Tuesday 2 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 46 - 50

ಪ್ರಾದುರ್ಭಾವದ್ವಯೇ ಹ್ಯಸ್ಮಿನ್ ಸರ್ವೇಷಾಂ ನಿರ್ಣಯಃ ಕೃತಃ ।
ನೈತಯೋರಕೃತಂ ಕಿಞ್ಚಿಚ್ಛುಭಂ ವಾ ಯದಿವಾsಶುಭಮ್ ।
ಅನ್ಯತ್ರ ಪೂರ್ಯತೇ ಕ್ವಾಪಿ ತಸ್ಮಾದತ್ರೈವ ನಿರ್ಣಯಃ ॥೨.೪೬॥

ಕೃಷ್ಣಾವತಾರ ಮತ್ತು ರಾಮಾವತಾರದ ಕಾಲದಲ್ಲಿ,
ದೇವತೆಗಳ ಸ್ವರೂಪ ನಿರ್ಣಯ ಮಾಡಲ್ಪಟ್ಟಿದೆಯಿಲ್ಲಿ,
ಈ ನಿರ್ಣಯ ಬೇರೆ ಭಗವದವತಾರಗಳಲ್ಲಿ ಕಾಣಸಿಗುವುದಿಲ್ಲ ಎಂಬ ಸತ್ಯ,
ರಾಮ ಕೃಷ್ಣಾವತಾರದಲ್ಲಿ ಸ್ವರೂಪ ಮೀಮಾಂಸೆ ಸ್ಪಷ್ಟಪಡಿಸಲ್ಪಟ್ಟಿದೆ ಅದು ನಿತ್ಯ.

ಪಶ್ಚಾತ್ತನತ್ವಾತ್ ಕೃಷ್ಣಸ್ಯ ವೈಶೇಷ್ಯಾತ್ ತತ್ರ ನಿರ್ಣಯಃ ।
ಪ್ರಾದುರ್ಭಾವಮಿಮಂ ಯಸ್ಮಾದ್ ಗೃಹೀತ್ವಾ ಭಾರತಂ ಕೃತಮ್ ॥೨.೪೭॥

ರಾಮಾವತಾರದ ನಂತರ ಬರುವುದು ಕೃಷ್ಣಾವತಾರ,
ಮಹಾಭಾರತದಲ್ಲೇ ಆಗುವುದು ದೇವತಾಸ್ವರೂಪ ಸಾಕಾರ,
ರಾಮಾವತಾರದಲ್ಲಿ ಸಿಗುವುದಿಲ್ಲ ದೇವತಾಸ್ವರೂಪಗಳ ನಿರ್ಣಯ ಸಂಪೂರ್ಣ,
ಹಾಗಾಗಿ ವ್ಯಾಸರು ಕೊಟ್ಟಿದ್ದಾರೆ ವಿಶ್ಲೇಷಿಸಿ  ಸ್ವರೂಪಗಳ ನಿರ್ಣಯ ಪರಿಪೂರ್ಣ.

ಆಗದಿದ್ದರೆ ದೇವತೆಗಳ ತಾರತಮ್ಯದ ಸ್ಪಷ್ಟ ಜ್ಞಾನ,
ಅದಿಲ್ಲದೇ ಪ್ರಾರಂಭವಾಗೋಲ್ಲ ಮೋಕ್ಷದ ಯಾನ,
ತಿಳಿಯಬೇಕಾದರೆ ದೇವನೆಷ್ಟು ಶಕ್ತಿವಂತ ಗುಣವಂತ ಸರ್ವವ್ಯಾಪ್ತ,
ಅದಕೆಂದೇ ತೆರೆದಿಟ್ಟಿದೆ ದೇವತಾ ತಾರತಮ್ಯಗಳನ್ನು ಮಹಾಭಾರತ.

ಉಕ್ತಾ ರಾಮಕಥಾsಪ್ಯಸ್ಮಿನ್ ಮಾರ್ಕಣ್ಡೇಯಸಮಾಸ್ಯಯಾ ।
ತಸ್ಮಾದ್ ಯದ್ ಭಾರತೇ ನೋಕ್ತಂ ತದ್ಧಿ ನೈವಾಸ್ತಿ ಕುತ್ರಚಿತ್ ।
ಅತ್ರೋಕ್ತಂ ಸರ್ವಶಾಸ್ತ್ರೇಷು ನಹಿ ಸಮ್ಯಗುದಾಹೃತಮ್’ ॥೨.೪೮॥

ಇತ್ಯಾದಿ ಕಥಿತಂ ಸರ್ವಂ ಬ್ರಹ್ಮಾಣ್ಡೇ ಹರಿಣಾ ಸ್ವಯಮ್ ।
ಮಾರ್ಕಣ್ಡೇಯೇsಪಿ ಕಥಿತಂ ಭಾರತಸ್ಯ ಪ್ರಶಂಸನಮ್ ॥೨.೪೯॥

ದೇವತಾನಾಂ ಯಥಾ ವ್ಯಾಸೋ ದ್ವಿಪದಾಂ ಬ್ರಾಹ್ಮಣೋ ವರಃ ।
ಆಯುಧಾನಾಂ ಯಥಾ ವಜ್ರಮೋಷಧೀನಾಂ ಯಥಾ ಯವಾಃ ।
ತಥೈವ ಸರ್ವಶಾಸ್ತ್ರಾಣಾಂ ಮಹಾಭಾರತಮುತ್ತಮಮ್’ ॥೨.೫೦॥

ಮಹಾಭಾರತದ ಮಾರ್ಕಾಂಡೇಯರ ಪ್ರಸಂಗದಲ್ಲಿ,
ಶ್ರೀ ರಾಮನ ಕಥೆಯನ್ನೂ ವಿಸ್ತಾರಿಸಲ್ಪಟ್ಟಿದೆಯಲ್ಲಿ,
ದೇವತಾ ಸ್ವರೂಪ ನಿರ್ಣಯವಲ್ಲಿ ಆಗಿದೆ ಸಶೇಷ,
ಕೃಷ್ಣಸಾರಥ್ಯದ ಭಾರತದಲ್ಲಿ ಪೂರ್ಣವಾಗಿರುವುದು ವಿಶೇಷ.

ಕೃಷ್ಣಾವತಾರದಲ್ಲಿ ತಾನೇ ಮಾಡಿದ ಎಲ್ಲಾ ಲೀಲೆಗಳ ಗೀತಾಚಾರ್ಯ,
ಮಹಾಭಾರತದಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟದ್ದು ದ್ವೈಪಾಯನಾಚಾರ್ಯ,
ಮಹಾಭಾರತದಲ್ಲಿ ಹೇಳದೇ ಇದ್ದದ್ದು ಬೇರೆಲ್ಲಿಯೂ ಸಿಗಲ್ಲ,
ಇಲ್ಲಿ ಹೇಳಿದಷ್ಟು ಸಮರ್ಪಕವಾಗಿ ಬೇರಾವ ಶಾಸ್ತ್ರದಲ್ಲೂ ಹೇಳಿಲ್ಲ,
ಇದನ್ನೇ ಸ್ಪಷ್ಟಪಡಿಸುತ್ತದೆ ಬ್ರಹ್ಮಾಂಡ ಪುರಾಣ,
ಸ್ವತಃ ತಾನೇ ಹೇಳಿದ್ದಾನೆ ಶ್ರೀಮನ್ನಾರಾಯಣ.

ಹೇಳುತ್ತದೆ ಮಾರ್ಕಂಡೇಯ ಪುರಾಣ,
ಪರಮ ದೇವತಾಶೇಷ್ಠ -ನಾರಾಯಣ,
ದೇವತೆಗಳಲ್ಲಿ ವೇದವ್ಯಾಸರು ಶ್ರೇಷ್ಠ,
ಮನುಷ್ಯರಲ್ಲಿ ಬ್ರಹ್ಮಜ್ಞಾನಿ ಶ್ರೇಷ್ಠ,
ಆಯುಧಗಳಲ್ಲಿ ವಜ್ರಾಯುಧ ಶ್ರೇಷ್ಠ,
ಧಾನ್ಯಗಳಲ್ಲಿ ಜವೆಗೋಧಿ ಶ್ರೇಷ್ಠ,
ಶಾಸ್ತ್ರಗಳಲ್ಲಿ ಮಹಾಭಾರತ ಶ್ರೇಷ್ಠ,
[Contributed by Shri Govind Magal]



ಇದನ್ನೆಲ್ಲಾ ವ್ಯಾಸರೇ ಹೇಳಿದ್ದು ವಿಶಿಷ್ಟ.

No comments:

Post a Comment

ಗೋ-ಕುಲ Go-Kula