Friday 22 April 2016

Sāra Saṅgama 19

ಸಾರ ಸಂಗಮ  by “ತ್ರಿವೇಣಿ ತನಯ

ಬೇಡ ಹುಚ್ಚು -ಸೃಷ್ಟಿಯ ಮೆಚ್ಚು

ಭಗವಂತನ ಮೆಚ್ಚಿಸುವ ಹುಚ್ಚು,
ಅವನ ಸೃಷ್ಟಿಯನೇ ಮೆಚ್ಚದಾ ಕೆಚ್ಚು,
ಮೊದಲು ಅಹಂಕಾರದ ಅಂಗಿಯಾ ಬಿಚ್ಚು,
ವಿನಯದಿ ಬಾಗುತಾ ಪ್ರೀತಿ ದೀಪವ ಹಚ್ಚು.

ಅವನ ಜಗ -ಎಲ್ಲರಿಗೂ ಜಾಗ

ಹುಟ್ಟು ಕುರುಡ ಕಿವುಡ ಮೂಗ,
ಎಲ್ರಿಗೂ ಇದೆ ಅವನ ಜಗದಲಿ ಜಾಗ,
ನಮ್ಮ ಸೀಮಿತ ದೃಷ್ಟಿ-ಆ ಮತ-ಈ ಮತ,
ಎಲ್ಲರಿಗೂ ಒದಗುವ ಅವ ಸೀಮಾತೀತ.

ಮಾಗದ ಮನುಜ -ಅಜ್ಞಾನದ ಕಣಜ

ಯಾರೆಷ್ಟೇ ಹೇಳಿದ್ರೂ ತಿದ್ದಿಕೊಳ್ಳದ ಮನುಜ,
ಎಲ್ಲರೂ ಅವರವರ ಪಾಲಿಗೆ ಜ್ಞಾನದ ಕಣಜ,
ಮೊದಲು ಅವನ ಇತಿಮಿತಿಗಳೆ ಅವನಿಗೆ ಗೊತ್ತಿಲ್ಲ,
ಮಿತಿಯಿಲ್ಲದವನ ತಿಳಿವುದೆಂತು "ಅಮಿತ"ನೇ ಬಲ್ಲ.

ವಿಧಿ -ನಿಷೇಧ

ನಿನ್ನ ಸ್ಮರಣೆ ವಿಧಿ -ವಿಸ್ಮರಣೆ ನಿಷೇಧ,
ಸ್ಮರಣೆಯೊಂದೇ ದುರಿತಗಳ ದಿವ್ಯೌಷಧ,
ಎನ್ನ ಲೆಕ್ಕಕನುಗುಣ ಬರುವುದೆಲ್ಲ ಬರಲಿ,
ಪ್ರತಿಕ್ಷಣ ನಿನ್ನ ಸ್ಮರಣೆಯದು ತಪ್ಪದಿರಲಿ.

ವ್ಯವಸ್ಥೆ -ದುರವಸ್ಥೆ

ಅರ್ಥಹೀನ ಸಮಾಜ ವ್ಯವಸ್ಥೆ,
ಅದಕೆಂದೇ ಎಲ್ಲೆಲ್ಲೂ ದುರವಸ್ಥೆ,
ಎಲ್ಲರಲ್ಲೂ ಮಿತಿಮೀರಿದ ಅಶಿಸ್ತು,
ಶಿಸ್ತಿದ್ದವನೇ ಇವರ ಮಧ್ಯೆ ಬೇಸ್ತು.


(Contributed by Shri Govind Magal)

No comments:

Post a Comment

ಗೋ-ಕುಲ Go-Kula