ಸುರಾಸುರಾಣಾಮುದಧಿಂ ವಿಮಥ್ನತಾಂ ದಧಾರ ಪೃಷ್ಠೇನ ಗಿರಿಂ ಸ ಮನ್ದರಮ್ ।
ವರಪ್ರದಾನಾದಪರೈರಧಾರ್ಯಂ ಹರಸ್ಯ ಕೂರ್ಮೋ ಬೃಹದಣ್ಡವೋಢಾ ॥೩.೪೪॥
ದೇವತೆಗಳು
ಅಸುರರಿಂದಾಯಿತು ಕ್ಷೀರ ಸಮುದ್ರ ಮಥನ,
ಕೂರ್ಮರೂಪಿಯಾಗಿ
ಹರಿ ಮಾಡಿದ ಮಂದರ ಧಾರಣ.
ಇತರರು ಮಂದರ
ಹೊರಲಾಗದಂತೆ ಸದಾಶಿವನ ವರ,
ಬ್ರಹ್ಮಾಂಡವನೇ
ಹೊತ್ತವಗೆ ಇದ್ಯಾವ ಸೀಮೆಯ ವ್ಯಾಪಾರ.
(ಗ್ರಂಥಾಧ್ಯಯನಕೆ
ಬೇಕಾದರೆ ಸ್ಫೂರ್ತಿ,
ಸ್ಮರಿಸಿಕೊಳ್ಳಬೇಕು ಅಮೃತ ಮಥನದ ನೀತಿ,
ಸುರ ಅಸುರರಿಬ್ಬರೂ ಮಾಡಿದ ಮಥನ,
ಒಳಿತು ಕೆಡುಕುಗಳ ತಿಕ್ಕಾಟದ ಚಿತ್ರಣ,
ಮನವೇ ಕ್ಷೀರಸಾಗರ ಕಾಮವದು ವಾಸುಕಿ,
ಭದ್ರತಳಕ್ಕೆ ಹರಿ ಕೂತ ಕೂರ್ಮನಾಗಿ ಬೆನ್ಹಾಕಿ,
ಮೊದಲು ಬರುವುದೇ ಘೋರ ಹಾಲಾಹಲ,
ಬೇಕು ನೀಲಕಂಠನಂತೆ ನಿರ್ಬಂಧಿಸುವ ಛಲ,
ಕಂಠದಿಂದ ಕೆಳಗಿಳಿಯದಿದ್ದರೆ ವಿಷ,
ಮಾತು ಮನವಾಗುವುದು ಪೀಯೂಷ,
ಮಾತು -ಪಾರ್ವತಿ ; ಮನವದು-ರುದ್ರ,
ಇಬ್ಬರ ಅನುಗ್ರಹವಿರೆ ಎಲ್ಲವೂ ಸುಭದ್ರ).
[Contributed by Shri Govind
Magal]
No comments:
Post a Comment
ಗೋ-ಕುಲ Go-Kula