Wednesday 13 April 2016

Sāra Saṅgama 18

ಸಾರ ಸಂಗಮ  by “ತ್ರಿವೇಣಿ ತನಯ

ಪೂರ್ವನಿಯೋಜಿತ

ಹಾರಾಡಿ ಜಿಗಿದಾಡಿ ನೀ ಮಾಡುವುದೇನು,
ಏನೆಲ್ಲ ನಡೆಯುತಿದೆ ತನ್ನಿಂದಲೇ ತಾನು,
ಏನೂ ಬದಲಿಸಲಾರೆ ಎಲ್ಲವೂ ಪೂರ್ವ ನಿರ್ಧಾರಿತ,
ಮರ್ಮವನರಿತು ಶರಣಾಗು ಹರಿ ಪಾದದಿ ಸತತ.                                          

ನಿಯಂತ್ರಣ -ಇಂದಿರಾರಮಣ

ಹವಾಮಾನ ಮಳೆ ಮಿತಿಯಲಿದ್ರೆ ಪ್ರಕೃತಿ ಸುಂದರ,
ತಾಳ ತಪ್ಪಿತೋ ತಲೆ ಕೆಳಗಾಗಿ ಎಲ್ಲವೂ ದುರ್ಭರ,
ಯಾರು ನಿಯಂತ್ರಿಸಬಲ್ಲರಿದನು ವಿಧಾತನ ಹೊರತು,
ಸಮತೋಲನಕ್ಕೆ ಬೇಡು ಅವನನ್ನೇ ನಿನ್ನ ಮಿತಿ ಅರಿತು.

ಎಚ್ಚರ -ಸಾರ

ಇರಲಿ ಆತನಿತ್ತ ಬಾಳು ಎಂಬ ಎಚ್ಚರ,
ಬರಲಿ ಆತನನ್ನು ತಿಳಿಯಬೇಕೆಂಬ ಕಾತರ,
ಉದಿಸಲಿ ಬಂಧಗಳ ಕಳಚಬೇಕೆಂಬ ಅವಸರ,
ಎರೆಯಲಿ ಮುಖ್ಯಪ್ರಾಣ ತತ್ವವಾದದ ಸಾರ.

ಅನುಸಂಧಾನ

ಜ್ಞಾನ ಅನುಸಂಧಾನವಿರದ ಕರ್ಮ ವ್ಯರ್ಥ,
ಏನೇ ಮಾಡು ಅರಿತಾಚರಿಸು ಹಿನ್ನೆಲೆ ಅರ್ಥ,
ಎಲ್ಲರೊಳಾಡುವ ಅಂತರ್ಯಾಮಿಯ ಹುಡುಕು ನೀನು,
ಬಂದವರಿಗೆ ಆತಿಥ್ಯವಿತ್ತು "ಕೃಷ್ಣಾರ್ಪಣ"ವೆನ್ನು.

ತಾರತಮ್ಯ

ತಾರತಮ್ಯವದು ಸೃಷ್ಟಿಯ ನಿಯಮ,
ಮೇಲಿಲ್ಲ ಕೀಳಿಲ್ಲ ಸ್ವಭಾವಗಳ ಧರ್ಮ,
ಸ್ವಭಾವಗಳ ಅರಿತು ಬಾಳುವುದೇ ದೀಕ್ಷೆ,
ಬಂದಿರುವುದದಕೆ ಎದುರಿಸಲು ಪರೀಕ್ಷೆ.

(Contributed by Shri Govind Magal)

No comments:

Post a Comment

ಗೋ-ಕುಲ Go-Kula