Thursday 7 April 2016

Sāra Saṅgama 15

ಸಾರ ಸಂಗಮ  by “ತ್ರಿವೇಣಿ ತನಯ


ಮಕ್ಕಳು -ಆಗದಿರಲಿ ಗೋಳು

ನೀನ್ಹೆತ್ತ ಮಕ್ಕಳು ಸಮಾಜಕ್ಕಾಗದಿರಲಿ ಗೋಳು,
ತಿನಿಸಿ ಕಳಿಸು ನಿಜವಿದ್ಯೆಯೆಂಬ ಹಣ್ಣಿನ ಹೋಳು,
ವಿದ್ಯೆಯದು ಎಲ್ಲೆಲ್ಲೂ ಸಲ್ಲುವ ಮಹಾನ್ ಗುಣ,
ಬಾಳನ್ನು ಸವಿಯಾಗಿಸಬಲ್ಲ ಸಿಹಿಯಾದ ಹೂರಣ.

ತೋರು -ಬೆಳಕಿನೂರು.

ಹುಟ್ಟಿದ್ದು ಒಂದೂರು,
ಬೆಳೆದದ್ದು ಒಂದೂರು,
ಓದಿದ್ದು ಇನ್ನೊಂದೂರು,
ಮದುವೆ ಮತ್ತೊಂದೂರು,
ಸುತ್ತಿದ್ದು ನೂರು ಊರು,
ನಿಂತದ್ದು ಬೆಂದ ಕಾಳೂರು,
ಬಯಸೋದು ಬೆಳಕಿನೂರು,
ಕಾರುಣ್ಯದಿ ದಾರಿಯ ತೋರು.

ಅಂತರ್ಮುಖಿ

ಅವನ್ಹಾಗೆ ಇವಳ್ಹೀಗೆ ಇದರಲ್ಲೇ ಹೋಗ್ತಿದೆ ಬಾಳು,
ಎಂದಾದರೂ ನಿನ್ನೊಳಗೆ ನೀನ್ಹೇಗೆಂದು ಕೇಳಿರುವೆಯಾ ಹೇಳು,
ಮೊದಲು ಅಂತರ್ಮುಖಿಯಾಗಿ ನಿನ್ನ ನೀ ತಿದ್ದಿಕೊ ಪ್ರಾಣಿ,
ಅದೊಂದೇ ದಾರಿ ಹುಡುಕಿಕೊಳ್ಳಲು ನಿಜ ಸಾಧನೆಯ ಏಣಿ.

ಎಚ್ಚರ -ಎಚ್ಚರ

ಬದುಕಿನಾ ದಾರಿಯಲಿ ಎಚ್ಚರದಿ ನೀ ಸಾಗು,
ಸಜ್ಜನರ ಕೈಯಲಾಡುವ ಮುಗ್ಧಕೂಸಾಗು,
ನೀ ನಡೆವ ದಾರಿಯಲಿ ದಾರಿ ತಪ್ಪಿಸುವವರೇ ಬಹಳ,
ಸರಿ ದಾರಿ ತೋರಿ ಉಪಕರಿಸುವವರು ವಿರಳ.

ಎಂಥಾ ಸ್ವಂತ?

ಸ್ವಂತ ಸ್ವಂತ ಎಂಥಾ ಸ್ವಂತ?
ಎಲ್ಲದರ ಮಾಲೀಕ ಅನಂತ,
ಇರುವುದೆಲ್ಲ ಬಾಡಿಗೆ ಸ್ವತ್ತು,
"ಸಮ"ವಾಗಿ ತೆತ್ತು ಮೇಲ್ಹತ್ತು.


(Contributed by Shri Govind Magal)

No comments:

Post a Comment

ಗೋ-ಕುಲ Go-Kula