ಮಹಾತ್ಮಾನಸ್ತು
ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ ।
ಭಜನ್ತ್ಯನನ್ಯಮನಸೋ
ಜ್ಞಾತ್ವಾ ಭೂತಾದಿಮವ್ಯಯಮ್ ॥೨.೮೫॥
ಪರಮ ಸಾತ್ವಿಕ ಪ್ರಕೃತಿಯ ಶ್ರೇಷ್ಠ ಹೃದಯದ ಜನ,
ನಂಬುವರು ನಾನೇ ಚೇತನಾಚೇತನ ಉತ್ಪತ್ತಿಗೆ ಕಾರಣ,
ಅರಿಯುತ್ತಾರೆ ಚತುರ್ವಿಧ ನಾಶರಹಿತನು ನಾನು,
ಶುದ್ಧ ಜ್ಞಾನದಿ ಹರಿಸುತ್ತಾರೆ ನಿರ್ಮಲ ಭಕ್ತಿಯ ಜೇನು,
ಇದು ಶ್ರೀಕೃಷ್ಣ ಅರ್ಜುನಗೆ ಮಾಡಿದ ಉಪದೇಶ,
ತಾರತಮ್ಯೋಕ್ತ ಜೀವಿಗಳ ನಡೆಯ ನೈಜ ಸಂದೇಶ.
ಪಿತಾsಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ ।
ನ ತ್ವತ್ಸಮೋsಸ್ತ್ಯಭ್ಯಧಿಕಃ ಕುತೋsನ್ಯೋ ಲೋಕತ್ರಯೇsಪ್ಯಪ್ರತಿಮಪ್ರಭಾವ॥೨.೮೬॥
ಕೃಷ್ಣವಾಕ್ಯವ ಮನನ ಮಾಡಿಕೊಂಡ ಅರ್ಜುನ,
ತಲೆಬಾಗಿ ಸ್ತುತಿಸುತ್ತಾ ಮಾಡುತ್ತಾನೆ ವಂದನ,
ನೀನೇ ಸಕಲ ಚರಾಚರ ಪ್ರಪಂಚದ ತಂದೆ,
ಪರಮಪೂಜ್ಯ ಮಹಾಗುರುವೂ ನೀನೇ ಎಂದೆ,
ನಿನಗೆ ಸಮನಾದ ಮತ್ತೊಬ್ಬನಿಲ್ಲವೇ ಇಲ್ಲ,
ಸಮನಿಲ್ಲದ ಮೇಲೆ ಮಿಗಿಲಿನ ಮಾತೇ ಇಲ್ಲ.
ಪರಂ ಭೂಯಃ
ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್ ।
ಯಜ್ಜ್ಞಾತ್ವಾ
ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ ॥೨.೮೭॥
ಮಮ
ಯೋನಿರ್ಮಹದ್ ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಹಮ್ ।
ಸಂಭವಃ
ಸರ್ವಭೂತಾನಾಂ ತತೋ ಭವತಿ ಭಾರತ ॥೨.೮೮॥
ತಿಳಿಯಲೇಬೇಕಾದ ವಿಷಯಗಳಲ್ಲಿ ಉತ್ತಮೋತ್ತಮ ವಿಷಯ,
ಅದನ್ನ ದೃಢವಾಗಿ ತಿಳಿದವರಿಗೆಲ್ಲಾ ಸಂಸಾರದಿಂದ ವಿದಾಯ,
ಒಮ್ಮೆ ಆದಮೇಲೆ ಉತ್ತಮ ಜ್ಞಾನದನಾವರಣ,
ಸಂಸಾರದಿಂದ ಪರಮಸಿದ್ಧಿಯೆಡೆಗೆ ಪಯಣ.
ಮತ್ತೆ ಅರ್ಜುನನ ಕುರಿತು ಹೇಳುತ್ತಾನೆ ದೇವಕೀನಂದನ,
ನನ್ನ ಹೆಂಡತಿಯಾದ ಲಕ್ಷ್ಮಿಗೆ ಮಾಡುತ್ತೇನೆ ಗರ್ಭಾದಾನ,
ಅವಳಲ್ಲಾಗುತ್ತದೆ ಸೃಷ್ಟಿಯ ಬೀಜದ ಬಿತ್ತನೆಯ ಕ್ರಮ,
ನಂತರ ಸಕಲ ಸ್ಥಾವರ ಜಂಗಮ ಪ್ರಪಂಚದ ಉಗಮ.
ದ್ವಾವಿಮೌ
ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ ।
ಕ್ಷರಃ
ಸರ್ವಾಣಿ ಭೂತಾನಿ ಕೂಟಸ್ಥೋsಕ್ಷರ
ಉಚ್ಯತೇ ॥೨.೮೯॥
ಉತ್ತಮಃ
ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ ।
ಯೋ
ಲೋಕತ್ರಯಮಾವಿಶ್ಯ ಭಿಭರ್ತ್ಯವ್ಯಯ ಈಶ್ವರಃ ॥೨.೯೦॥
ಯಸ್ಮಾತ್
ಕ್ಷರಮತೀತೋsಹಮಕ್ಷರಾದಪಿ ಚೋತ್ತಮಃ ।
ಅತೋsಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ ॥೨.೯೧॥
ಯೋ
ಮಾಮೇವಮಸಮ್ಮೂಢೋ ಜಾನಾತಿ ಪುರುಷೋತ್ತಮಮ್ ।
ಸ ಸರ್ವವಿದ್
ಭಜತಿ ಮಾಂ ಸರ್ವಭಾವೇನ ಭಾರತ ॥೨.೯೨॥
ಇತಿ
ಗುಹ್ಯತಮಂ ಶಾಸ್ತ್ರಮಿದಮುಕ್ತಂ ಮಯಾsನಘ ।
ಏತದ್
ಬುದ್ಧ್ವಾ ಬುದ್ಧಿಮಾನ್ ಸ್ಯಾತ್ ಕೃತಕೃತ್ಯಶ್ಚ ಭಾರತ ॥೨.೯೩॥
ಶ್ರೀಕೃಷ್ಣ ಹೇಳುತ್ತಾನೆ ಅಸ್ವತಂತ್ರ ಚೇತನರಲ್ಲಿ ಎರಡು ತರ,
ಬ್ರಹ್ಮಾದಿ ಸಕಲ ಚೇತನರೂ ಕ್ಷರ-ಮಹಾಲಕ್ಷ್ಮಿಯವಳು ಅಕ್ಷರ,
ಮೇಲಿನ ಎರಡೂ ಕ್ಷರಪುರುಷ ಮತ್ತು ಅಕ್ಷರಪುರುಷ,
ಕ್ಷರಪುರುಷರಿಗಿದೆ ದೇಹ ನಾಶ,
ಅಕ್ಷರ ಲಕ್ಷ್ಮಿಯದು ನಾಶವಿರದ ವೇಶ,
ಎರಡಕ್ಕೂ ಮಿಗಿಲವ ಪುರುಷೋತ್ತಮನೆನ್ನುವುದು ವಿಶೇಷ.
ಇಂತಹ ಭಗವಂತ ಎಲ್ಲರೊಳಗಿದ್ದು ಸಲಹುವ ಅಂತರ್ಯಾಮಿ,
ಶಾಸ್ತ್ರ ಶ್ರುತಿ ಸ್ಮೃತಿ ಸತ್ಯ ತತ್ವ ಜ್ಞಾನ ಬೆಳಕು ಎಲ್ಲವೂ
ಅವನೇ ಸ್ವಾಮಿ,
ಈ ಜ್ಞಾನ ದೃಢವಾದ ಮೋಹರಹಿತನಾದ ಭಕ್ತ,
ಎಲ್ಲವನೂ ತಿಳಿದವನಾಗಿ ಆಗುತ್ತಾನವ ಮುಕ್ತ,
ಇದು ಗೌಪ್ಯವಾದ ಸಕಲ ಶಾಸ್ತ್ರದ ಸಾರ,
ಇದ ತಿಳಿದವನೇ ಬಿಡುಗಡೆಯಾದ ಧೀರ.
[Contributed by Shri Govind
Magal]
No comments:
Post a Comment
ಗೋ-ಕುಲ Go-Kula