ಸಾರ ಸಂಗಮ by “ತ್ರಿವೇಣಿ ತನಯ”
ಜ್ಞಾನಿಯ ಅರಿವಾಗದ
ಅಜ್ಞಾನ
ಜ್ಞಾನಿಗಳ ಮಧ್ಯೆ ಇದ್ದರೂ
ಅರಿವೇ ಇಲ್ಲ,
ಅಹಂಕಾರದ ಮೂಟೆಗಳಾಗಿ
ದೂರಿರುವವರೇ ಎಲ್ಲ,
ವ್ಯಕ್ತಿ ಹೋದಮೇಲೆ ಭಾರೀ ಸಂತಾಪ
ಸಭೆ ಗುಣಗಾನ,
ಇದ್ಯಾತರ ರೀತಿ ಆಡಂಬರದ ಮತಿಹೀನ
ಪ್ರದರ್ಶನ.
ಪ್ರಾಮಾಣಿಕತೆ
ಪ್ರಾಮಾಣಿಕತೆಯದು ಹೊರಗೆ
ಕಲಿಯುವ ವಿಷಯವಲ್ಲ,
ಸರಿ ತಪ್ಪುಗಳಾವೆಂದು ಕ್ಷಣವೂ
ಒಳಮನ ನುಡಿಯುತಿದೆಯಲ್ಲ,
ಆತ್ಮಸಾಕ್ಷಿಗೆ ಕಿವಿಗೊಟ್ಟು
ಒಳಮಾತಿಗೆ ಬೆಲೆ ಕೊಡು,
ಅಂತರಾತ್ಮ ಅರಿಯದವಗೆ ಪರಮಾತ್ಮ
ದೂರ ನೋಡು.
ಮನದ ಸರಿಗಮ --ಉತ್ತಮ ಅಧಮ
ಪ್ರಕೃತಿಯಲಿ ಯಾವುದೂ ಉತ್ತಮ
ಅಧಮ ಅಂತಿಲ್ಲ,
ಅವರವರ ಯೋಗ್ಯತಾನುಸಾರ
ತೋರುತಿಹುದೆಲ್ಲ,
ಒಬ್ಬನಿಗೆ ವಿಷ
-ಇನ್ನೊಬ್ಬನಿಗದೇ ಪೀಯೂಷ,
ಒಂದೇ ವಿಷಯ ಒಬ್ಬನಿಗೆ ನೋವು
ಇನ್ನೊಬ್ಬಗೆ ಹರ್ಷ,
ಏನಿದು ವಿಚಿತ್ರ ಘಟನಾವಳಿಗಳ
ವಿರೋಧಾಭಾಸ,
ತೂಗಿ ಕೊಡುತಿಹ ವಿಧಾತನದದು
"ವಿಶೇಷ ತ್ರಾಸ".
ಹಣೆಬರಹ
ಯಾರೇ ಇರಲಿ ಪುಣ್ಯವಂತ ಪಾಪಿ,
ತಪ್ಪಿಸಲಾದೀತೆ ಅದ ಫಾಲ -ಲಿಪಿ,
ಬೇಕಿರಲಿ ಬೇಡದಿರಲಿ
ಬದಲಾಗದ ಗತಿ,
ಕಟ್ಟಿ ತಂದಿರುವದ ಉಣಬೇಡವೇ
ಬುತ್ತಿ.
(Contributed by Shri Govind Magal)
No comments:
Post a Comment
ಗೋ-ಕುಲ Go-Kula