ಚಮೂಂ ಪರೇಷಾಮಭ್ಯಾಗಾದ್ ಧೃಷ್ಟದ್ಯುಮ್ನಸ್ತಮಾಶು ಚ ।
ದ್ರೌಣಿದುರ್ಯ್ಯೋಧನೌ
ತತ್ರ ವಿರಥೀಕೃತ್ಯ ಮಾರುತಿಃ ॥೨೬.೨೧೧ ॥
ದ್ರಾವಯಾಮಸ ತತ್
ಸೈನ್ಯಂ ಪಶ್ಯತಾಂ ಸರ್ವಭೂಭೃತಾಮ್ ।
ಅಕ್ಷೋಹಿಣ್ಯಸ್ತು
ಸಪ್ತೈವ ಸೇನಯೋರುಭಯೋರಪಿ ॥೨೬.೨೧೨ ॥
ಹತಾಸ್ತಾಸಾಂ ಚ
ಭೀಮೇನ ತಿಸ್ರೋ ದ್ವೇ ಫಲ್ಗುನೇನ ಚ ।
ಸೌಭದ್ರಸಾತ್ಯಕಿಮುಖೈಸ್ತನ್ಮದ್ಧ್ಯೇ
ಷೋಡಶಾಂಶಕಃ ॥೨೬.೨೧೩ ॥
ಹೈಡಿಮ್ಬಪಾರ್ಷತಮುಖೈಸ್ತ್ರಯಾಚ್ಚ ದಶಮಾಂಶಕಃ ।
ಭೀಷ್ಮದ್ರೋಣದ್ರೌಣಿಭಿಶ್ಚ
ದ್ವೇ ಸಮಂ ನಿಹತೇ ತದಾ ॥೨೬.೨೧೪ ॥
ತದನ್ಯೈರ್ಮ್ಮಿಳಿತೈಃ
ಸರ್ವೈಸ್ತಚ್ಚತುರ್ತ್ಥಾಂಶ ಏವ ಚ ।
ತತೋ ರಾತ್ರೌ
ಪಞ್ಚಭಿಶ್ಚ ಪಾರ್ತ್ಥಾಃ ಷಡ್-ಭಿಶ್ಚ ಕೌರವಾಃ ॥೨೬.೨೧೫ ॥
ಧೃಷ್ಟದ್ಯುಮ್ನನು
ಕೂಡಲೇ ಶತ್ರುಗಳ ಸೇನೆಯನ್ನು ಎದುರುಗೊಂಡ.
ಆ ರಾತ್ರಿ ಯುದ್ಧದಿ
ಭೀಮ, ಅಶ್ವತ್ಥಾಮ ಕೌರವನ
ರಥಹೀನ ಮಾಡಿದ.
ಅವರ ಸೈನ್ಯವನ್ನು
ಎಲ್ಲರು ನೋಡುತ್ತಿರುವಾಗಲೇ ಓಡುವಂತೆ ಮಾಡಿದ.
ಇಲ್ಲಿಯ ತನಕ
ಹದಿನಾಲ್ಕು ದಿನಗಳ ಯುದ್ಧದಲ್ಲಿ ಒಟ್ಟು ೭ ಅಕ್ಷೋಹಿಣಿ ಸೇನೆ ನಾಶವಾಗಿತ್ತು.
ಭೀಮನಿಂದ ಮೂರು
ಅಕ್ಷೋಹಿಣಿ, ಪಾರ್ಥನಿಂದ ಎರಡು
ಅಕ್ಷೋಹಿಣಿ ಸೇನೆ ನಾಶವಾಗಿತ್ತು.
ಭೀಮನಿಂದ ಹತರಾದವರ
ಹತ್ತನೇ ಒಂದಂಶ ಘಟೋತ್ಕಚ,ಧೃಷ್ಟದ್ಯುಮ್ನ,ಮೊದಲಾದವರಿಂದ ಸಂಹಾರವಾಗಿತ್ತು.
ಅರ್ಜುನನಿಂದ ಹತವಾದವರ
ಹದಿನಾರನೇ ಒಂದಂಶ ಅಭಿಮನ್ಯು, ಸಾತ್ಯಕಿ, ಮುಂತಾದವರಿಂದ ಸಂಹಾರವಾಗಿತ್ತು.
ಹೀಗೆ ಐದು ಅಕ್ಷೋಹಿಣಿ ಸೇನೆ ಕೌರವರ ಕಡೆ ಆಗಿದ್ದರೆ ಸಂಹಾರ,
ಭೀಷ್ಮ, ದ್ರೋಣ ಹಾಗೂ ಅಶ್ವತ್ಥಾಮ ಮತ್ತು ಇತರರ ಪರಿವಾರ,
ಪಾಂಡವರ ೨ ಅಕ್ಷೋಹಿಣಿ
ಸೇನೆಯನ್ನು ಮಾಡಿದ್ದರು ಸಂಹಾರ .
ಈ ಎರಡು ಅಕ್ಷೋಹಿಣಿಯ
ನಾಲ್ಕನೇ ಒಂದು ಭಾಗ ಕೌರವರ ಕಡೆಯ ಇತರರಿಂದ ಸಂಹಾರ ಮಾಡಲ್ಪಟ್ಟಿತ್ತು.
ಹೀಗಿರುವಾಗ, ಪಾಂಡವರ ಐದು ಅಕ್ಷೋಹಿಣಿ ಸೇನೆ ಹಾಗೂ ಕೌರವರ ಆರು
ಅಕ್ಷೋಹಿಣಿ ಸೇನೆ ಉಳಿದುಕೊಂಡಿತ್ತು.
ಅಕ್ಷೋಹಿಣೀಭಿಃ
ಸಂವ್ಯೂಹ್ಯ ಯುದ್ಧಂ ಚಕ್ರುಃ ಸುದಾರುಣಮ್ ।
ಭೀಮಂ ಸೇನಾಂ
ದ್ರಾವಯನ್ತಂ ಪುನಃ ಕರ್ಣ್ಣಃ ಸಮಾಸದತ್ ॥೨೬.೨೧೬
॥
ಉಳಿದ ಅಕ್ಷೋಹಿಣಿಯಿಂದ
ವ್ಯೂಹರಚಿಸಿದರು,
ಅತಿ ಭಯಂಕರವಾದ
ಯುದ್ಧವನ್ನು ಮಾಡಿದರು. ಸೇನೆಯನ್ನು ಓಡಿಸುತ್ತಿದ್ದ ಭೀಮಸೇನ,
ಅವನಿಗೆದುರಾಗಿ
ಬರುತ್ತಾನೆ ಕರ್ಣ.
ಸ ಕರ್ಣ್ಣಪುರತೋ ಭೀಮೋ ದುಷ್ಕರ್ಣ್ಣಂ ಕರ್ಣ್ಣಮೇವ ಚ ।
ದುರ್ಯ್ಯೋಧನಸ್ಯಾವರಜೌ
ನಿಷ್ಪಿಪೇಷ ಪದಾ ಕ್ಷಣಾತ್ ॥೨೬.೨೧೭ ॥
ರಥಾಶ್ವಧ್ವಜಸೂತೈಶ್ಚ
ಸಹ ತೌ ನ ವ್ಯದೃಶ್ಯತಾಮ್ ।
ನಿರಾಯುಧೋSಹಮಿತಿ ಮಾಂ ತ್ವಮಾತ್ಥ ಪರುಷಂ ವಚಃ ॥೨೬.೨೧೮ ॥
ನಿರಾಯುಧಃ ಪದೈವಾಹಂ
ತ್ವಾಂ ಹನ್ತುಮಶಕಂ ತದಾ ।
ಇತಿ ಕರ್ಣ್ಣಸ್ಯ ತೌ
ಭೀಮಃ ಸಙ್ಜ್ಞಯಾ ಜ್ಞಾಪಯನ್ ಭುವಿ ॥೨೬.೨೧೯ ॥
ಆ ಭೀಮನು ಕರ್ಣನ
ಕಣ್ಣೆದುರಲ್ಲೇ ದುಷ್ಕರ್ಣ ಮತ್ತು ಕರ್ಣರನ್ನು ಕಾಲಿಂದ ಹೊಸಕಿದ,
ದುರ್ಯೋಧನನ ತಮ್ಮಂದಿರ
ರಥ, ಕುದುರೆ, ಧ್ವಜ, ಸೂತ,ಎಲ್ಲವನ್ನೂ ನಾಶ ಮಾಡಿದ.
ತನ್ನನ್ನು
ನಿರಾಯುಧನೆಂದು ತಿಳಿದು ಹಿಂದೆ ಕೆಟ್ಟ ಮಾತುಗಳಿಂದ ಬೈದಿರುವ ಕರ್ಣನಿಗೆ,
ಯಾವುದೇ ಆಯುಧವಿಲ್ಲದೆ
ಕೇವಲ ಕಾಲಿನಿಂದ ನಿನ್ನನ್ನು ಕೊಲ್ಲಲು ಸಮರ್ಥ ಎಂಬ ಬಗೆ,
ಭೀಮ ಅದನ್ನು ತೋರಿದ
ಸಂಕೇತದಿಂದ, ಅದಕ್ಕೇ ಅವರಿಬ್ಬರನ್ನು ಈರೀತಿ ಕೊಂದ.
No comments:
Post a Comment
ಗೋ-ಕುಲ Go-Kula