Tuesday, 13 February 2018

ಮಹಾಭಾರತ ತಾತ್ಪರ್ಯನಿರ್ಣಯ, ಕನ್ನಡದಲ್ಲಿ 3: 20 - 22

ಏತೇ ಹಿ ದೇವಾಃ ಪುನರಣ್ಡಸೃಷ್ಟಾವಶಕ್ನುವನ್ತೋ ಹರಿಮೇತ್ಯ ತುಷ್ಟುವುಃ ।
ತ್ವಂ ನೋ ಜಗಚ್ಚಿತ್ರವಿಚಿತ್ರಸರ್ಗನಿಸ್ಸೀಮಶಕ್ತಿಃ ಕುರು ಸನ್ನಿಕೇತಮ್ ॥೩.೨೦॥

ಹೀಗಾಯಿತು ದೇವತೆಗಳ ಸೂಕ್ಷ್ಮ ಮತ್ತು ಸ್ಥೂಲ ಸೃಷ್ಟಿ,
ಬ್ರಹ್ಮಾಂಡದ ಸೃಷ್ಟಿಗಾಗಿ ಸ್ತೋತ್ರ ಮಾಡುತ್ತಾರವರು ಸಮಷ್ಟಿ.
ನೀನೇ ಜಗತ್ತಿನ ಚಿತ್ರ ವಿಚಿತ್ರ ಸೃಷ್ಟಿಯ ನಿಸ್ಸೀಮ ಶಕ್ತಿ,
ಸೃಷ್ಟಿಕಾರ್ಯದಿ ಮಾಡು ನಿನ್ನ ಸನ್ನಿಧಾನದ ಅಭಿವ್ಯಕ್ತಿ.

ಇತಿ ಸ್ತುತಸ್ತೈಃ ಪುರುಷೋತ್ತಮೋsಸೌ ಸ ವಿಷ್ಣುನಾಮಾ ಶ್ರಿಯಮಾಪ ಸೃಷ್ಟಯೇ ।
ಸುಷಾವ ಸೈವಾಣ್ಡಮಧೋಕ್ಷಜಸ್ಯ ಶುಷ್ಮಂ ಹಿರಣ್ಯಾತ್ಮಕಮಮ್ಬುಮಧ್ಯೇ ॥೩.೨೧॥

ಎಲ್ಲಾ ದೇವತೆಗಳಿಂದ ಸ್ತುತಿಸಲ್ಪಟ್ಟ ನಾರಾಯಣ,
ವಿಷ್ಣುವಾಗಿ ಸೃಷ್ಟಿಗೆ ಲಕ್ಷ್ಮಿಯಲ್ಲಿ ಮಾಡಿದ ರಮಣ.
ಭಗವಂತನ ದಿವ್ಯ ತೇಜೋಮಯ ರೇತಸ್ಸಿನ ಕಾರಣ,
ಲಕ್ಷ್ಮಿ ಹೆತ್ತ ಚಿನ್ನವರ್ಣದ ಬ್ರಹ್ಮಾಂಡದ ಅನಾವರಣ.

ತಸ್ಮಿನ್ ಪ್ರವಿಷ್ಟಾ ಹರಿಣೈವ ಸಾರ್ಧಂ ಸರ್ವೇ ಸುರಾಸ್ತಸ್ಯ ಬಭೂವ ನಾಭೇಃ ।
ಲೋಕಾತ್ಮಕಂ ಪದ್ಮಮಮುಷ್ಯ ಮಧ್ಯೇ ಪುನರ್ವಿರಿಞ್ಚೋsಜನಿ ಸದ್ಗುಣಾತ್ಮಾ ॥೩.೨

ಆ ಬ್ರಹ್ಮಾಂಡದೊಳಗೆ ಹರಿಸಮೇತ ಎಲ್ಲಾ ದೇವತೆಗಳ ಪ್ರವೇಶ,
ಹರಿನಾಭಿಯಿಂದ ಲೋಕವೆನ್ನುವ ತಾವರೆ ಅರಳಿದ್ದದು ವಿಶೇಷ.
ಅದರ ಮಧ್ಯದಲ್ಲಿ ಗುಣಗಳಿಗೆ ನೆಲೆಯಾದ ಬ್ರಹ್ಮನ ಹುಟ್ಟು,
ಹರಿಹೊಕ್ಕುಳಕಮಲದಲಿ ನಾವು ಬ್ರಹ್ಮನ ನೋಡೋ ಗುಟ್ಟು.
[Contributed by Shri Govind Magal]

No comments:

Post a Comment

ಗೋ-ಕುಲ Go-Kula