ನಾರಾಯಣಂ ಸುರಗುರುಂ ಜಗದೇಕನಾಥಂ
ಭಕ್ತಪ್ರಿಯಂ ಸಕಲಲೋಕನಮಸ್ಕೃತಂ ಚ ।
ತ್ರೈಗುಣ್ಯವರ್ಜಿತಮಜಂ ವಿಭುಮಾದ್ಯಮೀಶಂ
ವನ್ದೇ
ಭವಘ್ನಮಮರಾಸುರಸಿದ್ಧವನ್ದ್ಯಮ್॥ ೨.೫೪ ॥
ರಮಾ ಬ್ರಹ್ಮಾದಿಗಳಿಗೂ ಅವನೇ ಸ್ವಾಮಿ,
ಸಜ್ಜನರೊಂದಿಸುವ ಭಕ್ತವತ್ಸಲನಾದ ಪ್ರೇಮಿ,
ತ್ರಿಗುಣಾತೀತ ಜನನರಹಿತ ಸರ್ವಗುಣ ಪರಿಪೂರ್ಣ,
ಸೃಷ್ಟಿಕರ್ತ ಸರ್ವಶಕ್ತ ಮುಕ್ತಿದಾತ ಅವ ನಾರಾಯಣ,
ಸಲ್ಲುತ್ತದವಗೆ ಎಲ್ಲ ದೇವತೆಗಳಿಂದಲೂ
ಪುರಸ್ಕಾರ,
ಇಂಥ ಅದ್ವಿತೀಯ ನಾರಾಯಣಗೆ ಎನ್ನ ನಮಸ್ಕಾರ.
ಜ್ಞಾನಪ್ರದಃ ಸ ಭಗವಾನ್
ಕಮಲಾವಿರಿಞ್ಚಶರ್ವಾದಿಪೂರ್ವಜಗತೋ ನಿಖಿಲಾದ್ ವರಿಷ್ಟಃ ।
ಭಕ್ತ್ಯೈವ ತುಷ್ಯತಿ ಹರಿಪ್ರವಣತ್ವಮೇವ
ಸರ್ವಸ್ಯ ಧರ್ಮ ಇತಿ ಪೂರ್ವವಿಭಾಗಸಂಸ್ಧಃ ॥ ೨.೫೫ ॥
ದೇವತೆಗಳಿಗೂ ಉಪದೇಶಕನಾಗಿರುವ ಭಗವಂತ,
ಇಡೀ ಜಗತ್ತಿಗೆ ಜ್ಞಾನವನ್ನು ಕೊಟ್ಟ ಅವ ಜ್ಞಾನದಾತ,
ಲಕ್ಷ್ಮ್ಯಾದಿ ತೃಣ ಜೀವರಿಗೂ ಒಡೆಯ ಜಗದೇಕನಾಥ,
ಶುದ್ಧ ಭಕ್ತಿಯಿಂದಲೇ ಪ್ರೀತನಾಗುವ ಭಕ್ತಪ್ರಿಯನಾತ,
ನಿರ್ವ್ಯಾಜ್ಯ ಅತಿಶಯ ಜ್ಞಾನಪೂರ್ವಕ ಪ್ರೀತಿಯೇ ಭಕ್ತಿ,
ಸರ್ವವಂದ್ಯ ಸರ್ವಮಾನ್ಯನಿಗೆ ಶರಣಾಗುವುದೇ ನೀತಿ.
ನಿರ್ದೋಷಕಃ ಸೃತಿವಿಹೀನ
ಉದಾರಪೂರ್ಣಸಂವಿದ್ಗುಣಃ ಪ್ರಥಮಕೃತ್ ಸಕಲಾತ್ಮಶಕ್ತಿಃ ।
ಮೋಕ್ಷೈಕಹೇತುರಸುರೂಪಸುರೈಶ್ಚ
ಮುಕ್ತೈರ್ವನ್ದ್ಯಃ ಸ ಏಕ ಇತಿಚೋಕ್ತಮಥೋತ್ತರಾರ್ಧೇ॥ ೨.೫೬ ॥
ಭಗವಂತ ಅವನು ಎಂದೂ ತ್ರೈಗುಣ್ಯವರ್ಜಿತ,
ತ್ರಿಗುಣಗಳಿಂದ ಸೃಷ್ಟನಾಗದ ದೋಷರಹಿತ,
ಸಂಸಾರ ರಹಿತ-- ಜ್ಞಾನಆನಂದಾದಿ ಭರಿತ,
ಅವನೇ ಎಲ್ಲದರ ಆದಿ ಸೃಷ್ಟಿಕರ್ತ,
ನಾಶಕಾರಕ --ಹಾಗೇ ಮುಕ್ತಿದಾತ,
ಸಮಸ್ತ ದೇವತೆಗಳಿಂದ ಅವನಿಗೆ ವಂದನ,
ಅಂಥ ಸರ್ವಶಕ್ತ ನಾರಾಯಣಗೆ ಎನ್ನ ನಮನ.
ನಮ್ಯತ್ವಮುಕ್ತಮುಭಯತ್ರ ಯತಸ್ತತೋsಸ್ಯ ಮುಕ್ತೈರಮುಕ್ತಿಗಗಣೈಶ್ಚ ವಿನಮ್ಯತೋಕ್ತಾ ।
ಇತ್ಥಂ ಹಿ ಸರ್ವಗುಣಪೂರ್ತಿರಮುಷ್ಯ
ವಿಷ್ಣೋಃ ಪ್ರಸ್ತಾವಿತಾ ಪ್ರಥಮತಃ ಪ್ರತಿಜಾನತೈವ ॥೨.೫೭॥
ಮೇಲೆ ನೋಡಿದ ಮಹಾಭಾರತದ ಮಂಗಳ ಶ್ಲೋಕ,
ಸ್ಪಷ್ಟವಾಗಿದೆ -"ದೇವ ವಂದ್ಯ"- ನಮಿಸು ಎಂಬ ಪಾಕ,
ಮುಕ್ತರು ಅಮುಕ್ತರಿಬ್ಬರಿಗೂ ದೇವನವ ಆರಾಧ್ಯ,
ಅವನ ಗುಣಪೂರ್ಣತ್ವ ವಂದ್ಯತ್ವವದು ಆಗಿದೆ ಸಿದ್ಧ,
ಮೊದಲ ಶ್ಲೋಕದಲ್ಲೇ ಆಗಿದೆ ಭಗವಂತನ ಗುಣಗಳ ಅನುಸಂಧಾನ,
ಗೀತಾಯುಕ್ತ ಇಡೀ ಮಹಾಭಾರತವೇ ಮಾಡುತ್ತಿದೆ ಅವನ ಗುಣಗಾನ.
[Contributed by Shri Govind
Magal]
No comments:
Post a Comment
ಗೋ-ಕುಲ Go-Kula