Saturday 6 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 58 - 62

ಕೃಷ್ಣೋ ಯಜ್ಞೈರಿಜ್ಯತೇ ಸೋಮಪೂತೈಃ ಕೃಷ್ಣೋ ವೀರೈರಿಜ್ಯತೇ ವಿಕ್ರಮದ್ಭಿಃ ।
ಕೃಷ್ಣೋ ವನ್ಯೈರಿಜ್ಯತೇ ಸಮ್ಮೃಶಾನೈಃ ಕೃಷ್ಣೋ ಮುಕ್ತೈರಿಜ್ಯತೇ ವೀತಮೋಹೈಃ ॥೨.೫೮॥

ಶ್ರೀಕೃಷ್ಣ ಸೋಮರಸವನ್ನೊಳಗೊಂಡ ಯಜ್ಞಗಳಿಂದ ಪೂಜಿತ,
ಪರಾಕ್ರಮೀ ವೀರಕ್ಷತ್ರಿಯರ  ಯುದ್ಧಯಜ್ಞಗಳಿಂದ ಪೂಜಿತ,
ಶಾಸ್ತ್ರಶೀಲ ವಾನಪ್ರಸ್ಥರು ಹಾಗೂ ಸನ್ಯಾಸಿಗಳಿಂದ ಜ್ಞಾನಯಜ್ಞದಿ ಪೂಜಿತ,
ಮೋಹರಹಿತ ಮುಕ್ತರಿಂದಲೂ ವೇದಗಾನ ಪುರಾಣ ಯಜ್ಞಗಳಿಂದ ಪೂಜಿತ .

ಸೃಷ್ಟಾ ಬ್ರಹ್ಮಾದಯೋ ದೇವಾ ನಿಹತಾ ಯೇನ ದಾrt5edನವಾಃ ।
ತಸ್ಮೈ ದೇವಾದಿದೇವಾಯ ನಮಸ್ತೇ ಶಾರ್ಙ್ಗಧಾರಿಣೇ ॥೨.೫೯॥

ಯಾರಿಂದ ಆಯಿತೋ ಬ್ರಹ್ಮಾದಿ ದೇವತೆಗಳ ಸೃಷ್ಟಿ,
ಯಾರಿಂದ ಆಯಿತೋ ದಾನವರ ಸಂಹಾರ ಸಮಷ್ಟಿ,
ಅಂಥಾ ದೇವ-ದೇವತೆಗಳ ದೇವ ಮಹಾಧನುರ್ಧರ,
ಲೋಕದಾಟದ ಸೂತ್ರಧಾರ ನಿನಗೆ ನಮ್ರ ನಮಸ್ಕಾರ.
 
ಸ್ರಷ್ಟೃತ್ವಂ ದೇವಾನಾಂ ಮುಕ್ತಿಸ್ರಷ್ಟೃತ್ವಮುಚ್ಯತೇ ನಾನ್ಯತ್ ।
ಉತ್ಪತ್ತಿರ್ದೈತ್ಯಾನಾಮಪಿ ಯಸ್ಮಾತ್ ಸಮ್ಮಿತಾ ವಿಶೇಷೋsಯಮ್ ॥೨.೬೦॥

ಅಥ ಚ ದೈತ್ಯಹತಿಸ್ತಮಸಿ ಸ್ಥಿರಾ ನಿಯತಸಂಸ್ಥಿತಿರೇವ ನಚಾನ್ಯಥಾ ।
ತನುವಿಭಾಗಕೃತಿಃ ಸಕಲೇಷ್ವಿಯಂ ನಹಿ ವಿಶೇಷಕೃತಾ ಸುರದೈತ್ಯಗಾ ॥೨.೬೧॥

ತಮಿಮಮೇವ ಸುರಾಸುರಸಞ್ಚಯೇ ಹರಿಕೃತಂ ಪ್ರವಿಶೇಷಮುದೀಕ್ಷಿತುಮ್ ।
ಪ್ರತಿವಿಭಜ್ಯ ಚ ಭೀಮಸುಯೋಧನೌ ಸ್ವಪರಪಕ್ಷಭಿದಾ ಕಥಿತಾ ಕಥಾ ॥೨.೬೨॥

ಬ್ರಹ್ಮಾದಿ ದೇವತೆಗಳ ಸೃಷ್ಟಿ ಮಾಡಿದ ತಾತ,
ದೈತ್ಯ ದಾನವರೆಲ್ಲ ಇವನಿಂದ ಆದರು ಹತ,
ಎಲ್ಲವೂ ಅವನಿಂದಲೇ ಆಗುವ ವ್ಯಾಪಾರ,
ಅಂತಹಾ ದೇವಾಧಿದೇವ ಶ್ರೀಹರಿಗೆ ನಮಸ್ಕಾರ.

ದೇವತೆಗಳ ಸೃಷ್ಟಿ ಮಾಡುವುದೆಂದರೇನು?
ಪಾಲಿಸುವ ಸ್ವಭಾವಯೋಗ್ಯ ಮುಕ್ತಿಯ ಜೇನು!
ಸೃಜನೆಯೆಂದರೆ ದೇಹ ಕೊಡುವುದಷ್ಟೇ ಅಲ್ಲ,
ಆ ಕೆಲಸ ದೈತ್ಯರಿಗೂ ಸಮನಾಗಿ ಆಗಿದೆಯೆಲ್ಲ! .

ದೈತ್ಯರೆಲ್ಲರನ್ನು ಕೊಲ್ಲುವುದು ಎಂದರೇನು?,
ಅವರೆಲ್ಲರನೂ ಶಾಶ್ವತ ತಮಸ್ಸಿಗೆ ಹಾಕುವ ತಾನು!,
ದೇವ -ದಾನವರಿಬ್ಬರಿಗೂ ಉಂಟು ದೇಹವಿಯೋಗ,
ಅದರಲ್ಲಿ ಭಗವಂತಗಿಲ್ಲ ಕಿಂಚಿತ್ತೂ ದ್ವೇಷ ಅನುರಾಗ.

(ಭಾರತದ ಪದ ಶಬ್ದಾರ್ಥ ಗ್ರಹಣೆಯಲ್ಲಿ ಚತುರತೆಯದು ಆವಶ್ಯಕ,
ಸುರ-ದೈತ್ಯ ದೇವ-ದಾನವ ಎಂಬಲ್ಲಿ ಸಾತ್ವಿಕ-ತಾಮಸ ಎಂಬುದು ಪೂರಕ.)

ಮೂವತ್ತೆರಡು ಸಲ್ಲಕ್ಷಣಗಳ ಪರಮ ಸಾತ್ವಿಕ ಭೀಮಸೇನ,
ತದ್ವಿರುದ್ಧವಾಗಿ ಪರಮ ತಾಮಸ ರಾಕ್ಷಸನಾದ ದುರ್ಯೋಧನ,
ಬ್ರಹ್ಮಾಂಡ ಪಿಂಡಾಂಡಗಳೆರಡರಲ್ಲೂ ಇವರದೇ ನಿರಂತರ ಕದನ,
ಸತ್ಯ ಧರ್ಮ ತತ್ವ ಸಾತ್ವಿಕತೆಯಿರುವಲ್ಲಿ ಶ್ರೀಕೃಷ್ಣನ ಸಾರಥ್ಯ,
ತದ್ವಿರುದ್ಧವಾದ ತತ್ವಹೀನ ತಾಮಸರಲ್ಲಿ ಕಲಿಯದೇ ಪೌರೋಹಿತ್ಯ,
ಇದೆಲ್ಲದರಿಂದ ಸಿದ್ಧವಾಗುತ್ತದೆ ಭಗವಂತನ ಸರ್ವೋತ್ತಮತ್ವ,

ಹಾಗೆಯೇ ಸಾತ್ವಿಕ-ತಾಮಸರ ಸ್ವಭಾವ ನಡೆ ನುಡಿ ಗಮ್ಯಗಳ ತತ್ವ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula