Tuesday, 9 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 69 - 71

ಸ್ಮರ್ತವ್ಯಃ ಸತತಂ ವಿಷ್ಣುರ್ವಿಸ್ಮರ್ತವ್ಯೋ ನ ಜಾತುಚಿತ್  ।
ಸರ್ವೇ ವಿಧಿನಿಷೇಧಾಃ ಸ್ಯುರೇತಯೋರೇವ ಕಿಙ್ಕರಾಃ ॥೨.೬೯॥

 ಸತತವಿರಲೇಬೇಕು ವಿಷ್ಣುವಿನ ಸ್ಮರಣೆ,
ಎಂದೂ ಸುಳಿಯಲೇ ಬಾರದು ವಿಸ್ಮರಣೆ,
ಇದೇ ಶಾಸ್ತ್ರಮೂಲ ವಿಧಿ-ನಿಷೇಧದ ತುತ್ತು,
ಉಳಿದ ವಿಧಿ ನಿಷೇಧಗಳೆಲ್ಲಾ ಇದರ ತೊತ್ತು.
ಇದೇ ವಿಧಿ ನಿಷೇಧಗಳ ಪ್ರಮುಖ ಆಂತರ್ಯ,
ನೈಜ ಹರಿಸ್ಮರಣೆಯ ತಾಕತ್ತಿನ ಮಹಾತಾತ್ಪರ್ಯ.

(ಶೌಚ ಅಂದರೆ ಮಡಿ -ಅಂದರೆ ಶುದ್ಧಿ,
ಆಸನ ಸುಖವಾಗಿ ಕುಳಿತುಕೊಳ್ಳೋ ಸಿದ್ಧಿ,
ಭಗವಂತನ ಸ್ಮರಣೆ ತಾರದ ಮಡಿ,
ಯಾವ ಪುರುಷಾರ್ಥಕ್ಕದು ಖೋಡಿ?

ಕೋ ಹಿ ತಂ ವೇದಿತುಂ ಶಕ್ತೋ  ಯೋ ನ ಸ್ಯಾತ್ ತದ್ವಿಧೋsಪರಃ ।
ತದ್ವಿಧಶ್ಚಾಪರೋ ನಾಸ್ತಿ ತಸ್ಮಾತ್ ತಂ ವೇದ ಸಃ ಸ್ವಯಮ್ ॥೨.೭೦॥

ಕೋ ಹಿ ತಂ ವೇದಿತುಂ ಶಕ್ತೋ ನಾರಾಯಣಮನಾಮಯಮ್ ।
ಋತೇ ಸತ್ಯವತೀಸೂನೋಃ ಕೃಷ್ಣಾದ್ ವಾ ದೇವಕೀಸುತಾತ್ ॥೨.೭೧॥

ನಾರಾಯಣನಂತಲ್ಲದ ಇನ್ನೊಬ್ಬ ತಾನು,
ಅವನ ಪೂರ್ಣ ತಿಳಿಯಲು ಹೇಗೆ ಶಕ್ತನಾದಾನು?,
ನಾರಾಯಣನಂಥವನು ಮತ್ತೊಬ್ಬನವ ಇಲ್ಲ,
ಅವನೊಬ್ಬನೇ ಅವನನ್ನು ಪೂರ್ಣ ತಿಳಿದ ಮಲ್ಲ

ಸತ್ಯವತೀ ಸುತನಾದ ವಾಸಿಷ್ಠ ಕೃಷ್ಣ,
ದೇವಕೀ ಸುತನಾದ ಯಾದವ ಕೃಷ್ಣ,
ಬೇರಾರಿಗೆ ಗೊತ್ತಾದೀತು ವೇದಗಳ ಹೂರಣ?
ವೇದಪ್ರತಿಪಾದ್ಯ-ಸೃಷ್ಟಿಕರ್ತ ಅವ ಜಗತ್ಕಾರಣ!
ಸಾರಿ ಸಾರಿ ಹೇಳುತ್ತವೆ ಅನೇಕ ಪುರಾಣ,

ವೇದವ್ಯಾಸರೇ ದೋಷದೂರ ನಾರಾಯಣ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula