Thursday, 11 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 74 - 76

ವಸುದೇವಸುತೋ ನಾಯಂ ನಾಯಂ ಗರ್ಭೇsವಸತ್ ಪ್ರಭುಃ ।
ನಾಯಂ ದಶರಥಾಜ್ಜಾತೋ ನಚಾಪಿ ಜಮದಗ್ನಿತಃ ॥೨.೭೪॥

ಜಾಯತೇ ನೈವ ಕುತ್ರಾಪಿ ಮ್ರಿಯತೇ ಕುತ ಏವ ತು ।
ನ ವೇಧ್ಯೋ ಮುಹ್ಯತೇ ನಾಯಂ ಬಧ್ಯತೇ ನೈವ ಕೇನಚಿತ್ ।
ಕುತೋ ದುಃಖಂ ಸ್ವತಂತ್ರಸ್ಯ ನಿತ್ಯಾನಂದೈಕರೂಪಿಣಃ ॥೨.೭೫॥

ಈಶನ್ನಪಿ ಹಿ ದೇವೇಶಃ ಸರ್ವಸ್ಯ ಜಗತೋ ಹರಿಃ ।
ಕರ್ಮಾಣಿ ಕುರುತೇ ನಿತ್ಯಂ ಕೀನಾಶ ಇವ ದುರ್ಬಲಃ ॥೨.೭೬॥

ಹುಟ್ಟು ಸಾವಿರದ ಕೃಷ್ಣ ವಸುದೇವನ ಮಗನಲ್ಲ,
ದೇವಕಿಯ ಗರ್ಭವಾಸವೂ ಖಂಡಿತಾ ಇವಗಿದ್ದಿಲ್ಲ,
ಅಜರಾಮರನಾದವ ದಶರಥನಿಂದಲೂ ಹುಟ್ಟಲಿಲ್ಲ,
ಅಜಯ-ಅಜರ-ಅಜಸ್ರ ಜಮದಗ್ನಿಯಲ್ಲೂ ಹುಟ್ಟಲಿಲ್ಲ.

ಹುಟ್ಟೇ ಇರದವಗೆ ಸಾವಿನ್ನೆಲ್ಲಿ?,
ಮೂರ್ಛೆ ಸೆರೆಗಳ ಮಾತಿನ್ನೆಲ್ಲಿ?,
ಅವ ನಿತ್ಯಾನಂದಮಾತ್ರಸ್ವರೂಪ!,
ಅವನಿಗಿನ್ನೆಲ್ಲಿಂದ  ದುಃಖದ ತಾಪ!.

ಹುಟ್ಟು- ಸಾವು -ಬಂಧನ -ನೋವು -ವಿರಹ,
ವಿಧ ವಿಧ ತೋರಿಕೊಳ್ಳುವ ಮಾಟಗಾರನ ತರಹ,
ಇವನ ನಾಟಕ ಅಯೋಗ್ಯರಿಗದು ಮೋಹಕ,
ಯೋಗ್ಯರಿಗದು ಲೀಲಾ ವಿನೋದ ದಾಯಕ,
ಧರಿಸಿ ಬಂದಾಗ ಭಗವಂತ ಮಾನುಷ ರೂಪ,
ಮನುಷ್ಯನಂತೇ ತೋರುತ್ತಾನೆ ದುಃಖ ಕೋಪ ತಾಪ,
ದೇವೇಶನಾದ ಬ್ರಹ್ಮಾಂಡವನ್ನಾಳುವ ಅಪ್ರತಿಮ ಸಾರ್ವಭೌಮ,
ಆದರೂ ಸಾಮಾನ್ಯ ರೈತನಂತೆ ದುಡಿತ ತೋರುವುದು ಅವನ ನೇಮ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula