ವರಾದಜೇಯತ್ವಮವಾಪ ದೈತ್ಯರಾಟ್ ಚತುರ್ಮುಖಸ್ಯೈವ ಬಲಿರ್ಯದಾ ತದಾ ।
ಅಜಾಯತೇನ್ದ್ರಾವರಜೋsದಿತೇಃ
ಸುತೋ ಮಹಾನಜೋsಪ್ಯಬ್ಜಭವಾದಿಸಂಸ್ತುತಃ
॥೩.೪೫॥
ದೈತ್ಯರಿಗೆಲ್ಲಾ
ಒಡೆಯನಾದ ಬಲಿಚಕ್ರವರ್ತಿ,
ಬ್ರಹ್ಮವರಬಲದಿ
ಅಜೇಯತ್ವ ಪಡೆದ ಕೀರ್ತಿ.
ಭಗವಂತ ಅದಿತಿಯಲ್ಲಿ
ಇಂದ್ರನ ತಮ್ಮನಾಗಿ ಬಂದ,
ದೇವತೆಗಳಿಂದ
ವಂದಿತನಾಗಿ ಇತ್ತ ಅವರಿಗೆ ಆನಂದ.
ಸ ವಾಮನಾತ್ಮಾsಸುರಭೂಭೃತೋsಧ್ವರಂ ಜಗಾಮ ಗಾಂ ಸನ್ನಮಯನ್ ಪದೇಪದೇ ।
ಜಹಾರ ಚಾಸ್ಮಾಚ್ಛಲತಸ್ತ್ರಿವಿಷ್ಟಪಂತ್ರಿಭಿಃ ಕ್ರಮೈಸ್ತಚ್ಚ ದದೌ
ನಿಜಾಗ್ರಜೇ ॥೩.೪೬॥
ನಾರಾಯಣನೇ ವಟುವೇಷದ
ವಾಮನನಾದ,
ಬಲಿ ಯಜ್ಞಮಂಟಪಕೆ
ಭೂಮಿ ಭಾಗಿಸುತಾ ನಡೆದ.
ಬಲಿಯಲ್ಲಿ ಬೇಡಿದ
ಚಮತ್ಕಾರದಿ ಮೂರು ಪಾದ ಭೂಮಿ ದಾನ,
ಮೂರು ಹೆಜ್ಜೆಯಲಿ
ತೋರಿದ ಮೂರ್ಲೋಕವೂ ತನ್ನದೇ ಅಧೀನ.
ಇಲ್ಲಿ ಅಣ್ಣ
ಇಂದ್ರನಾದರೆ ತಮ್ಮನಾದ ವಾಮನ,
ಪಡೆದ
ಮೂರ್ಲೋಕವನ್ನು ಅಣ್ಣಗೆ ಮಾಡಿದ ಪ್ರದಾನ.
ಪಿತಾಮಹೇನಾಸ್ಯ ಪುರಾ ಹಿ ಯಾಚಿತೋ ಬಲೇಃ ಕೃತೇ ಕೇಶವ ಆಹ ಯದ್ ವಚಃ ।
ನಾಯಾಞ್ಚ ಯಾsಹಂ ಪ್ರತಿಹನ್ಮಿ ತಂ ಬಲಿಂ ಶುಭಾನನೇತ್ಯೇವ ತತೋsಭ್ಯಯಾಚತ
॥೩.೪೭॥
ಭಗವಂತ ನೃಸಿಂಹ
ಭಕ್ತಪ್ರಹ್ಲಾದನ ಸಂಬಂಧದ ರೀತಿ,
ಕೊಟ್ಟ ಮಾತನುಳಿಸಿದ
ತೋರಿ ಅಪಾರ ಅನುಗ್ರಹ ಪ್ರೀತಿ.
ಪ್ರಹ್ಲಾದನ ವಂಶದ
ಮೇಲವನ ವಿಶೇಷ ಅನುಗ್ರಹ,
ದಂಡಿಸಿ ತುಳಿದು
ಮಾಡಲಿಲ್ಲವ ಬಲಿಯ ನಿಗ್ರಹ.
[Contributed by Shri Govind
Magal]
No comments:
Post a Comment
ಗೋ-ಕುಲ Go-Kula