Thursday 25 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 142 - 147

ವಾಯುರ್ಹಿ ಬ್ರಹ್ಮತಾಮೇತಿ ತಸ್ಮಾತ್ ಬ್ರಹ್ಮೈವ ಸ ಸ್ಮೃತಃ ।
ನ ಬ್ರಹ್ಮಸದೃಶಃ ಕಶ್ಚಿಚ್ಛಿವಾದಿಷು ಕಥಞ್ಚನ’ ॥೨.೧೪೨॥

ಜ್ಞಾನೇ ವಿರಾಗೇ ಹರಿಭಕ್ತಿಭಾವೇ ಧೃತಿಸ್ಥಿತಿಪ್ರಾಣಬಲೇಷು ಯೋಗೇ ।
ಬುದ್ಧೌ ಚ ನಾನ್ಯೋ ಹನುಮತ್ಸಮಾನಃ ಪುಮಾನ್ ಕದಾಚಿತ್ ಕ್ವಚ ಕಶ್ಚನೈವ’ ॥೨.೧೪೩॥

ಮುಖ್ಯಪ್ರಾಣನೇ ಮುಂದಿನ ಕಲ್ಪದಲ್ಲಾಗುತ್ತಾನೆ ಅವ ಬ್ರಹ್ಮ.
ಶಿವ ಮೊದಲಾದವರಲ್ಲಿ ಆ ಜ್ಞಾನ ಇಲ್ಲವೆಂದೇ ಅದು ಮರ್ಮ.

ಜ್ಞಾನ ವೈರಾಗ್ಯ ವಿಷ್ಣುಭಕ್ತಿಯ ಭಾವದಲ್ಲಿ,
ಧೈರ್ಯ ಸ್ಥಿರತೆ ಪೌರುಷ ಬಲ ಯೋಗದಲ್ಲಿ,
ಬುದ್ಧಿಯಲ್ಲಿ ಹನುಮಂತಗೆ ಸಮಾನನಾದ ಮತ್ತೊಬ್ಬನಿಲ್ಲ.
ಪವಮಾನಗೆ ಸಮಾನ ಯಾರೂ ಯಾವಕಾಲದಲ್ಲೂ ಎಲ್ಲೂ ಇಲ್ಲ.

ಬಳಿತ್ಥಾ ತದ್ ವಪುಷೇ ಧಾಯಿ ದರ್ಶತಂ ದೇವಸ್ಯ ಭರ್ಗಃ ಸಹಸೋ ಯತೋ ಜನಿ ।
ಯದೀಮುಪಹ್ವರತೇ ಸಾಧತೇ ಮತಿರ್ ಋತಸ್ಯ ಧೇನ ಅನಯನ್ತ ಸಸ್ರುತಃ ॥೨.೧೪೪॥

ಪೃಕ್ಷೋ ವಪುಃ ಪಿತುಮಾನ್ ನಿತ್ಯ ಆ ಶಯೇ ದ್ವಿತೀಯಮಾ ಸಪ್ತಶಿವಾಸು ಮಾತೃಷು ।
ತೃತೀಯಮಸ್ಯ ವೃಷಭಸ್ಯ ದೋಹಸೇ ದಶಪ್ರಮತಿಂ ಜನಯನ್ತ ಯೋಷಣಃ ॥೨.೧೪೫॥

ಸರ್ವಶಕ್ತ ಸರ್ವಜ್ಞ ಭಗವಂತನ ಮುಖ್ಯಪ್ರಾಣ ಹೊರುವ.
ಜನ್ಮದಾತ ಶ್ರೀಹರಿಯ ಪದತಲದಲ್ಲಿ ಸದಾ ಬಾಗಿ ನಿಂತಿರುವ.
ರಾಮರೂಪಿ ಹರಿಯ ಪ್ರೇಮಸಂದೇಶವ ತಾಯಿ ಸೀತೆಗೆ ತಲುಪಿಸುವವ.
ಜಗದ್ ಮಾತಾಪಿತರ ಸೇವೆಯಲ್ಲಿ ಬದ್ಧನಾದ ಹನುಮಂತನಾಗಿರುವ.

ಇವನ ಎರಡನೇ ಅವತಾರವೇ ಭೀಮಸೇನ ರೂಪ.
ಶತ್ರುಸೈನ್ಯ ಪುಡಿಮಾಡಿದ ಬಂಡಿ ಅನ್ನವನ್ನುಂಡ   ಭೂಪ.
ಏಳುಶಾಸ್ತ್ರ ಮಾತೆಯರ ಮಡಿಲಲ್ಲಿ ಮಲಗಿರುವ ಕೂಸು.
ಮೂರನೇ ಅವತಾರ ಮಧ್ವರಾಗಿ ನೀಡಿದ್ದು ವೇದಸಾರದ ಹಾಸು.

ನಿರ್ಯದೀಂ ಬುದ್ನಾನ್ಮಹಿಷಸ್ಯ ವರ್ಪಸ ಈಶಾನಾಸಃ ಶವಸಾ ಕ್ರನ್ತ ಸೂರಯಃ ।
ಯದೀಮನು ಪ್ರದಿವೋ ಮಧ್ವ ಆಧವೇ ಗುಹಾ ಸನ್ತಂ ಮಾತರಿಶ್ವಾ ಮಥಾಯತಿ ॥೨.೧೪೬॥

ಪ್ರ ಯತ್ ಪಿತುಃ ಪರಮಾನ್ನೀಯತೇ ಪರ್ಯಾ ಪೃಕ್ಷುಧೋ ವೀರುಧೋ ದಂಸು ರೋಹತಿ ।
ಉಭಾ ಯದಸ್ಯ ಜನುಷಂ ಯದಿನ್ವತ ಆದಿದ್ ಯವಿಷ್ಠೋ ಅಭವದ್ ಘೃಣಾ ಶುಚಿಃ’ ॥೨.೧೪೭॥

ತೆರೆದಾಗ ಜ್ಞಾನಶ್ರೇಷ್ಠ ಮುಖ್ಯಪ್ರಾಣನ ಅನುಗ್ರಹದ ದ್ವಾರ,
ಜ್ಞಾನಿಗಳಿಗಾಗುತ್ತದೆ ಪರಮಾತ್ಮನ ಗುಣಗಳ ನೈಜ ಸಾಕಾರ.
ಸಜ್ಜನರ ಸರಿದಾರಿಗೆ ನಡೆಯಬೇಕಾದ ಭಗವತ್ ಚಿಂತನ,
ವಾಯು ಮಾಡುತ್ತಾನೆ ನಮ್ಮ ಹೃತ್ಕಮಲದಲ್ಲಿ ತತ್ವ ಮಂಥನ.

ಯಾವ ಮಧ್ವರೆಂಬ ಈ ಜ್ಞಾನಾವತಾರ,
ನಾರಾಯಣನಿಂದ ಜಗಕ್ಕಾಗಿದೆ ಸಾಕಾರ.
ಯಾವುದೇ ದುರ್ವಾದಿಗಳ ಕ್ಷುದ್ರ ಪ್ರಶ್ನೆ-ದುರ್ವಾದ,
ಆಗಿ ಬಿಸುಡಲ್ಪಡುತ್ತದೆ ಅವನ ಜ್ಞಾನದವಡೆಯಲ್ಲಿ ಛೇದ.
ಲಕ್ಷ್ಮೀ ನಾರಾಯಣರ ಗುಣ ತೋರಿಸುವ ಈ ರೂಪ,
ಸಜ್ಜನರಲ್ಲಿ ದಯಹೊಂದಿ ಬೆಳಗಿಸುವ ಜ್ಞಾನ ದೀಪ.

(ಹೀಗೆ ಋಗ್ವೇದದಲ್ಲಿ ಬಂದ ಮೂರು ಅವತಾರಗಳ ವರ್ಣನೆ,
ತನ್ಮೂಲಕ ಬಂದ ರಾಮಾಯಣ ಭಾರತಗಳ ವಿಶೇಷ ಚಿಂತನೆ.
ವೇದಮುಖೇನ ಇತಿಹಾಸ ಪುರಾಣಗಳ ನೋಡುವ ನೋಟ,
ಅದ್ವಿತೀಯ ಮಧ್ವಾಚಾರ್ಯರೇ ಗ್ರಂಥದಲ್ಲಿ ಕೊಟ್ಟ ಪಾಠ).
[Contributed by Shri Govind Magal]

No comments:

Post a Comment

ಗೋ-ಕುಲ Go-Kula