(ಮಹಾಭಾರತದಲ್ಲಿನ ನಿತ್ಯ ಪಾರಾಯಣ ಮಾಡುವ
ಶ್ಲೋಕ,
ಮಥಿಸಿ ಕೊಡುತ್ತಾರೆ ಆಚಾರ್ಯರು
ಅಧ್ಯಾತ್ಮದಿವ್ಯ ಪಾಕ).
ನಾರಾಯಣಂ ನಮಸ್ಕೃತ್ಯ ನರಂ ಚೈವ
ನರೋತ್ತಮಮ್ ।
ದೇವೀಂ ಸರಸ್ವತೀಂ ವ್ಯಾಸಂ ತತೋ
ಜಯಮುದೀರಯೇ ॥೩.೦೪॥
ವ್ಯಾಸ ಸರಸ್ವತಿ ಲಕ್ಷ್ಮೀ ವಾಯು ಶೇಷ ಮತ್ತು ಶ್ರೀಹರಿ,
ಇವರೆಲ್ಲರನು ವಂದಿಸಿ ಆಚಾರ್ಯ ಗ್ರಂಥ ಹೇಳುವ ಪರಿ.
ಮೊದಲು ವಂದಿತ ಶ್ರೀಮನ್ನಾರಾಯಣ,
ಎಲ್ಲರೊಳಗಿನ ಮೂಲ ಮುಖ್ಯ ಹೂರಣ.
ನರ (ಶೇಷ) ನರೋತ್ತಮ (ವಾಯು)ರಿಗೆ ವಂದನೆ,
ಲಕ್ಷ್ಮೀ -ಸರಸ್ವತಿ -ವೇದವ್ಯಾಸರಿಗೆ -ಅಭಿವಂದನೆ.
‘ಜಯೋ ನಾಮೇತಿಹಾಸೋಯಂ
ಕೃಷ್ಣದ್ವೈಪಾಯನೇರಿತಃ ।
‘ವಾಯುರ್ನರೋತ್ತಮೋ ನಾಮ ದೇವೀತಿ
ಶ್ರೀರುದೀರಿತಾ ॥೩.೦೫॥
‘ನಾರಾಯಣೋ ವ್ಯಾಸ ಇತಿ
ವಾಚ್ಯವಕ್ತೃಸ್ವರೂಪಕಃ ।
‘ಏಕಃ ಸ ಭಗವಾನುಕ್ತಃ ಸಾಧಕೇಶೋ ನರೋತ್ತಮಃ
॥೩.೦೬॥
‘ಉಪಸಾಧಕೋ ನರಶ್ಚೋಕ್ತೋ ದೇವೀ
ಭಾಗ್ಯಾತ್ಮಿಕಾ ನೃಣಾಮ್ ।
‘ಸರಸ್ವತೀ ವಾಕ್ಯರೂಪಾ ತಸ್ಮಾನ್ನಮ್ಯಾ ಹಿ
ತೇsಖಿಲಾಃ ।
‘ಕೃಷ್ಣೌ ಸತ್ಯಾ ಭೀಮಪಾರ್ಥೌ
ಕೃಷ್ಣೇತ್ಯುಕ್ತಾ ಹಿ ಭಾರತೇ’ ॥೩.೦೭॥
ಜಯ ಎಂದು ಕರೆಯಲ್ಪಡುವುದದು ಮಹಾಭಾರತ,
ಕರ್ತೃ ಪ್ರತಿಪಾದ್ಯ ಅಭಿಮಾನಿಗಳೆಲ್ಲರಿಲ್ಲಿ
ವಂದಿತ.
ಪ್ರತಿಪಾದ್ಯ ಹೆದ್ದೈವವಾಗಿ ವಂದಿತನವ
ನಾರಾಯಣ,
ಕರ್ತೃ ವ್ಯಾಸರಾದ್ದರಿಂದ ಅವರಿಗೆ ವಂದನಾತೋರಣ.
ಉಸಿರನ್ನೀವ ಪ್ರಾಣ ಭಗವದ್ ಚಿಂತನೆ ಹಚ್ಚುವ ತ್ರಾಣ,
ನರೋತ್ತಮನಾಗಿ ವಿಶೇಷ ವಂದಿತನಿಲ್ಲಿ ಮುಖ್ಯಪ್ರಾಣ.
ಶ್ರವಣ ಮನನ ನಿಧಿಧ್ಯಾಸನಕ್ಕಭಿಮಾನಿ (ಶೇಷ)ನರ,
ಸಾಧನಾನುಗ್ರಹ ಬೇಡುತ್ತಾ ನರಗೊಂದು
ನಮಸ್ಕಾರ.
ಅವರಲ್ಲಿ ಗರುಡ ಶೇಷ ರುದ್ರರೂ ವಂದಿತಾರ್ಹರೆಂದು ಸಾರ.
ಸಮಸ್ತ ವೇದಾಭಿಮಾನಿ ಅವಳು ಲಕ್ಷ್ಮೀಮಾತ,
ಸರಸ್ವತಿ ಭಾರತಿಯರಿದ್ದರೇ ಮಾತು ಓತಪ್ರೋತ.
ಹೀಗೆ ಗ್ರಂಥಾಧ್ಯಯನ ಆರಾಧನೆಯ ರೀತಿ,
ಆಚಾರ್ಯ ತಿಳಿಸುವ ತಾರತಮ್ಯೋಕ್ತ ನೀತಿ.
ಮಹಾಭಾರತದಲ್ಲಿ ಮೊದಲಾಗುವ ಆರು ಮೂರ್ತಿಗಳಿಗೆ ನಮಸ್ಕಾರ,
ಕಾಣಸಿಗುತ್ತದೆ ಮಹಾಭಾರತದಲ್ಲಿ ಅವರೆಲ್ಲರ ಅವತಾರ,
ವೇದವ್ಯಾಸ ,ಶ್ರೀಕೃಷ್ಣ (ನಾರಾಯಣ),
ಸತ್ಯಭಾಮೆ (ದೇವೀ),ನರೋತ್ತಮ (ಭೀಮಸೇನ),
ಪಾರ್ಥ (ನರ), ದ್ರೌಪದಿ (ಸರಸ್ವತಿ),
ಹೀಗೆ ನೋಡುವದ ಹೇಳಿದ್ದು ಪೂರ್ಣಪ್ರಮತಿ.
[Contributed by
Shri Govind Magal]
No comments:
Post a Comment
ಗೋ-ಕುಲ Go-Kula