Tuesday 30 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 162 - 168


 (ಮೊದಲು ಮುಖ್ಯಪ್ರಾಣ ಆನಂತರ ಭಾರತೀದೇವಿ ನಂತರ ಬಲರಾಮ,
ಇದನ್ನೇ ದೃಢಗೊಳಿಸುತ್ತಾರೆ ಆಚಾರ್ಯರು ಹೇಳಿ ತಾರತಮ್ಯದ ನೇಮ).
 ಯಸ್ಯಾಧಿಕೋ ಬಲೇ ನಾಸ್ತಿ ಭೀಮಸೇನಮೃತೇ ಕ್ವಚಿತ್ ।
ನ ವಿಜ್ಞಾನೇ ನಚ ಜ್ಞಾನ ಏಷ ರಾಮಃ ಸ ಲಾಙ್ಗಲೀ  ॥೨.೧೬೨॥

ಯಸ್ಯ ನ ಪ್ರತಿಯೋದ್ಧಾsಸ್ತಿ ಭೀಮಮೇಕಮೃತೇ ಕ್ವಚಿತ್ ।
ಅನ್ವಿಷ್ಯಾಪಿ ತ್ರಿಲೋಕೇಷು ಸ ಏಷ ಮುಸಲಾಯುಧಃ  ॥೨.೧೬೩॥
ಭಗವದ್ ವಿಜ್ಞಾನ ಜ್ಞಾನ ಬಲ ಎಲ್ಲದರಲ್ಲಿ,
ಭೀಮಸೇನಗೆ ಸಮ ಇನ್ನೊಬ್ಬ ಇಲ್ಲ ಅಲ್ಲಿ.
ಅವನ ನಂತರದ ಸ್ಥಾನ ಪಡೆದವನು (ಬಲರಾಮ)ಶೇಷ,
ಇಂತಹ ಸೂಕ್ಷ್ಮದ ತಾರತಮ್ಯದ ನೀತಿಗಳು ಆಚಾರ್ಯರ ವಿಶೇಷ.
ತಥಾ ಯುದಿಷ್ಠಿರೇಣೈವ ಭೀಮಾಯ ಸಮುದೀರಿತಮ್ ।
ಅನುಜ್ಞಾತೋ ರೌಹಿಣೇಯಾತ್ ತ್ವಯಾ ಚೈವಾಪರಾಜಿತ ।
ಸರ್ವವಿದ್ಯಾಸು ಬೀಭತ್ಸುಃ ಕೃಷ್ಣೇನ ಚ ಮಹಾತ್ಮನಾ  ॥೨.೧೬೪॥
ಅನ್ವೇಷ ರೌಹಿಣೇಯಂ ಚ ತ್ವಾಂ ಚ ಭೀಮಾಪರಾಜಿತಮ್ ।
ವೀರ್ಯೇ ಶೌರ್ಯೇsಪಿವಾ ನಾನ್ಯಸ್ತೃತೀಯಃ ಫಲ್ಗುನಾದೃತೇ ॥೨.೧೬೫॥
ವನಪರ್ವದಲ್ಲಿ ಧರ್ಮರಾಜ ಭೀಮಗೆ ಹೇಳುತ್ತಾನೆ,
ನೀನು ಬಲಭದ್ರನ ನಂತರ ಅರ್ಜುನ ಪರಿಣಿತನಿದ್ದಾನೆ.
ಭೀಮ ಬಲರಾಮನಿಗಿಂತ ಅರ್ಜುನನ ಸ್ಥಾನ ಕೊಂಚ ಕೆಳಗೆ,
ಅವರಿಬ್ಬರ ನಂತರ ಸವ್ಯಸಾಚಿಗೆ ಸಮರಿಲ್ಲ ಸಮಸ್ತ  ಸೈನ್ಯದೊಳಗೆ.
ತಥೈವ ದ್ರೌಪದೀವಾಕ್ಯಂ ವಾಸುದೇವಂ ಪ್ರತೀರಿತಮ್ ।
