Monday, 12 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 11 - 14


ಸೂತ್ರಂ ಸ ವಾಯುಃ ಪುರುಷೋ ವಿರಿಞ್ಚಃ ಪ್ರದ್ಯುಮ್ನತಶ್ಚಾಥ ಕೃತೌ ಸ್ತ್ರಿಯೌ ದ್ವೇ ।
ಪ್ರಜಜ್ಞತುರ್ಯಮಳೇ ತತ್ರ ಪೂರ್ವಾ ಪ್ರಧಾನಸಙ್ಜ್ಞಾ ಪ್ರಕೃತಿರ್ಜನಿತ್ರೀ ॥೩.೧೧॥

ಆ ಮುಖ್ಯಪ್ರಾಣನ ಇನ್ನೊಂದು ಹೆಸರು "ಸೂತ್ರ",
ಹಾಗೇ ಚತುರ್ಮುಖನಿಗೆ "ಪುರುಷ "ಎಂಬ ಪಾತ್ರ.
ಅವ ರಿಬ್ಬರ ಗುಹ್ಯ ನಾಮ ಪುರುಷ ಮತ್ತು ಸೂತ್ರ,
ಗಮನದಲ್ಲಿರಬೇಕು ಇದು  ನೋಡುವಾಗ ಶಾಸ್ತ್ರ.

ಪ್ರದ್ಯುಮ್ನ -ಕೃತಿ ರೂಪದಿಂದಾದ ಸಂತಾನ,
ಅವಳಿಜವಳಿ ಇಬ್ಬರಲ್ಲಿ ಮೊದಲವಳು "ಪ್ರಧಾನ".
ಪ್ರಕೃತಿ ಎಂಬ ಹೆಸರುಳ್ಳ ಸರಸ್ವತಿ ದೇವಿ,
ಎಲ್ಲಾ ಜೀವರಾಶಿಗೆ ಅವಳೇ ಮಹಾತಾಯಿ.

ಶ್ರದ್ಧಾ ದ್ವಿತೀಯಾsಥ ತಯೋಶ್ಚ ಯೋಗೋ ಬಭೂವ ಪುಂಸೈವ ಚ ಸೂತ್ರನಾಮ್ನಾ ।
ಹರೇರ್ನಿಯೋಗಾದಥ ಸಮ್ಪ್ರಸೂತೌ ಶೇಷಃ ಸುಪರ್ಣಶ್ಚ ತಯೋಃ ಸಹೈವ ॥೩.೧೨॥

ಪ್ರದ್ಯುಮ್ನ ಪುತ್ರಿಯರಲ್ಲಿ ಎರಡನೆಯವಳು ಶ್ರದ್ಧಾ,
ಬ್ರಹ್ಮ-ಸರಸ್ವತಿ ,ವಾಯು-ಭಾರತಿ ಜೊತೆಯಾದರು ಸಿದ್ಧ.
ಅವರುಗಳದು ಅನಾದಿ ಕಾಲದ ದಾಂಪತ್ಯ,
ಸಹಜ ಜೊತೆಯಾದರು ಎಂಬುದೇ ಔಚಿತ್ಯ.
ತದನಂತರ ಭಗವಂತನ ಆಜ್ಞಾ ಪಾಲನ,
ಬ್ರಹ್ಮ ವಾಯುವಿರಿಂದ ಗರುಡ ಶೇಷರ ಜನನ.

ಶೇಷಸ್ತಯೋರೇವ ಹಿ ಜೀವನಾಮಾ  ಕಾಲಾತ್ಮಕಃ ಸೋsಥ ಸುಪರ್ಣ ಆಸೀತ್ ।
ತೌ ವಾಹನಂ ಶಯನಂ ಚೈವ ವಿಷ್ಣೋಃ ಕಾಲಾ ಜಯಾದ್ಯಾಶ್ಚ ತತಃ ಪ್ರಸೂತಾಃ ॥೩.೧೩॥

ಅವರಿಬ್ಬರಲ್ಲಿ ಶೇಷ -ಜೀವ ; ಗರುಡ -ಕಾಲ,
ಭಗವಂತಗೆ ವಾಹನ ಹಾಸಿಗೆಯಾದ ಜಾಲ.
ಕಾಲದ ಮೇಲೇ ದೇವರ ಸವಾರಿ,
ಸಂಕೇತ-ಅಂತರ್ಯಾಮಿ-ರೂವಾರಿ.
ತದನಂತರ ಜಯ ಮೊದಲಾದ ಎಂಟು ಮಂದಿ,
ದ್ವಾರಪಾಲಕರಾಗಲು ಬಂದರು ಜನನ ಹೊಂದಿ.




ಕಾಲಾ ಜಯಾದ್ಯಾ ಅಪಿ ವಿಷ್ಣುಪಾರ್ಷದಾ ಯಸ್ಮಾದಣ್ಡಾತ್ ಪರತಃ ಸಮ್ಪ್ರಸೂತಾಃ ।
ನೀಚಾಃ ಸುರೇಭ್ಯಸ್ತತ ಏವ ತೇsಖಿಲಾ ವಿಷ್ವಕ್ಸೇನೋ ವಾಯುಜಃ ಖೇನ ತುಲ್ಯಃ ॥೩.೧೪॥

ಕಾಲಾಭಿಮಾನಿಗಳೇ ಅವರು ಜಯ ವಿಜಯ ಮೊದಲಾದವರು,
ಪಿಂಡಾಂಡ ಬ್ರಹ್ಮಾಂಡ ಎರಡರಲ್ಲೂ ದೇವರ ದ್ವಾರಪಾಲಕರು.
ಬ್ರಹ್ಮಾಂಡದಿಂದ ಹೊರಗೆ ಹುಟ್ಟು ಪಡೆದ ಇವರು,
ದೇವತೆಗಳಿಗಿಂತ ತಾರತಮ್ಯದಲ್ಲಿ ಕೆಳಗಿನವರು.
ನಿಯಂತ್ರಕ ಸೇನಾಧಿಪತಿಯೊಬ್ಬ ವಿಶ್ವಕ್ಸೇನ,
ಮುಖ್ಯಪ್ರಾಣನಿಂದ ಆಯಿತು ಅವನ ಜನನ.
ಈತನದು ಗಣಪಗೆ ಸಮನಾದ ಹದಿನೆಂಟನೇ ಕಕ್ಷೆ,
ಜಯಾದಿ ಎಂಟು ಮಂದಿಯದು ಹತ್ತೊಂಬತ್ತನೇ ಕಕ್ಷೆ.
[Contributed by Shri Govind Magal]

No comments:

Post a Comment

ಗೋ-ಕುಲ Go-Kula