ತಸ್ಮಾದ್ ಯೋ
ಮಹಿಮಾ ವಿಷ್ಣೋಃ ಸರ್ವಶಾಸ್ತ್ರೋದಿತಃ ಸ ಹಿ ।
ನಾನ್ಯದಿತ್ಯೇಷ
ಶಾಸ್ತ್ರಾಣಾಂ ನಿರ್ಣಯಃ ಸಮುದಾಹೃತಃ ।
ಭಾರತಾರ್ಥಸ್ತ್ರಿಧಾ
ಪ್ರೋಕ್ತಃ ಸ್ವಯಂ ಭಗವತೈವ ಹಿ ॥೨.೧೨೯॥
ಮನ್ವಾದಿ
ಕೇಚಿತ್ ಬ್ರುವತೇ ಹ್ಯಾಸ್ತೀಕಾದಿ ತಥಾ ಪರೇ ।
ತಥೋಪರಿಚರಾದ್ಯನ್ಯೇ
ಭಾರತಂ ಪರಿಚಕ್ಷತೇ ॥೨.೧೩೦॥
ಆ ಕಾರಣದಿಂದ ಎಲ್ಲಾ ಶಾಸ್ತ್ರಗಳಲ್ಲಿ ಹೇಳಿದ ಪ್ರಮೇಯ,
ಮಹಾಮಹಿಮಾವಂತನಾದ ವಿಷ್ಣು ಒಬ್ಬನೇ ಅಪ್ರಮೇಯ.
ಅದಕ್ಕೆ ತದ್ವಿರುದ್ಧವಾದದ್ದೆಲ್ಲವೂ ಅಲ್ಲ ಸ್ವೀಕಾರಾರ್ಹ,
ಮೂರು ಬಗೆಯಲ್ಲಿ ಹೇಳಲ್ಪಟ್ಟಿದೆ ಭಾರತದ ಆಂತರ್ಯ.
ಕೆಲವರ ಪ್ರಕಾರ ಭಾರತ ಮನುವಿನ ಕಥೆಯಿಂದ ಆರಂಭ,
ಮತ್ತೆ ಕೆಲವರ ಪ್ರಕಾರ ಆಸ್ತೀಕನ ಕಥೆಯಿಂದ ಪ್ರಾರಂಭ,
ಉಳಿದವರಿಗೆ ಉಪರಿಚರ ವಸು ಕಥೆಯಿಂದ ಆರಂಭ.
‘ಸಕೃಷ್ಣಾನ್
ಪಾಣ್ಡವಾನ್ ಗೃಹ್ಯ ಯೋsಯಮರ್ಥಃ ಪ್ರವರ್ತತೇ ।
‘ಪ್ರಾತಿಲೋಮ್ಯಾದಿವೈಚಿತ್ರ್ಯಾತ್
ತಮಾಸ್ತೀಕಂ ಪ್ರಚಕ್ಷತೇ ॥೨.೧೩೧॥
‘ಧರ್ಮೋ
ಭಕ್ತ್ಯಾದಿದಶಕಃ ಶ್ರುತಾದಿಃ ಶೀಲವೈನಯೌ ।
‘ಸಬ್ರಹ್ಮಕಾಸ್ತು
ತೇ ಯತ್ರ ಮನ್ವಾದಿಂ ತಂ ವಿದುರ್ಬುಧಾಃ ॥೨.೧೩೨॥
‘ನಾರಾಯಣಸ್ಯ
ನಾಮಾನಿ ಸರ್ವಾಣಿ ವಚನಾನಿ ತು ।
‘ತತ್ಸಾಮರ್ಥ್ಯಾಭಿಧಾಯೀನಿ
ತಮೌಪರಿಚರಂ ವಿದುಃ ॥೨.೧೩೩॥
ಕೃಷ್ಣ ಮೊದಲಾದ ಪಾಂಡವರ ಭೂಮಿಕೆ,
ಘಟನೆಗಳ ಹಿಂದು ಮುಂದು ಹಿಂದಾಗಿ ಹೋಲಿಕೆ.
ಈ ಶೈಲಿಯ ಐತಿಹಾಸಿಕ ಅರ್ಥ ಕೊಡುವುದು ಆಸ್ತೀಕ ಕಥೆಯೆಂಬ ವಾದ,
ಅಧ್ಯಯನ ಮಾಡುವವರಿಗೆ ಕೊಡುವುದು ದೈವಭಕ್ತ ಪಾಂಡವರ ಕಥಾನಾದ.
ಧರ್ಮ ಭಕ್ತಿ ಮುಂತಾದ ಹತ್ತು ಗುಣಗಳ ಕಾಣುವಿಕೆ,
ಶ್ರವಣ ಶೀಲ ವಿನಯ ವೇದ ವಿದ್ಯೆಗಳ ಪ್ರತಿಪಾದಿಸುವಿಕೆ,
ಮೇಲಿನ ರೀತಿಯ ಕಥೆ ಹೇಳುವುದು ಮನ್ವಾದಿಗಳು ಎಂಬ ತಿಳುವಳಿಕೆ.
ಇಲ್ಲಿ ಹೇಳುವುದೆಲ್ಲವೂ ನಾರಾಯಣ ನಾಮ,
ಧ್ವನಿಸುತ್ತದೆ ನಾರಾಯಣನವ ಗುಣಧಾಮ,
ಹೀಗೆ ಹೇಳುವ ಕಥೆ ಉಪರಿಚರಾದಿಗಳ ನೇಮ.
(ಮಹಾಭಾರತದಲ್ಲಿನ ಪ್ರಮುಖ ಏಳು ಪಾತ್ರ,
ತಿಳಿಸುತ್ತದೆ ತಾರತಮ್ಯೋಕ್ತ ಗುಣಗಳ ಸೂತ್ರ.
ಹದಿನಾರು ಜೀವನ್ಮೌಲ್ಯಗಳೊಂದಿಗೆ ಜೀವ,
ಒಲಿಸಿಕೊಳ್ಳಬೇಕು ಹದಿನೇಳನೇ ವೇದವಿದ್ಯೆಯ ಭಾವ.
ಹದಿನೇಳನೇ ವೇದವಿದ್ಯೆಯದು ಲಕ್ಷ್ಮೀ ಕೊಡುವ ಸತ್ವ,
ಹದಿನೆಂಟರ ಬಂಟನವ ಶ್ರಿಹರಿಯೆಂಬುದೇ ಮುಖ್ಯ ತತ್ವ).
[Contributed by Shri Govind
Magal]
No comments:
Post a Comment
ಗೋ-ಕುಲ Go-Kula