Saturday, 23 April 2016

Sāra Saṅgama 20

ಸಾರ ಸಂಗಮ  by “ತ್ರಿವೇಣಿ ತನಯ

ಅವನ್ಯಾರು? - ಎಲ್ಲ(ದ)ರ  ಬೇರು!

ಬಾನಿಗೆ ಬಣ್ಣ ಬಳಿದವನ್ಯಾರು,
ಮೋಡದಿ ನೀರ ಇಟ್ಟವನ್ಯಾರು,
ಇಳೆಗೆ ಹಸಿರು ಸೀರೆ ಕೊಟ್ಟವನ್ಯಾರು,
ಸಾಗರದ ನೀರಿಗೆ ಉಪ್ಪಿಟ್ಟವನ್ಯಾರು,
ನದಿಗಳ ನೀರಿಗೆ ಬೆಲ್ಲ ಬಿಟ್ಟವನ್ಯಾರು,
ಬೆಟ್ಟದಿ ಮರಗಳ ನೆಟ್ಟವನ್ಯಾರು

ಸೂರ್ಯನಲಿ ಶಾಖ ಬೆಳಕಿಟ್ಟವನ್ಯಾರು,
ಚಂದ್ರನಿಗೆ ತಂಬೆಳಕು ಕೊಟ್ಟವನ್ಯಾರು,
ತಾರೆಗಳಲಿ ಹೊಳಪು ತುಂಬಿದವನ್ಯಾರು,
ಫಲಗಳಲಿ ತರ ತರ ಸಿಹಿ ಇಟ್ಟವನ್ಯಾರು,
ತರ ತರ ಜೀವರಾಶಿಗಳ ಕೆಳಬಿಟ್ಟವನ್ಯಾರು,
ತಾರತಮ್ಯದಿ ಮತಿ ಇಟ್ಟವನ್ಯಾರು.

ಆಟಕೆ ಬಿಟ್ಟು ಕೂತವನ್ಯಾರು
ನಾಟಕ ಮುಗಿಸಿ ಬನ್ನಿ ಎಂದವನ್ಯಾರು,
ನೋಟಕೆ ಎಂದೂ ಸಿಗದವನ್ಯಾರು,
ಬೂಟಕದಾಟಕೆ ದಕ್ಕದವನ್ಯಾರು,
ಹೊರಗಣ್ಣಿಗೆ ಕಾಣದ ಮಾಂತ್ರಿಕನ್ಯಾರು,
ಒಳಗಣ್ಣ ಅನುಭವಕೆ ಸಿಗುವವನ್ಯಾರು.


(Contributed by Shri Govind Magal)

No comments:

Post a Comment

ಗೋ-ಕುಲ Go-Kula