Sunday, 21 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 127 -128

‘ಕ್ವಚಿಚ್ಛಿವಂ ಕ್ವಚಿದೃಷೀನ್ ಕ್ವಚಿದ್ ದೇವಾನ್ ಕ್ವಚಿನ್ನರಾನ್ ।
‘ನಮತ್ಯರ್ಚಯತಿ ಸ್ತೌತಿ ವರಾನರ್ಥಯತೇsಪಿಚ ॥೨.೧೨೭॥

‘ಲಿಙ್ಗಂ ಪ್ರತಿಷ್ಠಾಪಯತಿ ವೃಣೋತ್ಯಸುರತೋ ವರಾನ್ ।
‘ಸರ್ವೇಶ್ವರಃ ಸ್ವತನ್ತ್ರೋsಪಿ ಸರ್ವಶಕ್ತಿಶ್ಚ ಸರ್ವದಾ ।
‘ಸರ್ವಜ್ಞೋsಪಿ ವಿಮೋಹಾಯ ಜನಾನಾಂ ಪುರುಷೋತ್ತಮಃ’ ॥೨.೧೨೮॥

ಅವತಾರಗಳಲ್ಲಿ ಪರಮಾತ್ಮನ ಕೆಲವೊಂದು ಆಟ,
ಶಿವ ಋಷಿ ದೇವತೆಗಳನ್ನು ಪೂಜಿಸುವ ನೋಟ.
ಕೆಲವೊಮ್ಮೆ ಮನುಷ್ಯರ ಪೂಜೆ ಮಾಡುತ್ತಾನೆ,
ನಮಸ್ಕರಿಸುತ್ತಾ ಅತಿ ನಮ್ರನಾಗಿ ಸ್ತುತಿಸುತ್ತಾನೆ.

ಮಾಡಿದ್ದಾನೆ ಲಿಂಗ ಪ್ರತಿಷ್ಠಾಪನೆ,
ಮಾಡಿದ್ದಾನೆ ಅಸುರರಲ್ಲಿ ವರಯಾಚನೆ.
ಸರ್ವಶಕ್ತ ಸರ್ವಜ್ಞ ಎಲ್ಲದರ ಧಣಿ ಸರ್ವಸ್ವತಂತ್ರ,
ಅವನು ಮಾಡುವ ದುರ್ಜನಮೋಹ ನಾಟಕ ತಂತ್ರ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula