Friday, 12 January 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 2: 77 - 81

ನಾsತ್ಮಾನಂ ವೇದ ಮುಗ್ಧೋsಯಂ ದುಃಖೀ ಸೀತಾಂ ಚ ಮಾರ್ಗತೇ ।
ಬದ್ಧಃ ಶಕ್ರಜಿತೇತ್ಯಾದಿ ಲೀಲೈಷsಸುರಮೋಹಿನೀ ॥೨.೭೭॥

ಮುಹ್ಯತೇ ಶಸ್ತ್ರಪಾತೇನ ಭಿನ್ನತ್ವಗ್ ರುಧಿರಸ್ರವಃ ।
ಅಜಾನನ್ ಪೃಚ್ಛತಿ ಸ್ಮಾನ್ಯಾನ್ ತನುಂ ತ್ಯಕ್ತ್ವಾ ದಿವಂ ಗತಃ ॥೨.೭೮॥

ಇತ್ಯಾದ್ಯಸುರಮೋಹಾಯ ದರ್ಶಯಾಮಾಸ ನಾಟ್ಯವತ್ ।
ಅವಿದ್ಯಮಾನಮೇವೇಶಃ ಕುಹಕಂ ತದ್ ವಿದುಃ ಸರಾಃ ೨.೭೯॥

ತನ್ನನ್ನು ತಾನು ತಿಳಿದಿರಲಿಲ್ಲ ಎಂಬ ನೋಟ,
ಮೂರ್ಛೆ ದುಃಖಕ್ಕೊಳಗಾದ ಸೋಜಿಗದ ಆಟ,
ಸೀತಾವಿಯೋಗಿಯಾಗಿ ಅವಳ ಹುಡುಕುವ ದುಃಖತಪ್ತ,
ಯುದ್ಧದಲ್ಲಿ ಮೂರ್ಛಿತನಾದ  -ನಾಗಪಾಶದಿಂದ ಬಂಧಿತ,
ಇವೆಲ್ಲಾ ಜಗನ್ನಾಟಕಧಾರಿಯ ವಿವಿಧ ವೇಷ,
ಅಯೋಗ್ಯರಿಗೆ ತೊಡಿಸಲು ತಪ್ಪುಗ್ರಹಿಕೆಯ ಪಾಶ,
ಸಾತ್ವಿಕ ಮುಕ್ತಿಯೋಗ್ಯರಿಗೆ ತಿಳಿವುದು ಅದರ ರೀತಿ,
ನಂಬದ ಅಯೋಗ್ಯರಿಗೆ ತಾರತಮ್ಯ ತಿಳಿಸುವ ನೀತಿ.

ಪ್ರಾದುರ್ಭಾವಾ ಹರೇಃ ಸರ್ವೇ ನೈವ ಪ್ರಕೃತಿದೇಹಿನಃ ।
ನಿರ್ದೋಷಾ ಗುಣಸಮ್ಪೂರ್ಣಾ ದರ್ಶಯನ್ತ್ಯನ್ಯಥೈವ ತು ॥೨.೮೦॥

ದುಷ್ಟಾನಾಂ ಮೋಹನಾರ್ಥಾಯ ಸತಾಮಪಿ ತು ಕುತ್ರಚಿತ್ ।
ಯಥಾಯೋಗ್ಯಫಲಪ್ರಾಪ್ತ್ಯೈ ಲೀಲೈಷಾ ಪರಮಾತ್ಮನಃ ॥೨.೮೧॥

ಇವೆಲ್ಲಾ ಆಟಗಳು ಭಗವಂತನ ಪ್ರಾದುರ್ಭಾವಗಳು,
ಇದ್ದದ್ದವೇ ಎದ್ದು  ಪ್ರಕಟವಾದ ಗುಣ ವಿಶೇಷಗಳು,
ಅವನಿಗೆಂದೆಂದೂ ಇಲ್ಲ ಪ್ರಾಕೃತ ಶರೀರ,
ಅವನೆಂದೂ ದೋಷದೂರ ಗುಣಸಾಗರ,
ಅವನೆಲ್ಲಾ ತೋರಿಕೆಗಳೂ ದುಷ್ಟಮೋಹನಾರ್ಥ,
ಒಮ್ಮೊಮ್ಮೆ ಸಜ್ಜನರಿಗೂ ಮೋಹ ತರಿಸುವ ಸಮರ್ಥ,
ಸ್ವಭಾವ ಯೋಗ್ಯತೆಯಂತೆ ಫಲ ಕೊಡುವ ಕಲೆ,

ಅದಕ್ಕೆಂದೇ ಭಗವಂತ ತೋರುವ ವಿವಿಧ ಲೀಲೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula