್ವ ನಿರ್ಣಯದ ಕಾರಣ,
ಪೂರ್ಣಪ್ರಜ್ಞರಿಂದಾಗಿದೆ ಅನೇಕ ವಾಕ್ಯಗಳ ಉದ್ಧರಣ.
ಸ ಪ್ರೀಯತಾಂ ಪರತಮಃ ಪರಮಾದನನ್ತಃ ಸನ್ತಾರಕಃ ಸತತಸಂಸೃತಿದುಸ್ತರಾರ್ಣಾತ್
ಯತ್ಪಾದಪದ್ಮಮಕರನ್ದಜುಷೋ ಹಿ ಪಾರ್ಥಾಃ ಸ್ವಾರಾಜ್ಯಮಾಪುರುಭಯತ್ರ ಸದಾ ವಿನೋದಾತ್ ॥೨.೧೭೨॥
ಭಗವಂತನೊಬ್ಬನೇ ಎಲ್ಲರಿಗಿಂತ ಮಿಗಿಲು,
ದಾಟಿಸುವವನವನೇ ಸಂಸಾರದ ಕಡಲು,
ಅಂತಹಾ ಪರಮಾತ್ಮ ಹರಿಸಲಿ ಪ್ರೀತಿಯ ಹೊನಲು.
ಅವನ ಸೇವಿಸಿದ ಪಾಂಡವರು ಹೊಂದಿದರು ಇಹಪರದಲ್ಲಿ ಉನ್ನತ ಸ್ಥಾನ,
ಎಲ್ಲದರ ಸೂತ್ರಧಾರಿ ಸರ್ವಾಂತರ್ಯಾಮಿ ಪ್ರೀತನಾಗಲಿ ನಾರಾಯಣ.
॥ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯನಿರ್ಣಯೇ
ವಾಕ್ಯೋದ್ಧಾರೋ ನಾಮ ದ್ವಿತೀಯೋsಧ್ಯಾಯಃ॥
ಹೀಗೆ ಶ್ರೀಮದಾನಂದತೀರ್ಥರಿಂದ ಆದ,
ಶ್ರೀಮಹಾಭಾರತತಾತ್ಪರ್ಯ ನಿರ್ಣಯ ವಾದ,
ಎರಡನೇ ಅಧ್ಯಾಯ ನಾಮ ವಾಕ್ಯೋದ್ಧಾರ,
ಮಾಡಲ್ಪಡುತ್ತಿದೆ ಇಲ್ಲಿಗಿದರ ಉಪಸಂಹಾರ.
[Contributed by Shri Govind
Magal]
No comments:
Post a Comment
ಗೋ-ಕುಲ Go-Kula