Thursday, 18 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 111 - 117

ಯಥಾssಶ್ರಿತಾನಿ ಜ್ಯೋತೀಂಷಿ ಜ್ಯೋತಿಃಶ್ರೇಷ್ಠಂ ದಿವಾಕರಮ್ ।
ಏವಂ ಮುಕ್ತಗಣಾಃ ಸರ್ವೇ ವಾಸುದೇವಮುಪಾಶ್ರಿತಾಃ ॥೨.೧೧೧॥

ಭವಿಷ್ಯತ್ಪರ್ವಗಂ ಚಾಪಿ ವಚೋ ವ್ಯಾಸಸ್ಯ ಸಾದರಮ್ ।
ವಾಸುದೇವಸ್ಯ ಮಹಿಮಾ ಭಾರತೇ ನಿರ್ಣಯೋದಿತಃ ॥೧.೧೧೨॥

ತದರ್ಥಾಸ್ತು ಕಥಾಃ ಸರ್ವಾ ನಾನ್ಯಾರ್ಥಂ ವೈಷ್ಣವಂ ಯಶಃ ।
ತತ್ ಪ್ರತೀಪಂ ತು ಯದ್ ದೃಶ್ಯೇನ್ನ ತನ್ಮಮ ಮನೀಷಿತಮ್ ॥೨.೧೧೩॥

ಹೇಗೆ ಎಲ್ಲಾ ಬೆಳಕಿನ ಕಾಯಗಳಿಗೂ ಸೂರ್ಯನು ಆಶ್ರಯ,
ಹಾಗೇ ಎಲ್ಲಾ ಮುಕ್ತರಿಗೂ ವಾಸುದೇವನೊಬ್ಬನೇ ಆಶ್ರಯ.

ಭವಿಷ್ಯತ್ಪರ್ವದ ವ್ಯಾಸರ ಆದರದ ಮಾತಿನ ಆಶಯ,
ಭಾರತದಲ್ಲಾಗಿದೆ ವಾಸುದೇವನ ಮಹಿಮಾ ನಿರ್ಣಯ.

ಭಾರತದ ಪ್ರಮುಖ ಸಾರ ಭಗವಂತನ ಮಹಿಮೆ,
ಎಲ್ಲಾ ಕಥೆಗಳೂ ಅದಕ್ಕೇ ಪೂರಕವೆನ್ನುವ ಹಿರಿಮೆ,
ಬೇರೇನೇ ವಿರುದ್ಧ ಕಂಡರೂ ಅದು ವ್ಯಾಸರ ಅಭಿಪ್ರಾಯವಲ್ಲ,
ಯಾರೇನೇ ಹೇಳಿದರೂ ಕಂಡರೂ ಅದು ವ್ಯಾಸರಿಗೆ ಸಮ್ಮತವಲ್ಲ.

ಭಾಷಾಸ್ತುತ್ರಿವಿಧಾಸ್ತತ್ರ ಮಯಾ ವೈ ಸಮ್ಪ್ರದರ್ಶಿತಾಃ ।
ಉಕ್ತೋ ಯೋ ಮಹಿಮಾ ವಿಷ್ಣೋಃ ಸ ತೂಕ್ತೋ ಹಿ ಸಮಾಧಿನಾ ॥೨.೧೧೪॥

ಶೈವದರ್ಶನಮಾಲಂಬ್ಯ  ಕ್ವಚಿಚ್ಛೈವೀ ಕಥೋದಿತಾ ।
ಸಮಾಧಿಭಾಷಯೋಕ್ತಂ ಯತ್ ತತ್ ಸರ್ವಂ ಗ್ರಾಹ್ಯಮೇ ವ ಹಿ ॥೨.೧೧೫॥

ಭಾರತದಲ್ಲಿ ಬಳಕೆಯಾಗಿರುವುದು ಮೂರು ಭಾಷೆ,
ವಿಷ್ಣುಮಹಿಮೆಯ ನೇರವಾಗಿ ಹೇಳಿದ್ದು ಸಮಾಧಿ ಭಾಷೆ.

ಶಿವನನ್ನು ಪ್ರತಿಪಾದಿಸುವ ಶಾಸ್ತ್ರ ಪಾಶುಪತ,
ಹೇಳಲ್ಪಟ್ಟ ಕಥೆಗಳು ಮಹಾರುದ್ರಗೆ ಸಂಬಂಧಿತ,
ಸಮಾಧಿ ಭಾಷೆಯಲ್ಲಿ ಹೇಳಿದ್ದೆಲ್ಲಾ ಗ್ರಾಹ್ಯಸಮ್ಮತ.


ಅವಿರುದ್ಧಂ ಸಮಾಧೇಸ್ತು ದರ್ಶನೋಕ್ತಂ ಚ ಗೃಹ್ಯತೇ ।
ಆದ್ಯಂತಯೋರ್ವಿರುದ್ಧಂ ಯದ್ ದರ್ಶನಂ ತದುದಾಹೃತಮ್ ॥೨.೧೧೬॥

ಸಮಾಧಿ ಭಾಷೆಗೆ ವಿರುದ್ಧವಲ್ಲದ ದರ್ಶನಭಾಷೆಯೂ ಗ್ರಾಹ್ಯ,
ಆದಿ ಅಂತ್ಯಗಳಲ್ಲಿ ವಿರುದ್ಧವಿದ್ದು ಮಧ್ಯದರ್ಶನಭಾಷೆವಿದ್ದರೂ ಸಹ್ಯ.

ದರ್ಶನಾನಂತರಸಿದ್ಧಂ ಚ ಗುಹ್ಯಭಾಷಾsನ್ಯಥಾ ಭವೇತ್ ।
ತಸ್ಮಾದ್ ವಿಷ್ಣೋರ್ಹಿ ಮಹಿಮಾ ಭಾರತೋಕ್ತೋ ಯಥಾರ್ಥತಃ ॥೨.೧೧೭॥

ಉಪಕ್ರಮ ಉಪಸಂಹಾರಕ್ಕೆ ಯಾವುದು ವಿರುದ್ಧವೋ ಅದು ದರ್ಶನ,
ಮೇಲುನೋಟಕ್ಕೆ ಕಾಣುವುದಕ್ಕೆ ಭಿನ್ನವಾದದ್ದು ಗುಹ್ಯ ಭಾಷೆಯ ಭಾವನ,
ಅನೇಕ ಪ್ರಮೇಯಗಳನ್ನು ಹೇಳಿರುವುದು ಗುಹ್ಯ ಭಾಷೆ,
ಸತ್ಯವನ್ನು ಮುಚ್ಚಿಟ್ಟು ಹೇಳಿರುವುದು ವ್ಯಾಸರ ಅಭಿಲಾಷೆ,
ಭಾರತದುದ್ದಕ್ಕೂ ಸಮಾಧಿ ದರ್ಶನ ಗುಹ್ಯ ಭಾಷೆಗಳ ನರ್ತನ,

ಅದಲುಬದಲಾಗಿ ಸಂಯೋಜನೆಯಾಗಿ ಕೊಡುವುದು ತತ್ವನಿರೂಪಣ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula