ಸಾರ ಸಂಗಮ by “ತ್ರಿವೇಣಿ ತನಯ”
ಗೀತ -ಬಾಳ ಸಂಗೀತ
ಗೀತೆ -ಅದಲ್ಲ ಬರೀ ಕೃಷ್ಣಾರ್ಜುನ ಸಂವಾದ,
ಸಕಲ ಮನುಕುಲಕೆ ಭಗವಂತನಿತ್ತ ಪ್ರಜ್ಞಾವಾದ,
ಆದರಲ್ಲಿದೆ ಲೋಕದ ಎಲ್ಲ ಪ್ರಶ್ನೆಗಳಿಗೂ ಪರಿಹಾರ,
ಮನೋವಿಜ್ಞಾನಿಯಾಗಿ ಕೃಷ್ಣನಿತ್ತ ಗೀತಾಸಾರ.
ಗೀತೆಯೆಂದರೆ ಅದು ಬರೀ ಗ್ರಂಥವಲ್ಲ,
ಸಕಲ ದುರಿತಗಳಿಗೂ ಪರಿಹಾರವಿದೆಯಲ್ಲ,
ನಿನ್ನ "ದೃಷ್ಟಿ "ಗೆ ತಕ್ಕಂಥ ಉತ್ತರವಿದೆ ನೋಡು,
ಅದನಿತ್ತ ಶ್ರೀಕೃಷ್ಣಗೆ ಸಾಷ್ಟಾಂಗ ಪೊಡಮಡು.
ಕಳಚು ವೇಷ -ಬಿಡು ಆವೇಶ
ನಿರ್ಮತ್ಸರನಾಗಿರಲು ಬಿಟ್ಟು ಬಿಡು ಆವೇಶ,
ನಿರ್ಲಿಪ್ತನಾಗುತ್ತ ತೊಡೆದುಬಿಡು ಆ ವೇಷ,
ಕೊಳಕಾದ ಮಡುವಲ್ಲಿ ನೂರಾರು ಅಲೆ,
ಕೊಳಕಿರದ ಎದೆಯಲ್ಲಿ ಹುಡುಕು ಬಿಂಬದ ನೆಲೆ.
ಮಾಡಿದ್ದುಣ್ಣೋ ಮಹರಾಯ
ಕರ್ಮಸಿದ್ಧಾಂತ ಅನಾದಿಯಿಂದ ಅನವರತ,
ಕಟ್ಟಿಕೊಂಡು ತಂದದ್ದನ್ನೇ ಉಣಬೇಕು ಖಚಿತ,
ಸ್ವಭಾವಗಳಿಂದಾದ ಕರ್ಮಗಳಿಂದ ಜನ್ಮ ನಿರ್ಣಯ,
ಅದೇ ಗಾದೆ ಮಾತು-ಮಾಡಿದ್ದುಣ್ಣೋ ಮಹರಾಯ.
ಮುಗ್ಧ ಶಾರಣ್ಯ
ಪುಟ್ಟ ನಾರದ ಒಪ್ಪಿಸಿದನೇ ವೇದ,
ಪ್ರಹ್ಲಾದ ಮಂಡಿಸಿದನೇ ಗೀತಾವಾದ,
ತರಳಧ್ರುವ ಮಾಡಿದನೇ ಶಾಸ್ತ್ರಾನುವಾದ,
ಮುಗ್ಧ ಶಾರಣ್ಯಕ್ಕೊಲಿಯಲಿಲ್ಲವೇ ಮುಕುಂದ.
(Contributed by Shri Govind Magal)
No comments:
Post a Comment
ಗೋ-ಕುಲ Go-Kula