Thursday 4 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 51 - 53

ವಾಯುಪ್ರೋಕ್ತೇsಪಿ ತತ್ ಪ್ರೋಕ್ತಂ ಭಾರತಸ್ಯ ಪ್ರಶಂಸನಮ್ ।
ಕೃಷ್ಣದ್ವೈಪಾಯನಂ ವ್ಯಾಸಂ ವಿದ್ಧಿ ನಾರಾಯಣಂ ಪ್ರಭುಮ್ ।
ಕೋ ಹ್ಯನ್ಯಃ ಪುಣ್ಡರೀಕಾಕ್ಷಾನ್ಮಹಾಭಾರತಕೃದ್ ಭವೇತ್ ॥೨.೫೧॥

ಏವಂ ಹಿ ಸರ್ವಶಾಸ್ತ್ರೇಷು ಪೃಥಕ್ ಪೃಥಕ್ ಪೃಥಗುದೀರಿತಮ್ ।
ಉಕ್ತೋsರ್ಥಃ ಸರ್ವ ಏವಾಯಂ ಮಾಹಾತ್ಮ್ಯಕ್ರಮಪೂರ್ವಕಃ ॥೨.೫೨॥

ಶ್ರೀಮನ್ಮಹಾಭಾರತದ ಶಾಂತಿ ಪರ್ವ,
ಪದ್ಮಪುರಾಣದ ಸೃಷ್ಟಿ ಖಂಡದಾಂತರ್ಯ,
ಸ್ಪಷ್ಟಪಡಿಸುತ್ತದೆ ಅದು ವಿಷ್ಣು ಪುರಾಣ,
ವೇದವ್ಯಾಸರೇ ಹೌದು ಶ್ರೀಮನ್ನಾರಾಯಣ.

ಅನ್ಯರಿಗೆ ಇದೆಯೇ ಮಹಾಭಾರತ ರಚಿಸುವ ತ್ರಾಣ?
ವ್ಯಾಸ ರೂಪದಿಂದ ರಚಿಸಿದ್ದವನೇ ತಾ ನಾರಾಯಣ,
ವೇದವ್ಯಾಸರೆಂದರೂ ಅವರೇ ಕೃಷ್ಣದ್ವೈಪಾಯನ,
ಅವರು ಕೊಟ್ಟ ಮಹಾಭಾರತಕ್ಕಲ್ಲವೇ ಉನ್ನತ ಸ್ಥಾನ.

ಭಾರತೇsಪಿ ಯಥಾ ಪ್ರೋಕ್ತೋ ನಿರ್ಣಯೋsಯಂ ಕ್ರಮೇಣತು ।
ತಥಾ ಪ್ರದರ್ಶಯಿಷ್ಯಾಮಸ್ತದ್ವಾಕ್ಯೈರೇವ ಸರ್ವಶಃ ॥೨.೫೩॥

ತಿಳಿಯಬೇಕಾದರೆ ಮಹಾಭಾರತದ ಆಂತರ್ಯ,
ಓದುವ ರೀತಿ ತಿಳಿಸುತ್ತೇನೆ ಅನ್ನುತ್ತಾರೆ ಆಚಾರ್ಯ,
ಮಹಾಭಾರತವದು ಸಕಲ ಶಾಸ್ತ್ರಗಳ ನಿರ್ಣಯ,

ಮಾಡಿದ್ದಾರೆ ಆಚಾರ್ಯ ಭಾರತವಾಕ್ಯಗಳ ಸಮನ್ವಯ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula