ದ್ರೌಣಿಕರ್ಣ್ಣಾಭಿಗುಪ್ತಂ
ತಂ ನಾಶಕದ್ಧನ್ತುಮರ್ಜ್ಜುನಃ ।
ತತ್ರ ವೇಗಂ ಪರಂ ಚಕ್ರೇ
ದ್ರೌಣಿಃ ಪಾರ್ತ್ಥನಿವಾರಣೇ ॥೨೬.೧೮೬ ॥
ಅಶ್ವತ್ಥಾಮ, ಕರ್ಣರಿಂದ ರಕ್ಷಿಸಲ್ಪಟ್ಟ ಜಯದ್ರಥ, ಅವನನ್ನು
ಕೊಲ್ಲಲು ಅರ್ಜುನನಾಗಲಿಲ್ಲ ಶಕ್ತ. ಅಶ್ವತ್ಥಾಮ ಹೊರಟ ಅರ್ಜುನನ ತಡೆಯುವತ್ತ. ಯುದ್ಧಕ್ಕಿಳಿದ
ಅವನಲ್ಲಿದ್ದದ್ದು ರಭಸದ ಚಿತ್ತ.
ನಚೈನಮಶಕತ್ ತರ್ತ್ತುಂ
ಯತ್ನವಾನಪಿ ಫಲ್ಗುನಃ ।
ತಯೋರಾಸೀಚ್ಛಿರಂ
ಯುದ್ಧಂ ಚಿತ್ರಂ ಲಘು ಚ ಸುಷ್ಠು ಚ ॥೨೬.೧೮೭ ॥
ಅರ್ಜುನನ ಪ್ರಯತ್ನವೂ
ಕೂಡಾ ಅಶ್ವತ್ಥಾಮನನ್ನು ಮೀರಲಾಗಲಿಲ್ಲ ಬದ್ಧ,
ಅವರಿಬ್ಬರಿಗೂ ನಡೆಯಿತು
ಆಶ್ಚರ್ಯಕರ ಭೀಕರ ಬಲುವೇಗವಾದ ಯುದ್ಧ.
ತದ್ ದೃಷ್ಟ್ವಾ ಭಗವಾನ್
ಕೃಷ್ಣೋ ಲೋಹಿತಾಯತಿ ಭಾಸ್ಕರೇ ।
ಅಜಿತೇ ದ್ರೋಣತನಯೇ
ತ್ವಹತೇ ಚ ಜಯದ್ರಥೇ ।
ಅರ್ಜ್ಜುನಸ್ಯ
ಜಯಾಕಾಙ್ಕ್ಷೀ ಸಸರ್ಜ್ಜ ತಮ ಊರ್ಜ್ಜಿತಮ್ ॥೨೬.೧೮೮ ॥
ಅದನ್ನು ಶ್ರೀಕೃಷ್ಣ
ನೋಡಿದ, ಸೂರ್ಯದೇವ
ಕೆಂಪಾಗುತ್ತಿದ್ದ,
ಅಶ್ವತ್ಥಾಮ ಸೋಲದೇ
ಇದ್ದ , ಜಯದ್ರಥ
ಇನ್ನೂ ಸಾಯದಿದ್ದ.
ಅರ್ಜುನಗೆ ಹಾಕಲು ಜಯದ
ಮಾಲೆ, ಕೃಷ್ಣ
ಸೃಷ್ಟಿಮಾಡಿದ ದಟ್ಟವಾದ ಕತ್ತಲೆ.
ತಮೋವ್ಯಾಪ್ತೇ ಗಗನೇ
ಸೂರ್ಯ್ಯಮಸ್ತಂ ಗತಂ ಮತ್ವಾ ದ್ರೌಣಿಪೂರ್ವಾಃ ಸಮಸ್ತಾಃ ।
ವಿಶಶ್ರಮುಃ
ಸೈನ್ಧವಶ್ಚಾರ್ಜ್ಜುನಸ್ಯ ಹತಪ್ರತಿಜ್ಞಸ್ಯ ಮುಖಂ ಸಮೈಕ್ಷತ ॥೨೬.೧೮೯ ॥
ಕತ್ತಲೆ ತುಂಬಿದ ಆಕಾಶದ
ಆ ನೋಟ, ಸೂರ್ಯ
ಮುಳುಗಿದಂತೇ ಇದ್ದ ಆಟ.
ಯುದ್ಧವಿರಾಮ ಎಂದು
ತಿಳಿದ ಅಶ್ವತ್ಥಾಮ ಮುಂತಾದವರದು ವಿಶ್ರಾಂತಿಯತ್ತ ಚಿತ್ತ,
ಸೈಂಧವ
ನೋಡಲೆತ್ನಿಸುತ್ತಿದ್ದ ಪ್ರತಿಜ್ಞೆ ಈಡೇರಿಸದ ಹತಾಶೆಯಲ್ಲಿದ್ದ ಅರ್ಜುನನತ್ತ.
ತದಾ ಹರೇರಾಜ್ಞಯಾ
ಶಕ್ರಸೂನುಶ್ಚಕರ್ತ್ತ ಬಾಣೇನ ಜಯದ್ರಥಸ್ಯ ।
ಅಗ್ನಿಂ ವಿವಿಕ್ಷನ್ನಿವ
ದರ್ಶಿತಃ ಶಿರಸ್ತದಾ ವಚಃ ಪ್ರಾಹ ಜನಾರ್ದ್ದನಸ್ತಮ್ ॥೨೬.೧೯೦ ॥
ಅಗ್ನಿ ಪ್ರವೇಶ
ಮಾಡುವನೇನೋ ಎಂಬಂತೆ ಆಗ ಅರ್ಜುನ ಕಾಣಿಸಿದ,
ಆಗ ಕೃಷ್ಣನಾಜ್ಞೆಯಂತೆ
ಅವನು ಬಾಣದಿಂದ ಸೈಂಧವನ ಕತ್ತು ಕತ್ತರಿಸಿದ.
ಆಗ ಶ್ರೀಕೃಷ್ಣನು
ಅರ್ಜುನನನ್ನು ಕುರಿತು ಈ ಮುಂದಿನ ಮಾತನ್ನು ಹೇಳಿದ.
ನೈತಚ್ಛಿರಃ ಪಾತಯ
ಭೂತಳೇ ತ್ವಮಿತೀರಿತಃ ಪಾಶುಪತಾಸ್ತ್ರತೇಜಸಾ ।
ದಧಾರ
ಬಾಣೈರನುಪುಙ್ಖಪುಙ್ಖೈಃ ಪುನಸ್ತಮೂಚೇ ಗರುಡಧ್ವಜೋ ವಚಃ ॥೨೬.೧೯೧ ॥
ಇದಂ ಪಿತುಸ್ತಸ್ಯ ಕರೇ
ನಿಪಾತ್ಯತಾಂ ವರೋSಸ್ಯ ದತ್ತೋ ಹಿ ಪುರಾSಮುನಾSಯಮ್ ।
ಶಿರೋ ನಿಕೃತ್ತಂ ಭುವಿ
ಪಾತಯೇದ್ ಯಸ್ತವಾಸ್ಯ ಭೂಯಾಚ್ಚ ಶಿರಃ ಸಹಸ್ರಧಾ ॥೨೬.೧೯೨ ॥
ಇತಿ ಸ್ಮ ವದ್ಧ್ಯಃ ಸ
ಪಿತಾSಪಿ ತೇನೇತ್ಯುದೀರಿತೇ
ತಸ್ಯ ಸನ್ಧ್ಯಾಕ್ರಿಯಸ್ಯ ।
ಅಙ್ಕೇ ವ್ಯಧಾತ್
ತಚ್ಛಿರ ಆಶು ವಾಸವಿಃ ಸ ಸಮ್ಭ್ರಮಾತ್ ತದ್ ಭುವಿ ಚ ನ್ಯಪಾತಯತ್ ॥೨೬.೧೯೩ ॥
‘ಇವನ ತಲೆಯನ್ನು
ಭೂಮಿಯಲ್ಲಿ ಬೀಳಿಸಬೇಡ’ ಎಂದು ಶ್ರೀಕೃಷ್ಣ ಪ್ರಚೋದಿಸಿದ,
ಅರ್ಜುನ
ಪಾಶುಪತಾಸ್ತ್ರದ ಪ್ರಭಾವದಿಂದ ಸರಣಿ ಬಾಣವನ್ನು ಬಿಡುತ್ತಾ ತಡೆದ.
ಆ ತಲೆ ಕೆಳಗೆ ಬೀಳದಂತೆ
ನೋಡಿಕೊಂಡವಗೆ ಮತ್ತೆ ಗರುಡಧ್ವಜ ಶ್ರೀಕೃಷ್ಣನು ಹೇಳಿದ:
“ಈ ತಲೆ ಸೈಂಧವನ ತಂದೆಯ
ಕೈಯಲ್ಲಿ ಬೀಳಲಿ" ಅವನಿಗೆ ವರವಿದೆ ಅವನ ತಂದೆಯಿಂದ;
ಇವನ ತಲೆಯ ನೆಲಕ್ಕೆ
ಕೆಡವಿದವನ ತಲೆಯೂ ಒಡೆಯುತ್ತದೆ ಸಾವಿರ ಹೋಳಾಗುವುದರಿಂದ.
ಆ ಕಾರಣದಿಂದ ಧೂರ್ತನಾದ
ಜಯದ್ರಥನ ತಂದೆ ಕೂಡಾ ವಧಾರ್ಹನಾಗಿದ್ದಾನೆ,
ಅರ್ಜುನ ಆ ತಲೆಯನ್ನು
ಜಯದ್ರಥನ ತಂದೆಯ ತೊಡೆಯ ಮೇಲೆ ಬೀಳಿಸುತ್ತಾನೆ,
ಆಗವನು ಕುರುಕ್ಷೇತ್ರದ
ಆಸುಪಾಸಿನಲ್ಲಿ ಕುಳಿತು ಮಾಡುತ್ತಿರುತ್ತಾನೆ ಸಂಧ್ಯಾವಂದನೆ,
ಜಯದ್ರಥನ ತಂದೆ
ವೃದ್ಧಕ್ಷತ್ರ ಉದ್ವೇಗದಿಂದ ಆ ತಲೆಯನ್ನು ನೆಲಕ್ಕೆ ಬೀಳಿಸುತ್ತಾನೆ .
ತತೋSಭವತ್ ತಸ್ಯ ಶಿರಃ ಸಹಸ್ರಧಾ ಹರಿಶ್ಚ ಚಕ್ರೇ ತಮಸೋ
ಲಯಂ ಪುನಃ ।
ತದೈವ ಸೂರ್ಯ್ಯೇ
ಸಕಲೈಶ್ಚ ದೃಷ್ಟೇ ಹಾಹೇತಿ ವಾದಃ ಸುಮಹಾನಥಾSಸೀತ್
॥೨೬.೧೯೪ ॥
ತದನಂತರ ಆ
ವೃದ್ಧಕ್ಷತ್ರನ ತಲೆಯು ಸಾವಿರ ಚೂರಾಯಿತು.
ಶ್ರೀಕೃಷ್ಣಪರಮಾತ್ಮ
ಕತ್ತಲ ಲಯ ಮಾಡಲು ಬೆಳಕಾಯಿತು.
ಎಲ್ಲರಿಗೂ ಕಾಣಿಸಿಕೊಂಡ
ಸೂರ್ಯ, ಎದ್ದಿತಲ್ಲಿ
ಪಶ್ಚಾತ್ತಾಪದ ಹಾಹಾಕಾರ.
ಭೀಮಸ್ತದಾ
ಶಲ್ಯಸುಯೋಧನಾದೀನ್ ಕೃಪಂ ಚ ಜಿತ್ವಾ ವ್ಯನದತ್ ಸುಭೈರವಮ್ ।
ಕುರ್ವನ್ ಸಾಹಾಯ್ಯಂ
ಫಲ್ಗುನಸ್ಯೈವ ತುಷ್ಟೋ ಬಭೂವ ಶೈನೇಯ ಉತೋ ಹತೇ ರಿಪೌ ॥೨೬.೧೯೫ ॥
ಆಗ ಭೀಮಸೇನ: ಶಲ್ಯ, ದುರ್ಯೋಧನ ಮೊದಲಾದವರನ್ನು ಗೆದ್ದ,
ಕೃಪಾಚಾರ್ಯರನ್ನೂ
ಗೆದ್ದು ಭಯಂಕರವಾಗಿ ಸಿಂಹನಾದ ಮಾಡಿದ.
ಶತ್ರುವಾದ ಜಯದ್ರಥ
ಕೊಲ್ಲಲ್ಪಡುತ್ತಿದ್ದ. ಅರ್ಜುನನಿಗೆ ಬೆಂಗಾವಲಾಗಿ ನಿಂತಿದ್ದ,
ಸಾತ್ಯಕೀ ಸಮೇತ ಭೀಮ
ಸಂತುಷ್ಟನಾದ.
ಅಪೂರಯತ್ ಪಾಞ್ಚಜನ್ಯಂ
ಚ ಕೃಷ್ಣೋ ಮುದಾ ತದಾ ದೇವದತ್ತಂ ಚ ಪಾರ್ತ್ಥಃ ।
ಭೀಮಸ್ಯ ನಾದಂ
ಸಹಪಾಞ್ಚಜನ್ಯಘೋಷಂ ಶ್ರುತ್ವಾ ನಿಹತಂ ಸಿನ್ಧುರಾಜಮ್ ।
ಜ್ಞಾತ್ವಾ ರಾಜಾ
ಧರ್ಮ್ಮಸುತೋ ಮುಮೋದ ದುರ್ಯ್ಯೋಧನಶ್ಚಾSಸ
ಸುದುಃಖಿತಸ್ತದಾ ॥೨೬.೧೯೬ ॥
ಆಗ ಶ್ರೀಕೃಷ್ಣನು
ಪಾಂಚಜನ್ಯವನ್ನು ಊದಿದ, ಅರ್ಜುನನು ತನ್ನ ದೇವದತ್ತವನ್ನು
ಊದಿದ. ಧರ್ಮರಾಜನು ಪಾಂಚಜನ್ಯದ ನಾದ, ಮತ್ತು ಭೀಮನ ಘರ್ಜನೆಯನ್ನು ಕೇಳಿದ.
ಜಯದ್ರಥ
ಸತ್ತಿರುವನೆಂದರಿತವಗೆ ಆನಂದ, ದುರ್ಯೋಧನನೋ ಬಹಳ ದುಃಖಿತನಾದ .
No comments:
Post a Comment
ಗೋ-ಕುಲ Go-Kula