Tuesday, 23 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 134 - 138

 ‘ಭಕ್ತಿರ್ಜ್ಞಾನಂ ಸ ವೈರಾಗ್ಯಂ ಪ್ರಜ್ಞಾಮೇಧಾ ಧೃತಿಃ ಸ್ಥಿತಿಃ ।
‘ಯೋಗಃ ಪ್ರಾಣೋ ಬಲಂ ಚೈವ ವೃಕೋದರ ಇತಿ ಸ್ಮೃತಃ ॥೨.೧೩೪॥

‘ಏತದ್ದಶಾತ್ಮಕೋ ವಾಯುಸ್ತಸ್ಮಾದ್ ಭಿಮಸ್ತದಾತ್ಮಕಃ ।
‘ಸರ್ವವಿದ್ಯಾ ದ್ರೌಪದೀ ತು ಯಸ್ಮಾತ್ ಸೈವ ಸರಸ್ವತೀ ॥೨.೧೩೫॥

ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ,
ಇವಿಷ್ಟೂ ಗುಣಗಳು ಪ್ರತಿನಿಧಿಸುತ್ತವೆ ಭೀಮಸೇನನ ವ್ಯಕ್ತಿತ್ವದ ಎತ್ತರ ಮತ್ತು ಆಳ.

ಭೀಮಸೇನ ಅವಿಷ್ಟೂ ಗುಣಗಳ ಹೊಂದಿದಾತ,
ಅವನ ಸತಿ ದ್ರೌಪದೀದೇವಿ ಆಕೆ ವೇದಮಾತ.

‘ಅಜ್ಞಾನಾದಿಸ್ವರೂಪಸ್ತು ಕಲಿರ್ದುರ್ಯೋಧನಃ ಸ್ಮೃತಃ ।
‘ವಿಪರೀತಂ ತು ಯಜ್ಜ್ಞಾನಂ ದುಃಶಾಸನ ಇತೀರಿತಃ ॥೨.೧೩೬॥

‘ನಾಸ್ತಿಕ್ಯಂ ಶಕುನಿರ್ನಾಮ ಸರ್ವದೋಷಾತ್ಮಕಾಃ ಪರೇ ।
‘ಧಾರ್ತರಾಷ್ಟ್ರಾಸ್ವಹಙ್ಕಾರೋ ದ್ರೌಣೀ ರುದ್ರಾತ್ಮಕೋ ಯತಃ ॥೨.೧೩೭॥

‘ದ್ರೋಣಾದ್ಯಾ ಇನ್ದ್ರಿಯಾಣ್ಯೇವ ಪಾಪಾನ್ಯನ್ಯೇ ತು ಸೈನಿಕಾಃ ।
‘ಪಾಣ್ಡವೇಯಾಶ್ಚ ಪುಣ್ಯಾನಿ ತೇಷಾಂ ವಿಷ್ಣುರ್ನಿಯೋಜಕಃ ॥೨.೧೩೮॥

ಅಜ್ಞಾನಾದಿಸ್ವರೂಪ ಕಲಿ ಅವ ದುರ್ಯೋಧನ.
ವಿಪರೀತಜ್ಞಾನದ ಪ್ರತಿನಿಧಿ ಅವ ದುಶ್ಯಾಸನ.
ಶಕುನಿ ಅವನು  ನಾಸ್ತಿಕ್ಯದ ಅಭಿಮಾನಿ.
ಧೃತರಾಷ್ಟ್ರಪುತ್ರರಷ್ಟೂ ಒಂದೊಂದು ದೋಷದ ಗನಿ.
ಅಶ್ವತ್ಥಾಮ "ನಾನು ದೇಹ "ಎಂಬ ಪ್ರಜ್ಞೆಯ ದನಿ.

ದ್ರೋಣಾದಿಗಳೆಲ್ಲಾ ಇಂದ್ರಿಯಗಳ ಸಂಕೇತ,
ಕೌರವನ ಸೈನಿಕರೆಲ್ಲಾ ಪಾಪ ಪೂರಿತ.
ಪಾಂಡವ ಸೈನಿಕರೆಲ್ಲಾ ಪುಣ್ಯ ಪ್ರೇರಿತ.

ವಿಷ್ಣುವೇ ಎರಡಕ್ಕೂ ನಿಯಾಮಕನಾತ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula