ಸುಯೋಧನಃ ಕರ್ಣ್ಣಮಾಹ
ಜಹಿ ಭೀಮಮಿಮಂ ಯುಧಿ ।
ಸ ಆಹ ನೈಷ ಶಕ್ಯೋ ಹಿ
ಜೇತುಂ ದೇವೈಃ ಸವಾಸವೈಃ ॥೨೬.೨೦೫ ॥
ದೈವಾಜ್ಜೀವಾಮ್ಯಹಂ
ರಾಜನ್ ಯುದ್ಧ್ಯನೇನಾತಿಪೀಡಿತಃ ।
ಅತೋ ಘಟಾಮಹೇ ಶಕ್ತ್ಯಾ
ಜಯೋ ದೈವೇ ಸಮಾಹಿತಃ ॥೨೬.೨೦೬ ॥
ದುರ್ಯೋಧನ ಕರ್ಣಗೆ
ಹೀಗೆ ಹೇಳುತ್ತಾನೆ- ‘ಈ ಭೀಮಸೇನನನ್ನು ಯುದ್ಧದಲ್ಲಿ ಕೊಂದು ಬಿಡು’,
ಆಗ ಕರ್ಣನೆಂದ -
‘ಇಂದ್ರಾದಿ ದೇವತೆಗಳದೂ ಕೂಡಾ, ಭೀಮನ ಜಯಿಸಲಾಗದ
ಪಾಡು. ಭೀಮನೊಂದಿಗೆ ಯುದ್ಧ ಮಾಡುತ್ತಾ
ಅತ್ಯಂತ ಪೀಡೆಗೆ ಒಳಗಾಗಿದ್ದೇನೆ,
ದೇವ
ಸಂಕಲ್ಪವಿರುವುದರಿಂದ ಇಲ್ಲಿಯವರೆಗೆ ನಾನು ಬದುಕುಳಿದಿದ್ದೇನೆ.
ಹೀಗಾಗಿ
ನನ್ನದಿರುತ್ತದೆ ಶಕ್ತ್ಯಾನುಸಾರ ಹೋರಾಟ,
ನಿಜವಾದ ಜಯವು
ದೈವಸಂಕಲ್ಪದಂತೆ ನಿರ್ಧಾರಿತ.
ದುರ್ಯ್ಯೋಧನೋ
ದ್ರೋಣಮಾಹ ಸೈನ್ಧವಸ್ತ್ವದುಪೇಕ್ಷಯಾ ।
ಪಾರ್ತ್ಥೇನ ನಿಹತೋ
ಭೀಮಸಾತ್ಯಕಿಭ್ಯಾಂ ಚ ಮೇ ಬಲಮ್ ॥೨೬.೨೦೭ ॥
ಪ್ರತಿಜ್ಞಾ ಚ
ಪರಿತ್ಯಕ್ತಾ ಪಾಣ್ಡವಸ್ನೇಹತಸ್ತ್ವಯಾ ।
ಇತ್ಯುಕ್ತಃ ಕುಪಿತೋ
ದ್ರೋಣಃ ಪ್ರತಿಜ್ಞಾಮಕರೋತ್ ತತಃ ॥೨೬.೨೦೮ ॥
ನಂತರ ದುರ್ಯೋಧನನು
ದ್ರೋಣರಿಗೆ ಹೀಗೆ ಹೇಳಿದ,
‘ನಿನ್ನ ಉಪೇಕ್ಷೆಯಿಂದ
ಜಯದ್ರಥ ಸತ್ತ ಅರ್ಜುನನಿಂದ.
ನನ್ನ ಸೈನ್ಯ
ನಿರ್ನಾಮವಾಯಿತು ಭೀಮ ಸಾತ್ಯಕಿಯರಿಂದ.
(ಇವೆಲ್ಲವುದಕ್ಕೂ ನೀವೇ
ಹೊಣೆ ಎಂಬ ಧ್ವನಿ), ಪಾಂಡವ ಪ್ರೀತಿಯಿಂದ
ನಿನ್ನ ಪ್ರತಿಜ್ಞಾಹಾನಿ.
ಇದನ್ನೆಲ್ಲ ಕೇಳಿದ
ದ್ರೋಣಾಚಾರ್ಯರು, ಕುಪಿತರಾಗಿ ಪ್ರತಿಜ್ಞೆಯನ್ನು ಮಾಡಿದರು.
ಇತಃ ಪರಂ ನೈವ ರಣಾದ್
ರಾತ್ರಾವಹನಿ ವಾ ಕ್ವಚಿತ್ ।
ಗಚ್ಛೇಯಂ ನಚ
ಮೋಕ್ಷ್ಯಾಮಿ ವರ್ಮ್ಮ ಬದ್ಧಂ ಕಥಞ್ಚನ ॥೨೬.೨೦೯ ॥
ಮತ್ಪುತ್ರಶ್ಚ ತ್ವಯಾ
ವಾಚ್ಯಃ ಪಾಞ್ಚಾಲಾನ್ ನೈವ ಶೇಷಯೇಃ ।
ಸದೌಹಿತ್ರಾನಿತೀತ್ಯುಕ್ತ್ವಾ
ವಿಜಗಾಹೇ ನಿಶಾಗಮೇ ॥೨೬.೨೧೦ ॥
ಇನ್ನು ಮುಂದೆ
ರಾತ್ರಿಯಾಗಲೀ ಹಗಲಿನಲ್ಲಾಗಲೀ, ಯುದ್ಧಭೂಮಿಯಿಂದ
ಹೋಗುವುದಿಲ್ಲ.
ಇಲ್ಲೇ ಇದ್ದು ಯುದ್ಧ
ಮಾಡುತ್ತೇನೆ, ಕಟ್ಟಲ್ಪಟ್ಟ ಈ ಕವಚವನ್ನು ನಾನು ಬಿಚ್ಚುವುದೇ
ಇಲ್ಲ.
ಒಂದು ವೇಳೆ ನಾನು
ಸತ್ತರೆ, ನೀನು ನನ್ನ ಮಗನಿಗೆ
ಹೀಗೆ ಹೇಳಬೇಕು-,
ಯಾರನ್ನೂ ಉಳಿಸದೇ
ಪಾಂಚಾಲ ದೇಶದವರನ್ನು ಎಲ್ಲಾ ಕೊಲ್ಲಬೇಕು.
ಅಷ್ಟೇ ಅಲ್ಲಾ, ಪಾಂಡವಪುತ್ರರದೂ (ಪಾಂಚಾಲೀ ಪುತ್ರರದೂ) ಆಗಬೇಕು
ಸಂಹಾರ,
ಎಂದು ಹೇಳಿ, ರಾತ್ರಿಯಾಗುತ್ತಿದ್ದರೂ ಯುದ್ಧವ ಮುಂದುವರಿಸಿದರು
ದ್ರೋಣಚಾರ್ಯ.
No comments:
Post a Comment
ಗೋ-ಕುಲ Go-Kula