ಅಶ್ವಮೇಧಃ
ಕ್ರತುಶ್ರೇಷ್ಠೋ ಜ್ಯೋತಿಃಶ್ರೇಷ್ಠೋ ದಿವಾಕರಃ ।
ಬ್ರಾಹ್ಮಣೋ
ದ್ವಿಪದಾಂ ಶ್ರೇಷ್ಠೋ ದೇವಶ್ರೇಷ್ಠಸ್ತು ಮಾರುತಃ ॥೨.೧೪೮॥
ಯಜ್ಞಗಳಲ್ಲಿಯೇ ಅಶ್ವಮೇಧವದು ಶ್ರೇಷ್ಠ,
ಬೆಳಕುಗಳಲ್ಲಿಯೇ ಸೂರ್ಯನವ ಶ್ರೇಷ್ಠ.
ಮನುಷ್ಯರಲ್ಲಿ ಶ್ರೇಷ್ಠ ಬ್ರಹ್ಮಜ್ಞಾನಿಯಾದ ಬ್ರಾಹ್ಮಣ,
ದೇವತೆಗಳಲ್ಲಿ ಶ್ರೇಷ್ಠನಾದವ ಅವ ಮುಖ್ಯಪ್ರಾಣ.
ಬಲಮಿನ್ದ್ರಸ್ಯ
ಗಿರಿಶೋ ಗಿರಿಶಸ್ಯ ಬಲಂ ಮರುತ್ ।
ಬಲಂ ತಸ್ಯ
ಹರಿಃ ಸಾಕ್ಷಾನ್ನ ಹರೇರ್ಬಲಮನ್ಯತಃ ॥೨.೧೪೯॥
ಇಂದ್ರನಿಗಿಂತ ಬಲವಂತ (ಗಿರೀಶ)ತತ್ಪುರುಷ,
ಗಿರೀಶಗಿಂತ ಬಲವಂತನವ ಮುಖ್ಯಪ್ರಾಣೇಶ.
ಮುಖ್ಯಪ್ರಾಣನಿಗಿಂತ ಬಲವಂತನವ ಶ್ರೀಶ.
ಹರಿಗೆ ಸಮ-ಮಿಗಿಲು ಅಂತ ಇನ್ನೊಬ್ಬನಿಲ್ಲ,
ನಂತರದ ಸ್ಥಾನ ಮುಖ್ಯಪ್ರಾಣನೆಂಬ ಮಲ್ಲ.
ವಾಯುರ್ಭೀಮೋ
ಭೀಮನಾದೋ ಮಹೌಜಾಃ ಸರ್ವೇಷಾಂ ಚ ಪ್ರಾಣಿನಾಂ ಪ್ರಾಣಭೂತಃ ।
ಅನಾವೃತ್ತಿರ್ದೇಹಿನಾಂ
ದೇಹಪಾತೇ ತಸ್ಮಾದ್ ವಾಯುರ್ದೇವದೇವೋ ವಿಶಿಷ್ಟಃ ॥೨.೧೫೦॥
ಮುಖ್ಯಪ್ರಾಣನು ದುರ್ಜನರಿಗೆ ಭಯಂಕರ,
ಭಾರೀ ಘರ್ಜನೆಯ ಶಕ್ತಿಶಾಲಿ ಅಪ್ರತಿಮವೀರ.
ಎಲ್ಲರಿಗೂ ಉಸಿರನೀವ ಜೀವದಾತ-ಮಹಿಮಾವಂತ,
ಅವ ಹೊರನಡೆದರೆ ಎಲ್ಲ ದೇಹಿಗಳ ದೇಹಪಾತ,
ದೇವತೆಗಳಲ್ಲಿ ಹಿರಿಯ ಶ್ರೇಷ್ಠ ಮುಖ್ಯಪ್ರಾಣನಾತ.
ತತ್ತ್ವಜ್ಞಾನೇ
ವಿಷ್ಣುಭಕ್ತೌ ಧೈರ್ಯೇ ಸ್ಥೈರ್ಯೇ ಪರಾಕ್ರಮೇ ।
ವೇಗೇ ಚ
ಲಾಘವೇ ಚೈವ ಪ್ರಲಾಪಸ್ಯ ಚ ವರ್ಜನೇ ॥೨.೧೫೧॥
ಭೀಮಸೇನಸಮೋ
ನಾಸ್ತಿ ಸೇನಯೋರುಭಯೋರಪಿ ।
ಪಾಞ್ಡಿತ್ಯೇಚ
ಪಟುತ್ವೇ ಚ ಶೂರತ್ವೇ ಚ ಬಲೇsಪಿ ಚ
॥೨.೧೫೨॥
ತತ್ವಜ್ಞಾನ ವಿಷ್ಣುಭಕ್ತಿ ಧೈರ್ಯ ಸ್ಥೈರ್ಯ ಪರಾಕ್ರಮ,
ವೇಗದಿ ನಿಪುಣ ಪ್ರಲಾಪಹೀನ ಭೀಮನಿಗಾರಿಲ್ಲ ಸಮ.
ಭೀಮಸೇನಗೆ ಸಮನಾದವ ಎರಡೂ ಸೈನ್ಯದಲ್ಲಿ ಯಾರೂ ಇಲ್ಲ,
ಅವ ಪಾಂಡಿತ್ಯ ಪಟುತ್ವ ಸಾಮರ್ಥ್ಯ ಶೂರತನ ಬಲದ ಮೂಲ.
[Contributed by
Shri Govind Magal]
No comments:
Post a Comment
ಗೋ-ಕುಲ Go-Kula