ತತೋ ದ್ರೌಣಿಮುಖಾಂ
ಸೇನಾಂ ಸರ್ವಾಂ ಭೀಮೋSಭ್ಯವರ್ತ್ತತ ।
ಪಾರ್ತ್ಥಃ
ಕರ್ಣ್ಣಮುಖಾಞ್ಛಿಷ್ಟಾನ್ ತತೋSಭಜ್ಯತ
ತದ್ ಬಲಮ್ ॥೨೬.೧೯೭ ॥
ಆನಂತರ ಅಶ್ವತ್ಥಾಮನ
ನೇತೃತ್ವದ ಸೈನ್ಯವನ್ನು ಭೀಮ ಎದುರಿಸಿದ,
ಕರ್ಣ ನೇತೃತ್ವ ವಹಿಸಿದ
ಕೌರವ ಸೇನೆಯನ್ನು ಅರ್ಜುನ ಎದುರಿಸಿದ.
ಆಗ ಕೌರವರ ಬಲವು ಎರಡು
ಸೀಳಾಯಿತು ಪಾಂಡವ ದಾಳಿಯಿಂದ.
ಶೀರ್ಣ್ಣಾಂ ಸೇನಾಂ
ಪ್ರವಿವಿಶುರ್ದ್ಧೃಷ್ಟದ್ಯುಮ್ನಪುರೋಗಮಾಃ ।
ತತಸ್ತಂ ದೇಶಮಾಪುಸ್ತೇ
ಯತ್ರ ಭೀಮಧನಞ್ಜಯೌ ॥೨೬.೧೯೮ ॥
ಆಗ ಧೃಷ್ಟದ್ಯುಮ್ನ
ಮುಂತಾದವರು ಸೋತು ಸೀಳಾದ ಸೈನ್ಯ ಪ್ರವೇಶಿಸುತ್ತಾರೆ,
ಕೌರವಸೇನೆಯ ಸೋಲಿಸಿ
ಹೋಳು ಮಾಡಿದ ಭೀಮಾರ್ಜುನರಲ್ಲಿಗೆ ಬರುತ್ತಾರೆ.
ತತ ಏಕೀಕೃತಾಃ ಸರ್ವೇ
ಪಾಣ್ಡವಾಃ ಸಹಸೋಮಕಾಃ ।
ಪರಾನ್
ವಿದ್ರಾವಯಾಮಾಸುಸ್ತೇ ಭೀತಾಃ ಪ್ರಾದ್ರವನ್ ದಿಶಃ ॥೨೬.೧೯೯ ॥
ಆನಂತರ ಪಾಂಚಾಲಾದಿ
ಎಲ್ಲಾ ಪಾಂಡವ ಪಕ್ಷದವರು ಶತ್ರುಗಳನ್ನು ಓಡಿಸಿದರು,
ಆಗ ಭಯಗೊಂಡ ಕೌರವ
ಪಾಳಯದವರು ಸಿಕ್ಕ-ಸಿಕ್ಕ ಕಡೆಗೆ ಓಡಿಹೋದರು.
ವಿದ್ರಾಪ್ಯಮಾಣಂ
ಸೈನ್ಯಂ ತಂ ದೃಷ್ಟ್ವಾ ದುರ್ಯ್ಯೋಧನೋ ನೃಪಃ ।
ಜಯದ್ರಥವಧಾಚ್ಚೈವ
ಕುಪಿತೋSಭ್ಯದ್ರವತ್ ಪರಾನ್
॥೨೬.೨೦೦ ॥
ಓಡಿಸಲ್ಪಡುತ್ತಿರುವ
ಸೈನ್ಯವನ್ನು ನೋಡಿದ , ಜಯದ್ರಥನ ಸಾವಿನಿಂದ
ವಿಪರೀತ ನೊಂದ, ಸಿಟ್ಟುಗೊಂಡಿರುವ ರಾಜ
ದುರ್ಯೋಧನನು, ಯುದ್ಧಕ್ಕೆ ತೆರಳಿದ
ಎದುರಿಸಲು ಶತ್ರುಗಳನ್ನು.
ಸ ಭೀಮಸೇನಂ ಚ ಧನಞ್ಜಯಂ
ಚ ಯುಧಿಷ್ಠಿರಂ ಮಾದ್ರವತೀಸುತೌ ಚ ।
ಧೃಷ್ಟದ್ಯುಮ್ನಂ
ಸಾತ್ಯಕಿಂ ದ್ರೌಪದೇಯಾನ್ ಸರ್ವಾನೇಕಃ ಶರವರ್ಷೈರ್ವವರ್ಷ ॥೨೬.೨೦೧ ॥
ಆ ದುರ್ಯೋಧನನು
ಭೀಮಸೇನನನ್ನು, ಅರ್ಜುನ, ಯುಧಿಷ್ಠಿರ,ಧೃಷ್ಟದ್ಯುಮ್ನನನ್ನು, ನಕುಲ-ಸಹದೇವ,ಧೃಷ್ಟದ್ಯುಮ್ನ,ಸಾತ್ಯಕಿಯನ್ನು ,
ಐದು ಜನ ದ್ರೌಪದೇಯರು, ಇವರೆಲ್ಲರನ್ನೂ, ಒಬ್ಬನೇ ತನ್ನ ಶರವರ್ಷದಿಂದ ಪೀಡಿಸಿದನು.
ತೇ ವಿವ್ಯಧುಸ್ತಂ
ಬಹುಭಿಃ ಶಿಲೀಮುಖೈಃ ಸ ತಾನನಾದೃತ್ಯ ಚಕರ್ತ್ತ ಬಾಣೈಃ ।
ಧನೂಂಷಿ ಚಿತ್ರಾಣಿ
ಮಹಾರಥಾನಾಂ ಚಕಾರ ಸಙ್ಖೇ ವಿರಥೌ ಯಮೌ ಚ ॥೨೬.೨೦೨ ॥
ಅವರೆಲ್ಲರೂ ದುರ್ಯೋಧನನನ್ನು
ಎದುರಿಸಿ, ಬಹಳ ಬಾಣಗಳಿಂದ
ಹೊಡೆಯುತ್ತಾರೆ. ದುರ್ಯೋಧನನೋ ಯಾವುದನ್ನೂ ಲೆಕ್ಕಿಸದೇ, ಕಡೆಗಣಿಸಿ
ಸುರಿಸುತ್ತಾನೆ ಬಾಣಗಳಧಾರೆ.
ರಥಿಕರ ಬಹಳ
ವಿಚಿತ್ರವಾದ ಬಿಲ್ಲುಗಳನ್ನು ಕತ್ತರಿಸುತ್ತಾನೆ,
ಯುದ್ಧದಿ ನಕುಲ
ಸಹದೇವರನ್ನು ರಥಹೀನ ಮಾಡುತ್ತಾನೆ .
ಆದಾಯ ಚಾಪಾನಿ ಪರಾಣಿ
ತೇSಪಿ ದುರ್ಯ್ಯೋಧನಂ ವವೃಷುಃ ಸಾಯಕೌಘೈಃ ।
ಅಚಿನ್ತಯಿತ್ವೈವ
ಶರಾನ್ತ್ಸ ಏಕೋ ನ್ಯವಾರಯತ್ ತಾನಖಿಲಾಂಶ್ಚ ಬಾಣೈಃ ॥೨೬.೨೦೩ ॥
ಅವರೆಲ್ಲರೂ ಕೂಡಾ ಬೇರೆ
ಬಿಲ್ಲುಗಳನ್ನು ತೆಗೆದುಕೊಳ್ಳುತ್ತಾರೆ,
ದುರ್ಯೋಧನನನ್ನು ಬಾಣಗಳ
ಮಳೆಯಿಂದ ಪೀಡಿಸುತ್ತಾರೆ.
ದುರ್ಯೋಧನ ಒಬ್ಬನೇ ಅವರ
ಬಾಣಗಳನ್ನು ಕಡೆಗಣಿಸುತ್ತಾನೆ,
ಅವರೆಲ್ಲರನ್ನೂ ಕೂಡಾ
ತನ್ನ ತೀಕ್ಷ್ಣ ಬಾಣಗಳಿಂದ ತಡೆಯುತ್ತಾನೆ .
ತಂ ಗಾಹಮಾನಂ ದ್ವಿಷತಾಂ
ಬಹೂನಾಂ ಮದ್ಧ್ಯೇ ದ್ರೋಣದ್ರೌಣಿಕೃಪಪ್ರಧಾನಾಃ ।
ದೃಷ್ಟ್ವಾ ಸರ್ವೇ
ಜುಗುಪುಃ ಸ್ವಾತ್ತಚಾಪಾ ಅನಾರತಂ ಬಾಣಗಣಾನ್ ಸೃಜನ್ತಃ ॥೨೬.೨೦೪ ॥
ಹೀಗೆ, ಬಹಳ ಶತ್ರುಗಳ ನಡುವೆ ಒಂಟಿಯಾಗಿ
ಸಿಕ್ಕಿಹಾಕಿಕೊಂಡಿರುವ ದುರ್ಯೋಧನನನ್ನು ನೋಡಿ,
ದ್ರೋಣ, ಅಶ್ವತ್ಥಾಮ, ಕೃಪ, ಎಲ್ಲರೂ
ಕೂಡಾ ಬರುತ್ತಾರೆ ತಮ್ಮ ಬಿಲ್ಲುಗಳಿಗೆ ಬಾಣಗಳನ್ನು ಹೂಡಿ.
ಬಾಣಗಳನ್ನು ಬಿಡುತ್ತಾ
ಬರುತ್ತಾರೆ, ದುರ್ಯೋಧನನನ್ನು
ರಕ್ಷಿಸುತ್ತಾರೆ .
No comments:
Post a Comment
ಗೋ-ಕುಲ Go-Kula