Tuesday 16 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2:.101 -103

(ಪಂಚರಾತ್ರದಲ್ಲಿ ಹೇಳಿದೆ ಪೂಜಾ ವಿಧಿ ವಿಧಾನ,
ಅದ ದೂರವಿಟ್ಟವರು ಕೊಡುತ್ತಾರೆ ಏನೋ ಕಾರಣ,
ಕೆಲ ಸಂಹಿತೆಗಳಷ್ಟೇ ಲಭ್ಯವಿವೆ ---ಪ್ರಾಚೀನ,
ಅನೇಕವು ಸೇರಿಸಲ್ಪಟ್ಟಿವೆ -----ಅರ್ವಾಚೀನ).

ಪಂಚರಾತ್ರಸ್ಯ ಕೃತ್ಸ್ನಸ್ಯ ವಕ್ತಾ ನಾರಾಯಣಃ ಸ್ವಯಮ್ ।
ಸರ್ವೇಷ್ವೇತೇಷು ರಾಜೇಂದ್ರ  ಜ್ಞಾನೇಷ್ವೇತದ್ ವಿಶಿಷ್ಯತೇ ॥೨.೧೦೧॥

ಜ್ಞಾನೇಷ್ವೇತೇಷು ರಾಜೇಂದ್ರ  ಸಾಂಖ್ಯಪಾಶುಪತಾದಿಷು ।
ಯಥಾಯೋಗಂ ಯಥಾನ್ಯಾಯಂ ನಿಷ್ಠಾ ನಾರಾಯಣಃ ಪರಃ ॥೧.೧೦೨॥

ಪಂಚರಾತ್ರದ ಕರ್ತೃ ಅವ ಶ್ರೀಮನ್ನಾರಾಯಣ,
ಸಕಲ ಶಾಸ್ತ್ರಗಳಿಗಿಂತ ಇಲ್ಲಿದೆ ಶ್ರೇಷ್ಠ ಹೂರಣ,
ವೇದವದು ಎಂದೂ ಸರ್ವಶ್ರೇಷ್ಠ ಪರಮ ಪ್ರಮಾಣ,
ಪಂಚರಾತ್ರವೂ ವೇದಾನುಸಾರಿ ಎಂಬುದದರ ಹಿರಿತನ.

ಸಾಂಖ್ಯ ಪಾಶುಪತದಲ್ಲಾಗಿದೆ ಪಂಚರಾತ್ರದ ವಿಶೇಷ  ಅನಾವರಣ,
ಮೋಕ್ಷದಾಯಕ ಪಂಚರಾತ್ರ ಹೇಳುವುದೂ ಅದೇ  ಸರ್ವೋತ್ತಮ ನಾರಾಯಣ,
ಇದು ಜನಮೇಜಯ ರಾಜ -ವೈಶಂಪಾಯನರ ಸಂಭಾಷಣೆ,
ನಡೆದಿದೆ ಇಲ್ಲಿ ಮೋಕ್ಷಧರ್ಮ ವಚನಗಳ ತಿಳಿ ವಿಶ್ಲೇಷಣೆ.


ಪಂಚರಾತ್ರವಿದೋ ಮುಖ್ಯಾ ಯಥಾಕ್ರಮಪರಾ ನೃಪ ।
ಏಕಾಂತಭಾವೋಪಗತಾ ವಾಸುದೇವಂ ವಿಶಂತಿ ತೇ ॥೨.೧೦೩॥

 ಪಂಚರಾತ್ರವ ಬಲ್ಲ ಯಾವುದೇ ದೇವಭಕ್ತ,
ದೇವತಾತಾರತಮ್ಯದಲ್ಲಿ ಅವ ನಿಷ್ಠಾಯುಕ್ತ,
ಸದೃಢ ಭಕ್ತಿಯುಳ್ಳ ಶ್ರೇಷ್ಠ ಜೀವರು,
ವಾಸುದೇವನನ್ನೇ ಹೊಂದುತ್ತಾರವರು,
ಇದು ಮಹಾಭಾರತದ ಮೇಲಿನ ಮಾತಿನ ಧ್ಯೇಯ,

ಮಹಾಭಾರತ ಹೇಳುವ ಮುಖ್ಯವಾದ ಪ್ರಮೇಯ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula