Friday, 19 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 118 - 120

ತಸ್ಯಾಂಗಂ ಪ್ರಥಮಂ ವಾಯುಃ ಪ್ರಾದುರ್ಭಾವತ್ರಯಾನ್ವಿತಃ
ಪ್ರಥಮೋ ಹನುಮಾನ್ ನಾಮ ದ್ವಿತೀಯೋ ಭೀಮ ಏವ ಚ ।
ಪೂರ್ಣಪ್ರಜ್ಞಸ್ತೃತೀಯಸ್ತು ಭಗವತ್ಕಾರ್ಯಸಾಧಕಃ ॥೨.೧೧೮॥

ಶ್ರೀಹರಿಯ ಪ್ರಧಾನ ಸೇವಕ ಮುಖ್ಯಪ್ರಾಣನದು ಮೂರು ಅವತಾರ,
ಹನುಮಂತನಾಗಿ ಶ್ರೀರಾಮ ಸೇವೆಯ ಮಾಡಿದ್ದು ಹನುಮಾವತಾರ,
ಭೀಮಸೇನನಾಗಿ ಶ್ರೀಕೃಷ್ಣ ಸೇವೆಯ ಮಾಡಿದ್ದದು ಭೀಮಾವತಾರ,
ಪೂರ್ಣಪ್ರಜ್ಞರಾಗಿ ಶ್ರೀವ್ಯಾಸ ಪೂಜೆಯ ಮಾಡಿದ್ದು ಮಧ್ವಾವತಾರ.

ತ್ರೇತಾದ್ಯೇಷು ಯುಗೇಷ್ವೇಷ ಸಂಭೂತಃ ಕೇಶವಾಜ್ಞಯಾ ।
ಏಕೈಕಶಸ್ತ್ರಿಷು ಪೃಥಗ್ ದ್ವಿತೀಯಾಂಗಂ ಸರಸ್ವತೀ ॥೨.೧೧೯॥

ಶಂರೂಪೇ ತು ರತೇರ್ವಾಯೌ ಶ್ರೀರಿತ್ಯೇವ ಚ ಕೀರ್ತ್ಯತೇ । 
ಸೈವ ಚ ದ್ರೌಪದೀ ನಾಮ ಕಾಳೀ ಚಂದ್ರೇತಿ ಚೋಚ್ಯತೇ ॥೨.೧೨೦॥

ಹರಿಯಾಜ್ಞೆಯಂತೆ ತ್ರೇತಾದಿ ಮೂರೂ ಯುಗಗಳಲ್ಲೂ ವಾಯುವಿನ ಅವತಾರ,
ಪತಿಗೆ ತಕ್ಕ ಸತಿಯಾಗಿ ಹರಿಯ ಎರಡನೇ ಸೇವಕಳಾಗಿ ಭಾರತೀ ದೇವಿಯ ವ್ಯಾಪಾರ.

ಸುಖಸ್ವರೂಪ ಪ್ರಾಣನಲ್ಲಿ ರತಳಾದವಳು ಅವಳು  ಭಾರತೀ ದೇವಿ ,

ಅವಳೇ ಶ್ರೀ ,ಕಾಳೀ ,ಚಂದ್ರಾ ಎಂದು ಕರೆಸಿಕೊಳ್ಳುವ ದ್ರೌಪದೀ ದೇವಿ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula