ತೃತೀಯಾಙ್ಗಂ
ಹರೇಃ ಶೇಷಃ ಪ್ರಾದುರ್ಭಾವಸಮನ್ವಿತಃ ।
ಪ್ರಾದುರ್ಭಾವಾ
ನರಶ್ಚೈವ ಲಕ್ಷ್ಮಣೋ ಬಲ ಏವ ಚ ॥೨.೧೨೧॥
ತನ್ನವತಾರಗಳೊಂದಿಗೆ ಹರಿಸೇವೆಯಲ್ಲಿ ಮೂರನೆಯವ ಶೇಷದೇವ,
ಯಮನಮಗ ನರ,ದಶರಥಪುತ್ರ ಲಕ್ಷ್ಮಣ,ವಸುದೇವಪುತ್ರ ಹಲಾಯುಧರಾಯ.
‘ರುದ್ರಾತ್ಮಕತ್ವಾಚ್ಛೇಷಸ್ಯ ಶುಕೋ ದ್ರೌಣಿಶ್ಚ ತತ್ತನೂ ।
‘ಇನ್ದ್ರೇ ನರಾಂಶಸಮ್ಪತ್ತ್ಯಾಪಾರ್ಥೋsಪೀಷತ್ ತದಾತ್ಮಕಃ ।
‘ಪ್ರದ್ಯುಮ್ನಾದ್ಯಾಸ್ತತೋ ವಿಷ್ಣೋರಙ್ಗಭೂತಾಃ ಕ್ರಮೇಣ ತು ॥೨.೧೨೨॥
ಮುಂಬರುವ
ಕಲ್ಪದಲ್ಲಿ ಶೇಷಪದವಿಗೇರುವನವ ರುದ್ರ,
ಶುಕ ಅಶ್ವತ್ಥಾಮರೂ ಶೇಷಾವೇಶರಾಗುವರೆಂಬುದು ಭದ್ರ,
ನರಾಂಶಯುಕ್ತ ಇಂದ್ರನಾದ ಅರ್ಜುನನಲ್ಲಿತ್ತು ಶೇಷಾವೇಶ,
ಅದಕೆಂದೇ ಅರ್ಜುನಗೂ ಕೊಟ್ಟಿದೆ ಮೂರನೇ ಸೇವಕನವಕಾಶ,
ಆನಂತರ ಪ್ರದ್ಯುಮ್ನ ಅನಿರುದ್ಧಾದಿಗಳಿಗೆ ವಿಷ್ಣು ಸೇವಾವಕಾಶ.
‘ಚರಿತಂ
ವೈಷ್ಣವಾನಾಂ ತದ್ ವಿಷ್ಣೋದ್ರೇಕಾಯ ಕಥ್ಯತೇ’ ।
ತಥಾ ಭಾಗವತೇsಪ್ಯುಕ್ತಂ ಹನೂಮದ್ವಚನಂ ಪರಮ್ ॥೨.೧೨೩॥
ಭಗವದ್ಭಕ್ತರ ಚರಿತ್ರೆ ತಂದು ಕೊಡುವುದು ಭಕ್ತಿಯ ಉದ್ರೇಕ,
ಭಾಗವತದಲ್ಲೂ ಕಾಣುತ್ತದೆ ಪ್ರಾಣ ಪ್ರತಿಪಾದಿಸುವ ಭಕ್ತಿಪಾಕ.
‘ಮರ್ತ್ಯಾವತಾರಸ್ತ್ವಿಹ ಮರ್ತ್ಯಶಿಕ್ಷಣಂ ರಕ್ಷೋವಧಾಯೈವ ನ ಕೇವಲಂ ವಿಭೋಃ ।
ಕುತೋsಸ್ಯ ಹಿ ಸ್ಯೂ ರಮತಃ ಸ್ವ ಆತ್ಮನ್ ಸೀತಾಕೃತಾನಿ ವ್ಯಸನಾನೀಶ್ವರಸ್ಯ
॥೨.೧೨೪॥
‘ನ ವೈಸ ಆತ್ಮಾssತ್ಮವತಾಮಧೀಶ್ವರೋ ಭುಙ್ಕ್ತೇ ಹಿ ದುಖಂ
ಭಗವಾನ್ ವಾಸುದೇವಃ ।
‘ನ ಸ್ತ್ರೀಕೃತಂ ಕಶ್ಮಲಮಶ್ನುವೀತ ನ ಲಕ್ಷ್ಮಣಂ ಚಾಪಿ ಜಹಾತಿ ಕರ್ಹಿಚಿತ್ ॥೨.೧೨೫॥
‘ಯತ್ಪಾದಪಙ್ಕಜಪರಾಗನಿಷೇವಕಾಣಾಂ ದುಃಖಾನಿ ಸರ್ವಾಣಿ ಲಯಂ ಪ್ರಯಾನ್ತಿ ।
‘ಸ ಬ್ರಹ್ಮವನ್ದ್ಯಚರಣೋ ಜನಮೋಹನಾಯ ಸ್ತ್ರೀಸಙ್ಗಿನಾಮಿತಿ ರತಿಂ ಪ್ರಥಯಂಶ್ಚಕಾರ’॥೨.೧೨೬
ಮಾನವ ಅವತಾರಿಯಾದಾಗ ಶ್ರೀಹರಿ,
ಮಾನವರಿಗದು ಶಿಕ್ಷಣ ಕೊಡುವ ಪರಿ,
ರಾವಣಾದಿ ರಾಕ್ಷಸರ ವಧೆಯೊಂದು ನೆಪ,
ನೆನೆದುಕೊಂಡೇ ಸಂಹರಿಸಬಲ್ಲನವ ಭೂಪ,
ಸೀತಾವಿಯೋಗ ದುಃಖ ಉಂಟೇ? ಅವ ಸ್ವರಮಣ,
ಮನುಷ್ಯನಂತಾಡಿ ದೇವತೆ- ಮನುಷ್ಯರಿಗಿತ್ತ ಶಿಕ್ಷಣ.
ಜ್ಞಾನಿಗಳ ಆದಿಗುರು ಗುಣಪರಿಪೂರ್ಣ ಸರ್ವವ್ಯಾಪ್ತ,
ಅಂಥಾ ದೇವನಿಗೆ ದುಃಖವಿಲ್ಲೆಂಬುದು ಶೃತಿಗಳಲಿ ಉಕ್ತ,
ದೋಷದೂರನಾದ ಗುಣಸಾಗರನಿಗೆಲ್ಲಿಯ ಕೋಪ?
ದುಷ್ಟರ ದಾರಿ ತಪ್ಪಿಸಲು ಅವನ ನಾಟಕದ ಪ್ರತಾಪ!
ಯಾರೆಲ್ಲಾ ಅವನ ಪಾದಪದ್ಮಗಳಲ್ಲಿ ಭಕ್ತಿಯಿಂದಾಶ್ರಿತ,
ಅವರೆಲ್ಲಾ ದುಃಖ ಪಾಪಗಳೂ ನಿಸ್ಸಂದೇಹ ಭಸ್ಮೀಕೃತ,
ದುರ್ಜನ ಅತಿಕಾಮಿಗಳಿಗೆ(ವಿಷಯಾಸಕ್ತ) ತೋರಿದ ಆಟ,
ಸಜ್ಜನರಿಗೆ ಅವ ಮಾಡಿದ ಲೀಲಾವಿನೋದದ ತತ್ವ ಪಾಠ.
[Contributed by Shri Govind
Magal]
No comments:
Post a Comment
ಗೋ-ಕುಲ Go-Kula