Monday 25 April 2016

Māta Sīta’s Opinion of Hanumān

ಹನುಮಂತನ ಬಗೆಗೆ, ತಾಯಿ ಸೀತಾದೇವಿಯ ಅಭಿಪ್ರಾಯ :

ಈಗ್ಗೆ ಕೆಲವು ದಿನಗಳ ಹಿಂದೆಯಷ್ಟೇ, ರಾಮಾಯಣದ ಕಿಷ್ಕಿಂದಾಕಾಂಡದ ಒಂದು ಪ್ರಸಂಗದಲ್ಲಿ ಪ್ರಭು ರಾಮಚಂದ್ರ, ಹನುಮಂತನ "ಸಂವಹನ ಕೌಶಲ್ಯದ ಬಗೆಗೆ" ಕೊಂಡಾಡಿದ್ದನ್ನು ನಾವೆಲ್ಲ ನೋಡಿದ್ದೇವೆ. ಇದೀಗ, ಮತ್ತೊಂದು ಮುಖದಿಂದ ಸುಂದರಕಾಂಡದ ಪ್ರಸಂಗವನ್ನೊಮ್ಮೆ ನೋಡೋಣ ... ಇಲ್ಲಿ ಹನುಮಂತನನ್ನು ಎದುರಾಗುವ ದೇಶ-ಕಾಲಗಳು ಬೇರೆ ಬೇರೆ, ಸಂಪರ್ಕಿಸಿದ ಪ್ರಸಂಗ ಹಾಗು ವ್ಯಕ್ತಿಗಳು ಕೂಡ ಬೇರೆ ಬೇರೆ, ಆದರೆ ಹನುಮಂತನ ಬಗೆಗಿನ ಅಭಿಪ್ರಾಯ ಮಾತ್ರ ಬೇರೆಯಲ್ಲ.  

ತ್ವಾಂ ದೃಷ್ಟ್ವಾ ಪ್ರಿಯವಕ್ತಾರಂ ಸಂಪ್ರಹೃಷ್ಯಾಮಿ ವಾನರ ।
ಅರ್ಧಸಂಜಾತಸ್ಯೇವ ವೃಷ್ಟಿಂ ಪ್ರಾಪ್ಯ ವಸುಂಧರಾ ॥ ೫-೪೦-೨ 

ವಾನರ = ಓ ಹನುಮಂತನೇ !  ತ್ವಾಂ ದೃಷ್ಟ್ವಾ = ನಿನ್ನನ್ನು ನೋಡಿ ; ಪ್ರಿಯವಕ್ತಾರಂ = ನಿನ್ನ ಆಪ್ಯಾಯಮಾನವಾದ ಮಾತುಗಳನ್ನು ಕೇಳಿ ; ಸಂಪ್ರಹೃಷ್ಯಾಮಿ = ನಾನು ಆನಂದ ಪರವಶಳಾಗಿದ್ದೇನೆ ; ಅರ್ಧಸಂಜಾತಸ್ಯೇವ = ಆಗಷ್ಟೇ ಬೀಜ ಮೊಳಕೆಯೊಡೆದು ಭೂಮಿಯಿಂದ ಟಿಸಿಲೊಡೆದು ಬಂದಂಥ ಎಳೆ ಬೆಳೆಗೆ ; ವೃಷ್ಟಿಂ ಪ್ರಾಪ್ಯ ವಸುಂಧರಾ = ಧರೆಗಿಳಿದ ಮಳೆ ಸಂತಸವನ್ನೀಯುವಂತೆ (ನಿನ್ನ ಮಾತು ಆನಂದ ತಂದಿದೆ)....

ಸೀತೆ ಹೇಳಿದ ಮಾತಿದು : "ಓ ಹನುಮಂತನೇ! ನಿನ್ನನ್ನು ಕಂಡು, ನಿನ್ನ ಮಧುರವಾದ ಮಾತುಗಳನ್ನು ಕೇಳಿ, ನನ್ನಲ್ಲಿ ಹೇಳಲಾರದಷ್ಟು ಸಂತೋಷ ಉಕ್ಕಿಬರುತ್ತಿದೆ  ... ಅದು ಮಳೆಯ ಸಿಂಚನದಿಂದ,  ಅರ್ಧ ಮೊಳಕೆಯೊಡೆದ ಚಿಗುರಿನ ಮೇಲೆ ಮೂಡಿಬರುವ ಸಂತೋಷದ ಅಲೆಗಳ ಹಾಗೆ ....”

*                         *                      *

Sometime back, we discussed the communication skills of Hanumān, as expressed by Lord Śrī Rāma in Kiśkindha Kāṅḍa. Here’s a view from Sundara Kāṅḍa. The countries are different, scenario is different, Hanumān’s viewers (judges) are different, but the opinion is undivided! 
  
त्वां दृष्ट्वा प्रियवक्तारं संप्रहृष्यामि वानर |
अर्ध सम्जात सस्य इव वृष्टिं प्राप्य वसुंधरा || ५-४०-२ ||

Tvāṁ dr̥ṣṭvā priyavaktāraṁ saṁprahr̥ṣyāmi vānara |
ardha samjāta sasya iva vr̥ṣṭiṁ prāpya vasuṁdharā || 5-40-2 ||

वानर (vānara) = O Hanumān!; दृष्ट्वा (dr̥ṣṭvā) = seeing; त्वां (tvāṁ) = you; प्रियवक्तारं (priyavaktāraṁ) = utter pleasant words; संप्रहृष्यामि (saṁprahr̥ṣyāmi) = I am overjoyed; वसुंधरा इव (vasuṁdharā iva) = as a field; अर्ध सम्जात सस्य (ardha samjāta sasya) = with half-sprouted crop of grain; (is over-joyed); प्राप्य इव (prāpyēva) = on receiving; वृष्टिं (vr̥ṣṭiṁ) = a shower of rain.

"O Hanumān! Seeing you, and listening to your pleasant words, I am as unbounded with joy as a field jostling with half-sprouted crop of grain, that is exhilarated on receiving a shower of rain."

(Contributors: Shri Harish B S Kannada/ Shri Prasad B S English/ Devanagari) 

No comments:

Post a Comment

ಗೋ-ಕುಲ Go-Kula