ಅಧಿಜ್ಯಮಪಿ ಯತ್ ಕರ್ತುಂ ಶಕ್ಯತೇ ನೈವ ಗಾಣ್ಡಿವಮ್ ।
ಅನ್ಯತ್ರ ಭೀಮಪಾರ್ಥಾಭ್ಯಾಂ ಭವತಶ್ಚ ಜನಾರ್ದನ ॥೨.೧೬೬॥
ವನಪರ್ವದಲ್ಲಿ ದ್ರೌಪದಿ ಶ್ರೀಕೃಷ್ಣಗೆ ಹೇಳುವ ಮಾತು,
ನೀನು ಭೀಮಾರ್ಜುನರನ್ನು ಬಿಟ್ಟರೆ ಯಾರಿಗಿದೆ ಗಾಂಡೀವ ಎತ್ತುವ ತಾಕತ್ತು.
ತಥೈವಾನ್ಯತ್ರ ವಚನಂ ಕೃಷ್ಣದ್ವೈಪಾಯನೇರಿತಮ್ ।
ದ್ವಾವೇವ ಪುರುಷೌ ಲೋಕೇ ವಾಸುದೇವಾದನನ್ತರೌ ।
ಭೀಮಸ್ತು ಪ್ರಥಮಸ್ತತ್ರ ದ್ವಿತೀಯೋ ದ್ರೌಣಿರೇವ ಚ ॥೨.೧೬೭॥
ಭಾರತದಲ್ಲಿ ವೇದವ್ಯಾಸರೇ ಮಾಡಿದ ಪ್ರಸ್ತಾಪ,
ಶ್ರೀಕೃಷ್ಣನ ನಂತರದ ವೀರಪುರುಷರು ಇಬ್ಬರಪ್ಪ.
ಮೊದಲನೆಯವ ಭೀಮ,
ಎರಡನೆಯವ ಅಶ್ವತ್ಥಾಮ.
(ಮೂಲದಲ್ಲಿ ಅರ್ಜುನ ಇಂದ್ರ,
ಮೂಲದಲ್ಲಿ ಅಶ್ವತ್ಥಾಮ ರುದ್ರ.
ತಾರತಮ್ಯದಲ್ಲಿ ಎಂದೂ ರುದ್ರನೇ ಮೇಲು,
ಆದರೂ ತೋರಿದ್ದುಂಟು ರುದ್ರಗಾದಂತೆ ಸೋಲು).
ಅಕ್ಷಯಾವಿಷುಧೀ ದಿವ್ಯೇ ಧ್ವಜೋ ವಾನರಲಕ್ಷಣಃ
ಗಾಣ್ಡೀವಂ ಧನುಷಾಂ ಶ್ರೇಷ್ಠಂ ತೇನ ದ್ರೌಣೇರ್ವರೋsರ್ಜುನಃ ॥೨.೧೬೮॥
ಎಂದೂ ಖಾಲಿಯಾಗದ ಬತ್ತಳಿಕೆ,
ಹನುಮಂತ ಕೂತಿರುವ ಪತಾಕೆ,
ಶ್ರೇಷ್ಠ ಧನುಸ್ಸು ಗಾಂಡೀವದ ಇರುವಿಕೆ,
ಇವೆಲ್ಲಾ ಅರ್ಜುನಗೆ ಕೊಟ್ಟವು ಹೆಗ್ಗಳಿಕೆ.
(ಮುಖ್ಯವಾಗಿ ಸಾತ್ವಿಕ ಗುಣ ಕೃಷ್ಣನ ಸಾರಥ್ಯ,
ಲಭ್ಯವಾಯ್ತು  ರಕ್ಷಣೆ ಇಹ ಪರದಲ್ಲಿ ಆತಿಥ್ಯ).
[Contributed by Shri Govind Magal]

No comments:

Post a Comment

ಗೋ-ಕುಲ Go-Kula