Monday, 8 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 67 - 68

(ನೋಡಿದ್ದಾಯ್ತು ಮಹಾಭಾರತದ ಆದಿ ಅಂತ್ಯದ ಮಾತುಗಳು,
ಈಗ  ಮಧ್ವರು ಕೊಟ್ಟ ಮಹಾಭಾರತದ ಮಧ್ಯದ ಮುತ್ತುಗಳು).

ಸತ್ಯಂ ಸತ್ಯಂ ಪುನಃ ಸತ್ಯಮುದ್ ಧೃತ್ಯ ಭುಜಮುಚ್ಯತೇ ।
ವೇದಶಾಸ್ತ್ರಾತ್ ಪರಂ ನಾಸ್ತಿ ನ ದೈವಂ ಕೇಶವಾತ್ ಪರಮ್ ॥೨.೬೭॥

ಸತ್ಯ ಸತ್ಯ ಎಂದು ಸಾರಿ ಸಾರಿ ಹೇಳುತ್ತೇನೆ,
ಪುನಃ ಸತ್ಯ ಎಂದು ತೋಳನೆತ್ತಿ ಸಾರುತ್ತೇನೆ,
ವೇದ ಶಾಸ್ತ್ರಗಳಿಗಿಂತ ಮಿಗಿಲಾದ ಶಾಸ್ತ್ರವಿಲ್ಲ,
ನಾರಾಯಣನಿಗಿಂತ ಮಿಗಿಲಾದ ದೇವರಿಲ್ಲ.

(ಇದು ಮ .ಭಾ .ದ ಪರಿಶಿಷ್ಟದಲ್ಲಿ 2ನೇ ಅಧ್ಯಾಯದ 15ನೇ ಶ್ಲೋಕ,
ಪಾದ್ಮಪುರಾಣದ ಉತ್ತಾರಾಖಂಡದಲ್ಲೂ ಇದರದೇ ಪಾಕ).

ಆಲೋಢ್ಯಃ ಸರ್ವಶಾಸ್ತ್ರಾಣಿ ವಿಚಾರ್ಯ ಚ ಪುನಃಪುನಃ ।
ಇದಮೇಕಂ ಸುನಿಷ್ಪನ್ನಂ ಧ್ಯೇಯೋ ನಾರಾಯಣಃ ಸದಾ ॥೨.೬೮॥

ಆದಮೇಲೆ ಎಲ್ಲಾ ಶಾಸ್ತ್ರಗಳ ವಿಚಾರ,
ಪುನಃ ಪುನಃ ಆದಮೇಲೂ ಸಾರಾಸಾರ,
ಹೊರ ಹೊಮ್ಮುವ ಸುನಿಶ್ಚಿತ ಹೂರಣ,
ಸರ್ವೋತ್ತಮನವನೇ ಶ್ರೀಮನ್ನಾರಾಯಣ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula