Sunday 28 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2:157 - 161


ವಚನಂ ವಾಸುದೇವಸ್ಯ ತಥೋದ್ಯೋಗಗತಂ ಪರಮ್ ।
ಯತ್ ಕಿಞ್ಚಾsತ್ಮನಿ ಕಲ್ಯಾಣಂ ಸಮ್ಭಾವಯಸಿ ಪಾಣ್ಡವ ।
ಸಹಸ್ರಗುಣಮಪ್ಯೇತತ್ ತ್ವಯಿ ಸಮ್ಭಾವಯಾಮ್ಯಹಮ್ ॥೨.೧೫೭॥

ಯಾದೃಶೇ ಚ ಕುಲೇ ಜಾತಃ ಸರ್ವರಾಜಾಭಿಪೂಜಿತೇ ।
ಯಾದೃಶಾನಿ ಚ ಕರ್ಮಾಣಿ ಭೀಮ ತ್ವಮಸಿ ತಾದೃಶಃ ॥೨.೧೫೮॥

ಅಸ್ಮಿನ್ ಯುದ್ಧೇ ಭೀಮಸೇನ ತ್ವಯಿ ಭಾರಃ ಸಮಾಹಿತಃ ।
ಧೂರರ್ಜುನೇನ ವೋಢವ್ಯಾ ವೋಢವ್ಯಾ ಇತರೋ ಜನಃ ।
ಉಕ್ತಂ ಪುರಾಣೇ ಬ್ರಹ್ಮಾಣ್ಡೇ ಬ್ರಹ್ಮಣಾ ನಾರದಾಯ ಚ ॥೨.೧೫೯॥

ಉದ್ಯೋಗಪರ್ವದಲ್ಲಿ ಶ್ರೀಕೃಷ್ಣನ ಮಾತು,
ಗಮನಾರ್ಹವಾದದ್ದದು ಭೀಮನ ಕುರಿತು.
ನಿನ್ನಲ್ಲಿರುವ ಸದ್ಗುಣಗಳ ಭಂಡಾರ,
ಸಾವಿರಪಟ್ಟು ಮಿಗಿಲದು ಎನ್ನ ಪ್ರಕಾರ.

ಯಾರ ಮಗ ಯಾವ ಕುಲ ಏನೇನು ನಿನ್ನ ಕಾರ್ಯ,
ನಿನ್ನೆತ್ತರದ ಕೆಲಸಗಳೇ ಮಾಪಗಳವು ಗಮನಾರ್ಹ.
ನಿನ್ನ ಕೆಲಸ ಕಾರ್ಯಗಳೆಂದೂ ತಾರಕ,
ಅದೇ ನಿನ್ನ ವ್ಯಕ್ತಿತ್ವಕ್ಕಾಗುತ್ತದೆ ನಿರ್ಣಾಯಕ.
ಅರ್ಜುನ ಯುದ್ಧದ ನೊಗ ಹೊತ್ತ ಸೈನಿಕ,
ನೀನೇ ಪ್ರತಿಕ್ಷಣ ಪ್ರತಿಯೊಂದರ ಪಾಲಕ.

ಯಸ್ಯಾಃ ಪ್ರಸಾದಾತ್ ಪರಮಂ ವಿದನ್ತಿ  ‘ಶೇಷಃ ಸುಪರ್ಣೋ ಗಿರಿಶಃ ಸುರೇನ್ದ್ರಃ ।
ಮಾತಾ ಚ ಯೈಷಾಂ ಪ್ರಥಮೈವ ಭಾರತೀ ‘ಸಾ ದ್ರೌಪದೀ ನಾಮ ಬಭೂವ ಭೂಮೌ ॥೨.೧೬೦॥

ಯಾ ಮಾರುತಾದ್ ಗರ್ಭಮಧತ್ತ ಪೂರ್ವಂ ‘ಶೇಷಂ ಸುಪರ್ಣಂ ಗಿರಿಶಂ ಸುರೇನ್ದ್ರಮ್ ।
ಚತುರ್ಮುಖಾಭಾಂಶ್ಚತುರಃ ಕುಮಾರಾನ್ ‘ಸಾ ದ್ರೌಪದೀ ನಾಮ ಬಭೂವ ಭೂಮೌ’ ॥೨.೧೬೧॥

ಬ್ರಹ್ಮಾಂಡ ಪುರಾಣದಲ್ಲಿ ಹೇಳಿದ ವಚನ,
ತಿಳಿಸುತ್ತದೆ ದ್ರೌಪದೀದೇವಿಯ ಸ್ಥಾನ ಮಾನ.
ಯಾರ ಅನುಗ್ರಹದಿ ಶೇಷ ಗರುಡ ಸದಾಶಿವ ಇಂದ್ರ,
ಪಡೆಯುವರು ಹರಿಮಹಾತ್ಮೆಯ ದಿವ್ಯ ಜ್ಞಾನ ಲಾಂದ್ರ.
ತಾಯಿ ಭಾರತಿಯೇ ಆಕೆ ಇವರಿಗೆಲ್ಲಾ ತೋರಿದ್ದು ಹಾದಿ,
ಇವರೆಲ್ಲರ ಹೆತ್ತ ಭಾರತಿಯೇ ಭೂಮಿಯಲ್ಲಾದಳು ದ್ರೌಪದಿ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula