Wednesday, 10 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 72 - 73

ಅಪ್ರಮೇಯೋsನಿಯೋಜ್ಯಶ್ಚ ಸ್ವಯಂ ಕಾಮಗಮೋ ವಶೀ ।
ಮೋದತ್ಯೇಷ ಸದಾ ಭೂತೈರ್ಬಾಲಃ ಕ್ರೀಡನಕೈರಿವ ॥೨.೭೨॥

ಶ್ರೀಹರಿಯನ್ನು ಯಾರೂ ಎಂದೂ ಪೂರ್ಣ ತಿಳಿದವರಿಲ್ಲ,
ಸರ್ವಶಕ್ತ ಸ್ವತಂತ್ರನ ಬೇರಾರೂ ನಿಯಂತ್ರಣ ಮಾಡುವವರಿಲ್ಲ,
ಎಲ್ಲವೂ ತನ್ನ ವಶ -ತಾನ್ಯಾರ ವಶದಲ್ಲಿರದ ಸ್ವೇಚ್ಛಗಾಮಿ,
ಸರ್ವಶಕ್ತ ಸರ್ವವ್ಯಾಪ್ತ ಅಜರಾಮರ ಸರ್ವ ಸ್ವತಂತ್ರನೇಮಿ,
ಇಂದ್ರಿಯಗಳ ವಶದಲ್ಲಿಟ್ಟುಕೊಂಡ ಧೀರನಿಗೆ ಯಾರ ಕಾಟ?
ಸೃಷ್ಟ್ಯಾದಿ ವ್ಯಾಪಾರಗಳೆಲ್ಲಾ ಅವನಿಗೆ ಮಕ್ಕಳ ಬೊಂಬೆಯಾಟ!




ನ ಪ್ರಮಾತುಂ ಮಹಾಬಾಹುಃ ಶಕ್ಯೋsಯಂ ಮಧುಸೂದನಃ ।
ಪರಮಾತ್ ಪರಮೇತಸ್ಮಾದ್ ವಿಶ್ವರೂಪಾನ್ನ ವಿದ್ಯತೇ ॥೨.೭೩॥

ಮಹಾಬಾಹು ಈ ಮಧುಸೂದನನನ್ನು ತಿಳಿಯುವುದು ಅಶಕ್ಯ,
ಪರಿಪೂರ್ಣ ಸರ್ವೋತ್ತಮಗೆ ಸಮ-ಮಿಗಿಲಿಲ್ಲೆಂಬ ತತ್ವ ವಾಕ್ಯ,
ತಿಳಿಯಲಾಗದ ದೈವ-ಆಜ್ಞೆಗೆ ಸಿಗದೇ ತಾನೇ ಕರುಣದಿ ಕಾವ ಪ್ರೇಮಿ,
ಈತನಿಷ್ಟೇ ಎಂದಳೆಯಲಾಗದ ಅಪರಿಮಿತ ಅಪ್ರಮೇಯ ಅವ ಸ್ವಾಮಿ,
ಇದು ಮಹಾಭಾರತದಲ್ಲಿ ಸ್ಫುಟವಾಗಿ ಹೇಳಿದ ಮಾತು,

ನಿರ್ಣಯದಲ್ಲಿ ಆಚಾರ್ಯರೂ ಕೊಟ್ಟಿದ್ದಾರದಕ್ಕೆ ಒತ್ತು.
[Contributed by Shri Govind Magal]

No comments:

Post a Comment

ಗೋ-ಕುಲ Go-Kula