Monday, 15 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 94 - 100

ದ್ವೌ ಭೂತಸರ್ಗೌ ಲೋಕೇsಸ್ಮಿನ್ ದೈವ ಆಸುರ ಏವ ಚ ।
ದೈವೋ ವಿಸ್ತರಶಃ ಪ್ರೋಕ್ತ ಆಸುರಂ ಪಾರ್ಥ ಮೇ ಶ್ರುಣು ॥೨.೯೪॥

ಅಸತ್ಯಮಪ್ರತಿಷ್ಠಂ ತೇ ಜಗದಾಹುರನೀಶ್ವರಮ್ ।
ಈಶ್ವರೋsಹಮಹಂ ಭೋಗೀ ಸಿದ್ಧೋsಹಂ ಬಲವಾನ್ ಸುಖೀ ॥೨.೯೫॥

ಮಾಮಾತ್ಮಪರದೇಹೇಷು ಪ್ರದ್ವಿಷನ್ತೋsಭ್ಯಸೂಯಕಾಃ ।
ತಾನಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರಾಧಮಾನ್ ।
ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು   ॥೨.೯೬॥

ಆಸುರೀಂ ಯೋನಿಮಾಪನ್ನಾ ಮೂಢಾ ಜನ್ಮನಿಜನ್ಮನಿ ।
ಮಾಮಪ್ರಾಪ್ಯೈವ ಕೌಂತೇಯ ತತೋ ಯಾಂತ್ಯಧಮಾಂ ಗತಿಮ್ ॥೨.೯೭॥

ಕೃಷ್ಣನೆನ್ನುತ್ತಾನೆ ಚೇತನರ ಸ್ವಭಾವದಲ್ಲಿ ದೈವೀಕ ಮತ್ತು ಆಸುರ,
ದೈವಸ್ವಭಾವ ಹೇಳಿಯಾಯ್ತು-ಈಗ ಕೇಳು ಆಸುರರ ಸ್ವಭಾವ ಸಾರ.

ಈ ಜಗತ್ತೆಂಬುದು ಅಸತ್ಯ,
ಕಾರ್ಯಕಾರಿ ಅಲ್ಲದ ಮಿಥ್ಯಾ,
ನೆಲೆಯೇ ಇಲ್ಲದ ಜಗತ್ತು,
ಆಧಾರ ಯಾರಿಲ್ಲ ಯಾವತ್ತು.

ದೇವರಿಲ್ಲ ನಿಯಾಮಕನಿಲ್ಲ ಏನೂ ಇಲ್ಲ,
ಬರೀ ಭ್ರಮೆಯ ಮಾಯಾಜಗತ್ತಿದು ಎಲ್ಲ,
ದುಷ್ಟ ಚಿತ್ತದವರ ಅಲ್ಪ ಬುದ್ಧಿಯವರ ವಾದ,
ಅವೈದಿಕ ಕರ್ಮ ಅಹಿತಕಾರರ ಕ್ರೂರ ನಾದ.

ನಾನೇ ಈಶ್ವರ -ನನ್ನ ಭೋಗಕ್ಕಾಗೇ ಇರುವ ಜಗತ್ತು,
ನಾನೇ ಬಲಶಾಲಿ ಧನಿಕ ಸಮಾನರಿಲ್ಲೆನಗೆ ಯಾವತ್ತು,
ಅಂತರ್ಯಾಮಿ ದೇವನ ನಂಬದ ರಾಕ್ಷಸಾವೇಶ,
ದೈವವ ಒಪ್ಪದ ಇನ್ನೊಬ್ಬರೇಳಿಗೆ ಸಹಿಸದ ದ್ವೇಷ .

ದ್ವೇಷ ಕ್ರೂರತನ ಅಮಂಗಲಕರ ನಡೆ ಅವರ ನೀತಿ,
ನಿಲ್ಲದ ಬವಣೆಯ ಹೀನಯೋನಿಗ್ಹಾಕುವುದೆನ್ನ ರೀತಿ,
ತಿಳಿಗೇಡಿಗಳಾಗಿ ರಕ್ಕಸರಾಗುವವರಿಗೆ-ಅಧೋಗತಿ,
ಕಡೆಯದಾಗಿ ಅಂಧಂತಮಸ್ಸೇ ಅವರಿಗಾಗುವ ಶಾಸ್ತಿ.

ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ ।
ಅವಿಭಕ್ತಂ ವಿಭಕ್ತೇಷು ತಜ್ಜ್ಞಾನಂ ವಿದ್ಧಿ ಸಾತ್ವಿಕಮ್ ॥೨.೯೮॥

ಸರ್ವಗುಹ್ಯತಮಂ ಭೂಯಃ ಶೃಣು ಮೇ ಪರಮಂ ವಚಃ ।
ಇಷ್ಟೋsಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಮ್ ॥೨.೯೯॥

ಮನ್ಮನಾಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।
ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋsಸಿ ಮೇ ॥೨.೧೦೦॥

ಭಿನ್ನ ಚೇತನರಲ್ಲಿರುವ ಭಗದ್ರೂಪ ಒಂದೇ ಎಂಬ ಗುಂಪು,
ಅಂಥವರದು -ಹರಿಯ ತಿಳಿಯ ಹೊರಟ ಸಾತ್ವಿಕ ಕಂಪು.

ಮೋಕ್ಷಸಾಧನದಲ್ಲಿ ಇದು ಅತ್ಯಂತ  ಗೌಪ್ಯವಾದ ವಚನ,
ನೀನೆನಗೆ ಪ್ರಿಯನಾದ್ದರಿಂದ ಅರುಹುತ್ತಿರುವೆ ಅರ್ಜುನ,
ನನ್ನಲ್ಲೇ ನಿನ್ನ ಮನಸ್ಸಿಡು ನನಗೇ ಪೊಡಮಡು,
ಭಕ್ತಿ ಯಜ್ಞ ಯಾಗ ನನ್ನ ಪ್ರೀತಿಗೆಂದೇ ಮಾಡು,
ಇದು ಸತ್ಯದಲ್ಲೇ ಸತ್ಯ-ನೀನು ನನ್ನನ್ನೇ ಹೊಂದುವಿ,
[Contributed by Shri Govind Magal]

ಆಗುತ್ತೀ ನಿನ್ನ ಯೋಗ್ಯತೆಯ ಆನಂದದ ಅನುಭವಿ.

No comments:

Post a Comment

ಗೋ-ಕುಲ Go-Kula