ಅಪೋಹುರ್ದ್ದೂರಮೇತಸ್ಮಾತ್
ಸೋSಪಿ
ಸಂಸ್ಥಾಪ್ಯ ತಾನ್ ಪುನಃ ।
ಚಿನ್ತಯಾಮಾಸ
ನೈತಸ್ಮಾದಧಿಕಂ ಶಕ್ಯತೇSರ್ಜ್ಜುನೇ ॥೨೭.೬೦ ॥
ಅಶ್ವತ್ಥಾಮ ದೂರ ಓಡಿದ
ಕುದುರೆಗಳನ್ನು ಪುನಃ ಸ್ಥಾಪಿಸಿದ ,
‘ಅರ್ಜುನಗೆ ಇದಕ್ಕಿಂತ
ಹೆಚ್ಚೇನೂ ಮಾಡಲಾಗಲ್ಲ ಎಂದುಕೊಂಡ.
ಸಾರಥಿತ್ವಾತ್ ಕೇಶವಸ್ಯ
ಧ್ವಜಸ್ಥತ್ವಾದ್ಧನೂಮತಃ ।
ಗಾಣ್ಡಿವತ್ವಾತ್
ಕಾರ್ಮ್ಮುಕಸ್ಯ ಚೇಷುದ್ಧ್ಯೋರಕ್ಷಯತ್ವತಃ ॥೨೭.೬೧ ॥
ಅವದ್ಧ್ಯತ್ವಾತ್ ತಥಾSಶ್ವಾನಾಮಭೇದ್ಯತ್ವಾದ್ ರಥಸ್ಯ
ಚ ।
ಅತೋ ಯೋದ್ಧುಂ
ಸಮರ್ತ್ಥೋSಪಿ
ನಾದ್ಯ ಯಾಮಿ ಧನಞ್ಜಯಮ್ ॥೨೭.೬೨ ॥
ಏವಂ ಸ ಮತ್ವಾ
ಪ್ರವಿವೇಶ ಸೇನಾಂ ಪಾಣ್ಡೋಃ ಸುತಾನಾಮಥ ತಂ ಸಮಭ್ಯಯಾತ್ ।
ಪಾಣ್ಡ್ಯಸ್ತಯೋರಾಸ
ಸುಯುದ್ಧಮದ್ಭುತಂ ಪ್ರವರ್ಷತೋಃ ಸಾಯಕಪೂಗಮುಗ್ರಮ್
॥೨೭.೬೩ ॥
ಶ್ರೀಕೃಷ್ಣನೇ ಸಾರಥಿ, ಧ್ವಜದಲ್ಲಿ ಹನುಮಂತ.
ಗಾಂಡೀವ, ಅಕ್ಷಯ ಬತ್ತಳಿಕೆಯ
ಹೊಂದಿದಾತ.
ಸಾಯಲಾರದ ಕುದುರೆಗಳು, ನಾಶವಾಗದ ರಥ.
ಈ ಕಾರಣದಿಂದ ನನಗೆ
ಇದ್ದರೂ ಯುದ್ಧಮಾಡುವ ತಾಕತ್ತು,
ಅರ್ಜುನನನ್ನು ಎದುರಿಸಿ
ಹೋರಾಡಲಾಗದ ಸ್ಥಿತಿ ಈ ಹೊತ್ತು.
ಹೀಗೆ ಯೋಚಿಸಿ ಪಾಂಡವರ
ಸೇನೆಯನ್ನು ಬೇರೆಡೆಯಿಂದ ಪ್ರವೇಶಿಸಿದ.
ಆಗ ಅವನಿಗೆ
ಪಾಂಡ್ಯದೇಶದ ರಾಜನು ಎದುರಾಗಿ ಬರುವವನಾದ .
ತೀಕ್ಷ್ಣವಾದ
ಬಾಣಗಳನ್ನು ವರ್ಷಿಸತಕ್ಕಂತಿತ್ತು ಪಾಂಡ್ಯರಾಜನ ತಾಕತ್ತು,
ವೀರ ಅಶ್ವತ್ಥಾಮ
ಪಾಂಡ್ಯನ ನಡುವೆ ಅದ್ಭುತ ಉಗ್ರ ಹೋರಾಟ ನಡೆಯಿತು.
ಅಷ್ಟಾವಷ್ಟಶತಾನ್ಯೂಹುಃ
ಶಕಟಾನಿ ಯದಾಯುಧಮ್ ।
ಅಹ್ನಸ್ತದಷ್ಟಭಾಗೇನ
ದ್ರೌಣಿಶ್ಚಿಕ್ಷೇಪ ತತ್ರ ಹ ॥೨೭.೬೪ ॥
ಎಂಟು ಎತ್ತುಗಳು
ಹೊರಬಹುದಾದ ಒಂದು ಗಾಡಿ,
ಅಸ್ತ್ರಗಳನ್ನೇ
ತುಂಬಿಕೊಂಡು ತರುವಂತಹ ಆ ಬಂಡಿ.
ಅಂತಹ ಎಂಟು
ಗಾಡಿಗಳಲ್ಲಿ ಬಂದ ಅಷ್ಟು ಆಯುಧ,
ದಿನದ ಎಂಟನೇ ಒಂದು
ಭಾಗದಲ್ಲೇ ಅಶ್ವತ್ಥಾಮ ಖಾಲಿ ಮಾಡಿದ.
ಅಥ ತಂ ವಿರಥಂ ಕೃತ್ವಾ
ಛಿತ್ವಾ ಕಾರ್ಮ್ಮುಕಮಾಹವೇ ।
ಸಕುಣ್ಡಲಂ ಶಿರೋ
ದ್ರೌಣಿರ್ಜ್ಜಹಾರ ಮುಕುಟೋಜ್ಜ್ವಲಮ್ ॥೨೭.೬೫ ॥
ಅಶ್ವತ್ಥಾಮ
ಪಾಂಡ್ಯರಾಜನನ್ನು ವಿರಥನನ್ನಾಗಿ ಮಾಡಿದ ,
ಬಿಲ್ಲನ್ನು ಕತ್ತರಿಸಿ, ಕುಂಡಲ ಕಿರೀಟಯುಕ್ತ ತಲೆ
ಕತ್ತರಿಸಿದ.
ಅಥ ವಿದ್ರಾವಯಾಮಾಸ
ಪೃತನಾಂ ಪಾಣ್ಡವೀಂ ಶರೈಃ ।
ತದಾ ಜಘಾನ ಪಾರ್ತ್ಥೋSಪಿ ದಣ್ಡಧಾರಾಖ್ಯಮಾಗಧಮ್ ॥೨೭.೬೬ ॥
ಈರೀತಿಯಾಗಿ ಅಶ್ವತ್ಥಾಮ
ಯುದ್ಧ ಮಾಡುತ್ತಿದ್ದ,
ಪಾಂಡವರ ಸೇನೆಯನ್ನು
ಬಾಣಗಳಿಂದ ಓಡಿಸಿದ.
ಆಗಲೇ ಇನ್ನೊಂದು
ಬದಿಯಿಂದ ಅರ್ಜುನನೂ ಕೂಡಾ,
ದಂಡಧಾರಾ ಎನ್ನುವ ಮಗಧದ
ಒಬ್ಬ ದೈತ್ಯನನ್ನು ಕೊಂದ.
ವಿದ್ರಾಪ್ಯಮಾಣಾಂ
ಪೃತನಾಂ ನಿರೀಕ್ಷ್ಯ ಗುರೋಃ ಸುತೇನಾಭ್ಯಗಮತ್ ತ್ವರಾವಾನ್ ।
ಧೃಷ್ಟದ್ಯುಮ್ನಸ್ತಂ ಸ
ಊಚೇ ಸುಪಾಪಂ ಹನಿಷ್ಯೇ ತ್ವಾಮದ್ಯ ಯುದ್ಧೇ ಗುರುಘ್ನಮ್ ॥೨೭.೬೭ ॥
ಇತ್ಯುಕ್ತೋ ದರ್ಶಯಾಮಾಸ
ಪಾರ್ಷತಃ ಖಡ್ಗಮುತ್ತಮಮ್ ।
ಅಯಂ ತವ ಪಿತುರ್ಹನ್ತಾ
ವದಿಷ್ಯತಿ ತವೋತ್ತರಮ್ ॥೨೭.೬೮ ॥
ಇತ್ಯುಕ್ತ್ವಾ
ಧನುರಾದಾಯ ವವರ್ಷ ಚ ಶರಾನ್ ಬಹೂನ್ ।
ತಯೋಃ ಸಮಭವದ್ ಯುದ್ಧಂ
ತುಮುಲಂ ರೋಮಹರ್ಷಣಮ್ ॥೨೭.೬೯ ॥
ಅಶ್ವತ್ಥಾಮನಿಂದ
ಓಡಿಸಲ್ಪಡುತ್ತಿರುವ ಸೇನೆಯನ್ನು ನೋಡಿದ ,
ವೇಗವಾಗಿ
ಧೃಷ್ಟದ್ಯುಮ್ನ ಅಶ್ವತ್ಥಾಮಗೆ ಎದುರಾಗಿ ಸಾಗಿಬಂದ .
‘ಈ ಯುದ್ಧದಲ್ಲಿ
ಗುರುದ್ರೋಹಿಯಾಗಿರುವ,
ಅತ್ಯಂತ
ಪಾಪಿಷ್ಠನಾಗಿರುವ ನಿನ್ನನ್ನು ಕೊಲ್ಲುತ್ತೇನೆ’- ಎಂದ ಅಶ್ವತ್ಥಾಮ,
ಉತ್ತಮವಾದ ಕತ್ತಿಯನ್ನು
ತೋರಿಸಿ,
‘ನಿನ್ನ
ಅಪ್ಪನನ್ನು ಕೊಂದ ಈ ಖಡ್ಗ ನಿನಗೆ ಉತ್ತರಿಸುತ್ತದೆ ಎನ್ನುತ್ತಾನೆ ದೃಷ್ಟಿದ್ಯುಮ್ನ.
ಅಷ್ಟು ಹೇಳಿ, ಬಿಲ್ಲನ್ನು ಧರಿಸಿ ಬಹಳ
ಬಾಣಗಳನ್ನು ಬಿಟ್ಟ.
ಆಗವರಿಬ್ಬರ ಮಧ್ಯೆ
ರೋಮಾಂಚಕಾರಿ ಯುದ್ಧದ ಘಟ್ಟ.
ತತ್ರ ಪಾರ್ಷತಂ
ದ್ರೌಣಿಃ ಕ್ಷಣೇನ ವಿರಥಾಯುಧಮ್ ।
ಕೃತ್ವಾSನ್ತಾಯ ಶರಾಂಸ್ತೀಕ್ಷ್ಣಾನ್
ಮುಮೋಚ ನಚ ತಸ್ಯ ತೇ ॥೨೭.೭೦ ॥
ತ್ವಚಂ ಚ ಚಿಚ್ಛಿದುರ್ದ್ದೌಣಿಃ
ಖಡ್ಗಹಸ್ತೋSಭಿಜಗ್ಮಿವಾನ್
।
ಖಡ್ಗೇನ ಸಾಸ್ತ್ರೈಃ
ಶಸ್ತ್ರೈರಪ್ಯನಿರ್ಭಿಣ್ಣತ್ವಚಂ ತದಾ ॥೨೭.೭೧ ॥
ಮೌರ್ವ್ಯಾ ಮಮನ್ಥ
ಧನುಷಃ ಪಾತಯಿತ್ವಾ ಧರಾತಳೇ ।
ಆಕೃಷ್ಯಮಾಣಂ ಪಾರ್ಷತಂ
ದೃಷ್ಟ್ವಾ ಕೃಷ್ಣಪ್ರಚೋದಿತಃ ॥೨೭.೭೨ ॥
ಪಾರ್ತ್ಥೋ
ಭೀಮಶ್ಚೋಭಯತಃ ಶರೈರಭಿನಿಜಘ್ನತುಃ ।
ಸ ತಾಭ್ಯಾಂ
ವಜ್ರಸದೃಶೈಃ ಶರೈರಭಿಹತೋ ಭೃಶಮ್ ॥೨೭.೭೩ ॥
ವಿಸೃಜ್ಯ ಪಾರ್ಷತಂ
ಸ್ವೀಯಮಾರುರೋಹ ರಥಂ ಪುನಃ ।
ಜಗಾಮ ಚ ತತೋSನ್ಯತ್ರ ಪಾಞ್ಚಾಲ್ಯೋSಪಿ ರಥಂ ಪುನಃ ॥೨೭.೭೪ ॥
ಆರುಹ್ಯಾನ್ಯಂ
ಸ್ವಾತ್ತಧನ್ವಾ ಕೃತವರ್ಮ್ಮಾಣಮಭ್ಯಯಾತ್ ।
ತಯೋರಾಸೀತ್ ಸುತುಮುಲಂ
ಯುದ್ಧಮದ್ಭುತದರ್ಶನಮ್ ॥೨೭.೭೫ ॥
ದ್ರೌಣಿಯಿಂದ
ದೃಷ್ಟದ್ಯುಮ್ನನಾದ ರಥ ಮತ್ತು ಆಯುಧ ಹೀನ,
ಅಷ್ಟು ಮಾಡಿ, ಅವನನ್ನು ಸಾಯಿಸಲು ಬಿಟ್ಟ
ಚೂಪಾದ ಬಾಣ.
ಆದರೆ ತಾನು ಬಿಟ್ಟ
ಬಾಣಗಳು ಧೃಷ್ಟದ್ಯುಮ್ನನ ಚರ್ಮವನ್ನೂ ಛೇದಿಸದಿದ್ದಾಗ ,
ಕೋಪಗೊಂಡ ದ್ರೌಣಿ
ರಥದಿಂದಿಳಿದು ಅಭೇದ್ಯ ದೃಷ್ಟದ್ಯುಮ್ನನ ಸಮೀಪಿಸಿದನಾಗ.
ಅಶ್ವತ್ಥಾಮ ಅಭೇದ್ಯ
ಧೃಷ್ಟದ್ಯುಮ್ನನನ್ನು ಭೂಮಿಯಲ್ಲಿ ಬೀಳಿಸಿದ ,
ತನ್ನ ಬಿಲ್ಲಿನ
ನೇಣನ್ನು ಅವನ ಕುತ್ತಿಗೆಗೆ ಹಾಕಿ ಎಳೆಯಲಾರಂಭಿಸಿದ.
ಹಾಗೆ ದ್ರೌಣಿಯಿಂದ
ಎಳೆಯಲ್ಪಡುತ್ತಿದ್ದ ದೃಷ್ಟಿದ್ಯುಮ್ನ,
ಸೆಳೆಯಿತು ಆ ದೃಶ್ಯ
ಕೃಷ್ಣ ಭೀಮಾರ್ಜುನರ ಗಮನ.
ಎರಡೂ ಕಡೆಯಿಂದ
ವಜ್ರಸದೃಶವಾದ ಬಾಣಗಳಿಂದ ಅಶ್ವತ್ಥಾಮಗೆ ಹೊಡೆತ,
ಹೀಗೆ ಹೊಡೆಯಲ್ಪಟ್ಟ
ಅಶ್ವತ್ಥಾಮನು ಧೃಷ್ಟದ್ಯುಮ್ನನ ಬಿಟ್ಟು ಏರಿದ ರಥ.
ಧೃಷ್ಟದ್ಯುಮ್ನನೂ ಕೂಡಾ
ಎದ್ದು, ಸ್ವಲ್ಪ
ಚೇತರಿಸಿಕೊಂಡು ಇನ್ನೊಂದು ರಥವನ್ನೇರಿದ ,
ಬಿಲ್ಲು ಹಿಡಿದು, ಕೃತವರ್ಮಗೆದುರಾದಾಗ
ನಡೆಯಿತವರಲ್ಲಿ ಅದ್ಭುತ ಭಯಂಕರ ಯುದ್ಧ.
ತತ್ರ ನಾತಿಪ್ರಯತ್ನೇನ
ಪಾಞ್ಚಾಲ್ಯೋ ವಿರಥಾಯುಧಮ್ ।
ಚಕಾರ ಕೃತವರ್ಮ್ಮಾಣಂ
ತಮಪೋವಾಹ ಗೌತಮಃ ॥೨೭.೭೬ ॥
ಆ ಯುದ್ಧದಲ್ಲಿ
ಧೃಷ್ಟದ್ಯುಮ್ನನು ಕೃತವರ್ಮನನ್ನು ಪ್ರಯತ್ನವಿಲ್ಲದೇ ಮಾಡಿದ ರಥ ಆಯುಧಹೀನ, ಆಗ ಕೃಪಾಚಾರ್ಯರು
ಕೃತವರ್ಮನನ್ನು ತನ್ನ ರಥದಲ್ಲಿರಿಸಿಕೊಂಡು
ಬೇರೆಡೆಗೆ ಕರೆದೊಯ್ದ ಕ್ಷಣ.
ಅಥ ದುರ್ಯ್ಯೋಧನೋ ರಾಜಾ
ಮಾದ್ರೇಯಾವಭ್ಯಯಾದ್ ರಥೀ ।
ತಾಭ್ಯಾಂ ತಸ್ಯಾಭವದ್
ಘೋರಂ ಯುದ್ಧಮದ್ಭುತದರ್ಶನಮ್ ॥೨೭.೭೭ ॥
ಇನ್ನೊಂದೆಡೆ
ದುರ್ಯೋಧನನು ರಥವನ್ನೇರಿ ನಕುಲ-ಸಹದೇವರನ್ನು ಎದುರಿಸಿದ,
ಅಲ್ಲಿ ಅವರಿಬ್ಬರೊಂದಿಗೆ
ನಡೆದದ್ದು ಅತ್ಯಂತ ವಿಚಿತ್ರವಾದ,
ಘೋರವಾದ ಯುದ್ಧ.
ತತ್ರ ನಾತಿಪ್ರಯತ್ನೇನ
ತೇನ ತೌ ವಿರಥೀಕೃತೌ ।
ಸ್ವಯಂ ಯುಧಿಷ್ಠಿರೋ
ರಾಜಾ ತದಾ ತಂ ಸಮವಾರಯತ್ ।
ವ್ಯಶ್ವಸೂತಧ್ವಜಂ
ಚಕ್ರೇ ತಂ ಚ ದುರ್ಯ್ಯೋಧನೋ ರಣೇ ॥೨೭.೭೮ ॥
ಆ ಯುದ್ಧದಿ ಯಾವುದೇ
ಪ್ರಯಾಸವಿಲ್ಲದೇ, ದುರ್ಯೋಧನ
ನಕುಲ ಸಹದೇವರನ್ನು ಮಾಡಿದ ರಥಹೀನ,
ಇದನ್ನು ನೋಡಿದ
ಯುಧಿಷ್ಠಿರನು ತಾನೇ ಮುಂದಾಗಿ ಹೋಗಿ ಎದುರಿಸಿ ತಡೆಯುತ್ತಾನೆ ದುರ್ಯೋಧನನ್ನ.
ಆಗ ದುರ್ಯೋಧನ ಅವನನ್ನೂ
ರಥಹೀನನನ್ನಾಗಿ ಮಾಡಿದ ,
ಆಯುಧಹೀನ,ಕುದುರೆಗಳಿಂದ ಹೀನನನ್ನಾಗಿಯೂ
ಮಾಡಿದ.
ಅಥಾSಗತಂ ಸೂರ್ಯ್ಯಸುತಂ ಪುನಶ್ಚ
ಜಗಾಮ ಭೀಮೋ ರಭಸೋ ರಥೇನ
ದುರ್ಯ್ಯೋಧನಂ ಚಾಸ್ಯ
ಸಮಕ್ಷಮೇವ ಚಕಾರ ವೀರೋ ವಿರಥಂ ಕ್ಷಣೇನ ॥೨೭.೭೯ ॥
ಇದೇ ಸಮಯದಲ್ಲಿ ಮತ್ತೆ
ಯುದ್ಧಕೆ ಬಂದ ಕರ್ಣನನ್ನು ಭೀಮ ಕಂಡ,
ರಭಸವಾಗಿ ರಥದಲ್ಲಿ
ಹೊರಟು ಬಂದು ದುರ್ಯೋಧನನಿಗೆ ಎದುರಾದ .
ಕರ್ಣ
ನೋಡುತ್ತಿರುವಂತಹಾ ಆ ಒಂದು ಕ್ಷಣ,
ಭೀಮ ಮಾಡಿದ ದುರ್ಯೋಧನನ
ರಥಹೀನ.
ನಿವಾರ್ಯ್ಯ ಕರ್ಣ್ಣಂ ಚ
ಶರೈರಮುಷ್ಯ ಸೂನೋಃ ಸುಷೇಣಸ್ಯ ಶಿರಶ್ಚಕರ್ತ್ತ ।
ಪಪಾತ ಭೂಮೌ ಸ ಪಿತುಃ
ಸಮೀಪೇ ಯಥಾ ಹತಃ ಸತ್ಯಸೇನೋSಮುನೈವ ।
ಯಥೈವ ಕರ್ಣ್ಣಾವರಜೌ
ಪುರೈವ ನಿಶಾಯುದ್ಧೇ ಕರ್ಣ್ಣಪುರಃ ಪ್ರಪಾತಿತೌ ॥೨೭.೮೦ ॥
ಭೀಮಸೇನ ಬಾಣಗಳಿಂದ
ಕರ್ಣನನ್ನೂ ತಡೆದ,
ಕರ್ಣನ ಮಗ ಸುಷೇಣನ
ತಲೆಯನ್ನು ಕಡಿದ.
ಸುಷೇಣ ತನ್ನ ತಂದೆಯ
ಎದುರೇ ಭೂಮಿಯಲ್ಲಿ ಕುಸಿದುಬಿದ್ದ,
ಹಾಗೇ ಭೀಮನಿಂದ
ಸತ್ಯಸೇನ ಎಂಬ ಕರ್ಣಪುತ್ರ ಹಿಂದೆ ಸತ್ತಿದ್ದ.
ಹೇಗೆ ಹಿಂದೆ ರಾತ್ರಿ
ಯುದ್ಧದಿ ಕರ್ಣನ ಎದುರೇ ಕರ್ಣನ ತಮ್ಮಂದಿರನ್ನ ಕೊಂದಿದ್ದ ಭೀಮಸೇನ, ಅದೇ ರೀತಿಯಲ್ಲೇ ತಂದೆ ಕರ್ಣನ ಎದುರಲ್ಲೇ ಸಂಹರಿಸಲ್ಪಟ್ಟ ಭೀಮಸೇನನಿಂದ ಸುಷೇಣ.
ಹತಂ ತಮೀಕ್ಷ್ಯೈವ
ವಿಕರ್ತ್ತನಾತ್ಮಜಃ ಕ್ರೋಧಾನ್ವಿತೋ ಭೀಮಸೇನಂ ವಿಹಾಯ ।
ಯಯೌ ಪ್ರಮೃದ್ಯೈವ ಚಮೂಂ
ಯುಧಿಷ್ಠಿರಂ ರಥೇSಪರೇ
ಸ್ವಶ್ವಯುತೇ ವ್ಯವಸ್ಥಿತಃ ॥೨೭.೮೧ ॥
ಕರ್ಣ ತನ್ನ ಮಗನು
ಸತ್ತದ್ದನ್ನು ಕಂಡೇ ಸಿಟ್ಟುಗೊಂಡ,
ಭೀಮಸೇನನನ್ನು ಬಿಟ್ಟು, ಸೇನೆಯನ್ನು ನಾಶಮಾಡಿದ.
ಧರ್ಮಜ ಬೇರೆ ಒಳ್ಳೆಯ
ಕುದುರೆಯ ರಥದಲ್ಲಿದ್ದ,
ಕೋಪದಲ್ಲಿದ್ದ ಕರ್ಣ
ಯುಧಿಷ್ಠಿರನತ್ತ ತೆರಳಿದ.
ನ್ಯವಾರಯೇತಾಂ ಶಿನಿಪೌತ್ರಪಾರ್ಷತೌ
ಕೃಷ್ಣಾಸುತಾಃ ಸೋಮಕಸಙ್ಘಯುಕ್ತಾಃ ।
ಸ ತಾನ್ ಸಮಸ್ತಾನ್
ವಿರಥಾನ್ ವಿಧಾಯ ಯುಧಿಷ್ಠಿರಂ ಪ್ರಾಪ ಯುತಂ ಯಮಾಭ್ಯಾಮ್ ॥೨೭.೮೨ ॥
ಆಗ ಸಾತ್ಯಕಿ, ಧೃಷ್ಟದ್ಯುಮ್ನ ಮತ್ತು
ದ್ರೌಪದಿಯ ಮಕ್ಕಳು,
ಕರ್ಣನ ತಡೆದರು ಹೊಂದಿ
ಪಾಂಚಾಲ ಪಡೆಯ ಬೆಂಗಾವಲು.
ಕರ್ಣನಾದರೋ
ಅವರೆಲ್ಲರನ್ನೂ ರಥಹೀನರನ್ನಾಗಿ ಮಾಡಿದ ,
ನಕುಲಸಹದೇವರಿಂದ ಕೂಡಿದ
ಯುಧಿಷ್ಠಿರನನ್ನು ಹೊಂದಿದ.
ನಿಹತ್ಯ ಸೋSಶ್ವಾನ್ ಯುಧಿ
ಧರ್ಮ್ಮಸೂನೋರ್ನ್ನಿರಾಯುಧೌ ತೌ ಚ ಯಮೌ ಚಕಾರ ।
ತಾನೇಕಯಾನೋಪಗತಾನ್
ಪುನಶ್ಚ ಮಮರ್ದ್ದ ಬಾಣೈಶ್ಚ ವಚೋಭಿರುಗ್ರೈಃ ॥೨೭.೮೩ ॥
ಯುದ್ಧದಲ್ಲಿ ಕರ್ಣನು
ಧರ್ಮರಾಜನ ಕುದುರೆಗಳನ್ನು ಕೊಂದ,
ಆ
ನಕುಲ-ಸಹದೇವರನ್ನು ಆಯುಧಹೀನರನ್ನಾಗಿ ಮಾಡಿದ.
ಆನಂತರ ಕರ್ಣ ಒಂದೇ
ರಥದಲ್ಲಿ ಕುಳಿತ ಆ ಮೂರೂ ಜನರನ್ನು,
ಘಾಸಿಗೊಳಿಸಿದ ಬಿಟ್ಟು
ಬಾಣಗಳನ್ನು ಆಡುತ್ತಾ ಕ್ರೂರಮಾತುಗಳನ್ನು.
ತದೈವ ಮೋಕ್ಷಾಯ ನೃಪಸ್ಯ
ಭೀಮೋ ದುರ್ಯ್ಯೋಧನಂ ವಿರಥಂ ಸಂವಿಧಾಯ ।
ವಿವ್ಯಾಧ
ಮರ್ಮ್ಮಸ್ವತಿತೀಕ್ಷ್ಣ ಸಾಯಕೈಸ್ತಂ ದರ್ಶಯಾಮಾಸ ರವೇಃ ಸುತಾಯ ॥೨೭.೮೪ ॥
ಆಗಲೇ ಧರ್ಮರಾಜನ
ಬಿಡುಗಡೆ ಮಾಡುವುದಕ್ಕಾಗಿ ,
ಭೀಮ ಮಾಡಿದ ದುರ್ಯೋಧನನ
ರಥಹೀನನನ್ನಾಗಿ.
ಅವನ ಮರ್ಮಸ್ಥಾನಗಳಿಗೆ
ಚೂಪು ಬಾಣಗಳಿಂದ ಹೊಡೆದ,
ಸಾರಥಿಯಾದ ಶಲ್ಯರಾಜ
ಕರ್ಣನಿಗೆ ಆ ದೃಶ್ಯವನ್ನು ತೋರಿಸಿದ.
ಶಲ್ಯಸ್ತದಾ
ಧರ್ಮ್ಮಸುತಂ ವಿಹಾಯ ಕರ್ಣ್ಣೋ ಯಯೌ ತತ್ರ ಯುಧಿಷ್ಠಿರೋSಪಿ ।
ಗತ್ವಾ ಶನೈಃ ಶಿಬಿರಂ
ತತ್ರ ಶಿಶ್ಯೇ ಕರ್ಣ್ಣೋ ಯದಾ ರಾಜಗೃಧ್ನೀ ಜಗಾಮ ॥೨೭.೮೫ ॥
ಆಗ ಕರ್ಣನು
ಧರ್ಮರಾಜನನ್ನು ಬಿಟ್ಟ, ದುರ್ಯೋಧನನಿದ್ದೆಡೆಗೆ
ತಾನು ಹೊರಟ.
ಕರ್ಣನು ಯಾವಾಗ
ದುರ್ಯೋಧನನನ್ನು ರಕ್ಷಿಸಬೇಕೆಂದು ಹೋದ,
ಆಗ ಧರ್ಮರಾಜ ಮೆಲ್ಲಗೆ
ಶಿಬಿರಕ್ಕೆ ಹೋಗಿ ಅಲ್ಲಿಯೇ ಮಲಗಿಕೊಂಡ.
ದ್ರೌಣಿಃ ಕೃಪಶ್ಚಾತ್ರ
ತದೈವ ಜಗ್ಮತುಸ್ತದಾ ಭೀಮೋ ದ್ರೌಣಿಕರ್ಣ್ಣೌ ಜಗಾಮ ।
ಯದಾ ಭೀಮೋ
ದ್ರೌಣಿಕರ್ಣ್ಣೌ ಜಗಾಮ ಕೃಪೋ ನೃಪಂ ರಥಮಾರೋಪಯಚ್ಚ ॥೨೭.೮೬ ॥
ಆಗ ಅಶ್ವತ್ಥಾಮ
ಮತ್ತು ಕೃಪ ಕೂಡಾ ದುರ್ಯೋಧನನಲ್ಲಿಗೆ ಬಂದಾಗ,
ಭೀಮ ಅಶ್ವತ್ಥಾಮ ಮತ್ತು
ಕರ್ಣನನ್ನು ಯುದ್ಧದಲ್ಲಿ ಎದುರುಗೊಂಡನಾಗ .
ಆಗ ಕೃಪಾಚಾರ್ಯರು
ದುರ್ಯೋಧನನನ್ನು ತನ್ನ ರಥಕ್ಕೇರಿಸಿಕೊಂಡರಾಗ .
ನೃಪಂ ಸಮಾದಾಯ ಕೃಪೇSಪಯಾತೇ ಭೀಮಾರ್ದ್ದಿತೌ
ದ್ರೌಣಿಕರ್ಣ್ಣೌ ಶರೌಘೈಃ ।
ವಿಹಾಯ ತಂ ಜಗ್ಮತುಃ
ಸೋಮಕಾನಾಂ ಚಮೂಂ ಶರೌಘೈರಭಿಪಾತಯನ್ತೌ ॥೨೭.೮೭ ॥
ಕೃಪರು ಕೌರವನನ್ನು
ಕರೆದುಕೊಂಡು ಯುದ್ಧಭೂಮಿಯಿಂದ ಹೊರಹೋಗಲು,
ಅಶ್ವತ್ಥಾಮ ಮತ್ತು
ಕರ್ಣ ಭೀಮಸೇನನ ಬಾಣಗಳಿಂದ ಪೀಡಿತರಾಗಿರಲು ,
ಇಬ್ಬರೂ ಭೀಮನನ್ನು
ಬಿಟ್ಟು ಹೊರಟರು ಪಾಂಚಾಲ ಸೇನೆಯತ್ತ,
ಸಮೂಹ ಬಾಣಗಳ
ಸುರಿಸುತ್ತ ನಡೆದರು ಸೇನೆಯ ನಾಶಮಾಡುತ್ತಾ.
ಅಥಾತ್ರ
ರಾಜಾನಮಚಕ್ಷಮಾಣೋ ಧನಞ್ಜಯೋ ವಾಸುದೇವಪ್ರಣುನ್ನಃ ।
ಅಭ್ಯಾಯಯೌ ಪಾರ್ಷತಃ
ಸ್ವಾಂ ತು ಸೇನಾಂ ಕರ್ಣ್ಣಾಹತಾಂ ವೀಕ್ಷ್ಯ ಕುರೂನಪೀಡಯತ್ ॥೨೭.೮೮ ॥
ತದನಂತರ
ಯುದ್ಧಭೂಮಿಯಲ್ಲಿ ಧರ್ಮರಾಜ ಕಾಣದೇ ಇದ್ದಾಗ
ಕೃಷ್ಣನಿಂದ ಪ್ರೇರಿತನಾದ
ಅರ್ಜುನ ಸಂಶಪ್ತಕರ ಬಿಟ್ಟು ಬಂದನಾಗ .
ಇತ್ತ ಧೃಷ್ಟದ್ಯುಮ್ನ
ತನ್ನ ಸೇನೆ ಕರ್ಣನಿಂದ ನಾಶವಾಗುವುದನ್ನು ಕಂಡ,
ದುರ್ಯೋಧನಾದಿಗಳ ಸೇನೆಯ
ಮೇಲೆ ದಾಳಿಮಾಡುತ್ತಾ ಸಾಗಿದ .
ನ್ಯವಾರಯತ್ ಸಮಾಯಾನ್ತಂ
ಕಪಿಪ್ರವರಕೇತನಮ್ ।
ದ್ರೌಣಿರ್ದ್ದುಃಶಾಸನಶ್ಚೈವ
ಧೃಷ್ಟದ್ಯುಮ್ನಮವಾರಯತ್ ॥೨೭.೮೯ ॥
ಧರ್ಮರಾಜನನ್ನು
ಹುಡುಕಿಕೊಂಡು, ಸಂಶಪ್ತಕರನ್ನು
ಬಿಟ್ಟುಬರುತ್ತಿದ್ದ,
ಕಪಿಧ್ವಜ ಅರ್ಜುನನ
ಅಶ್ವತ್ಥಾಮ, ಧೃಷ್ಟದ್ಯುಮ್ನನ
ದುಶ್ಯಾಸನ ತಡೆದ.
ಉಭಾವತಿರಥೌ ತೌ ತು
ಶಸ್ತ್ರಾಸ್ತ್ರೈರಭ್ಯವರ್ಷತಾಮ್ ।
ದುಃಶಾಸನಃ ಪಾರ್ಷತಶ್ಚ
ಕುರ್ವನ್ತೌ ಬಾಣಜಂ ತಮಃ ॥೨೭.೯೦ ॥
ಅತಿರಥರಾದ ದುಶ್ಯಾಸನ
ಧೃಷ್ಟದ್ಯುಮ್ನ ಇಬ್ಬರೂ, ಪರಸ್ಪರ
ಶಸ್ತ್ರಾಸ್ತ್ರಗಳಿಂದ, ಬಾಣಮಳೆಗರೆದರು,
ಆಗಸವ ಕತ್ತಲಾಗಿಸಿ
ಪರಸ್ಪರ ಪೀಡಿಸಿಕೊಂಡರು.
ತತ್ರ ದುಃಶಾಸನೇನಾSಜೌ ಸ್ತಮ್ಭಿತೋ ದ್ರುಪದಾತ್ಮಜಃ
।
ಯತಮಾನೋSಪಿ ನಿರ್ಯ್ಯತ್ನಃ ಕೃತೋ
ಯುದ್ಧೇ ನಿರಾಯುಧಃ ॥೨೭.೯೧ ॥
ಈ ಯುದ್ಧದಲ್ಲಿ
ಧೃಷ್ಟದ್ಯುಮ್ನ, ಪಟ್ಟರೂ
ಎಷ್ಟೋ ಪ್ರಯತ್ನ,
ಸಫಲನಾಗದೇ ನಿರಾಯುಧನಾದ
, ದುಃಶಾಸನನಿಂದ ಸ್ತಂಭಿತನಾದ.
ತದಾSಭವದ್ ಯುದ್ಧಮತೀವ ದಾರುಣಂ
ದ್ರೌಣೇಸ್ತನೂಜೇನ ತು ವಜ್ರಪಾಣೇಃ ।
ತತ್ರಾಪಿ ಬದ್ಧಃ
ಶರಪಞ್ಜರೇಣ ಪಾರ್ತ್ಥೋSಪನುತ್ತಾSಪಿ ಹಿ ಗಾಣ್ಡಿವಜ್ಯಾ ॥೨೭.೯೨ ॥
ಅದೇ ಸಂದರ್ಭದಲ್ಲಿ
ಅಶ್ವತ್ಥಾಮ, ಇಂದ್ರಪುತ್ರ
ಅರ್ಜುನರ ಯುದ್ಧ,
ಭಯಂಕರವಾದ ಯುದ್ಧದಲ್ಲಿ
ಅರ್ಜುನ ಶರಪಂಜರದಿ ಬಂಧಿಯಾದ.
ಆ ಯುದ್ಧದಲ್ಲಿ
ಗಾಂಡೀವಬಿಲ್ಲಿನ ದಾರವು ಕತ್ತರಿಸಲ್ಪಟ್ಟಿತು ಕೂಡಾ.
ಪಾರ್ತ್ಥೋSಥ ಕೃಷ್ಣೇಧಿತಬಾಹುವೀರ್ಯ್ಯೋ
ನಿಹತ್ಯ ಸೂತಂ ಗುರುಪುತ್ರಕಸ್ಯ ।
ಛಿತ್ವಾ ಚ
ರಶ್ಮೀಂಸ್ತುರಗಾನಮುಷ್ಯ ವಿದ್ರಾವಯಾಮಾಸ ಶರೈಃ ಸುದೂರಮ್ ॥೨೭.೯೩ ॥
ಆನಂತರ ಅರ್ಜುನ ಕೃಷ್ಣನ
ಆಲಿಂಗನದಿಂದ ತೋಳ್ಬಲ ವೃದ್ಧಿಸಿಕೊಂಡ,
ದ್ರೌಣಿಯ ಸಾರಥಿಯ
ಕೊಂದು, ಅವನ
ಅಶ್ವಗಳ ಲಗಾಮನ್ನು ಕತ್ತರಿಸಿದ,
ಅವನ ಕುದುರೆಗಳನ್ನು
ಬಾಣಗಳಿಂದ ಹೊಡೆದು ಅತಿ ದೂರಕ್ಕೆ ಓಡಿಸಿದ.
No comments:
Post a Comment
ಗೋ-ಕುಲ Go-Kula