Sunday 10 April 2016

Sāra Saṅgama 17

ಸಾರ ಸಂಗಮ  by “ತ್ರಿವೇಣಿ ತನಯ

ಸದ್ಗುಣ -ಆಭರಣ

ಸೌಂದರ್ಯ ಮನುಷ್ಯಗಾಭರಣ,
ಸದ್ಗುಣಗಳು ಸೌಂದರ್ಯಕ್ಕಾಭರಣ,
ಜ್ಞಾನವದು ಸದ್ಗುಣಗಳ ಸಂಕೇತ,
ಕ್ಷಮಾಗುಣದಿಂದ ಜ್ಞಾನ ಅಲಂಕೃತ.

ಕಾಣದ ಸತ್ಯ - ಶಾಶ್ವತ ನಿತ್ಯ

ಗಾಳಿಯು ಕಣ್ಣಿಗೆ ಕಾಣದು ನೋಡು,
ನಿಲ್ಲದೆ ನಡೆದಿದೆ ಉಸಿರಾಟದ ಹಾಡು,
ಬೆಳಕು ಶಾಖವ ಹಿಡಿಯಲಾರೆ ನೀನು,
ಅವಿರತ ಅವುಗಳ ನೀಡುತಿರುವ ಭಾನು.

ಪ್ರಕೃತಿ -ಪ್ರೀತಿ

ಹರಿಯುವ ನೀರು ತೇಲುವ ಮೋಡ,
ಯಾರೊಬ್ಬರ ಕೈಗೂ ಸಿಗವವು ನೋಡ,
ಪ್ರಾಣಿ ಪಕ್ಷಿಗಳ ಕಲರವ ಗಾನ,
ಎನಿತು ಸುಂದರ ಜೀವನ ಯಾನ.

ಮೌನ -ಜ್ಞಾನ ಗಾನ

ಮಾತಾಡುವ ಮನುಜ ಅಪಾಯಕಾರಿ,
ಮಾತಾಡದ ಪ್ರಕೃತಿ ಬಲು ಸಹಕಾರಿ,
ಮೌನ ಸಂಭಾಷಣೆಯ ಕಲೆಯ ಕಲಿ,
ಸೃಷ್ಟಿಕರ್ತನ ನಮಿಸುತ ದಿನವೂ ನಲಿ.

ಆಕಾಶ -ಮನೋಕಾಶ

ಆಕಾಶಕಭಿಮಾನಿ ನೀ ಗಣೇಶ,
ನಿನ್ನಪ್ಪ ಮನೋಭಿಮಾನಿ ಈಶ,
ಸದವಕಾಶ ಕೊಡು ವಿಘ್ನೇಶ್ವರ,
ಹರಿಪಾದದಿ ಮನನಿಲಿಸು ನೀ ಈಶ್ವರ.

(Contributed by Shri Govind Magal)

No comments:

Post a Comment

ಗೋ-ಕುಲ Go-Kula