Tuesday 19 April 2016

Qualities of a good speaker: Śrī Rāma's appreciation of Hanumān

Ślōkas from Kiṣkindhā Kānḍa, Vālmīki Rāmāyaṇa

Brief background of how Hanumān met with RāmaLakṣmaṇa for the first time:

Rāma and Lakṣmaṇa enter Kiṣkindhā forest enroute Lanka in search of Sītā. Sugrīva who has been banished by his brother Vāli, is hiding in Kiṣkindhā and he spots the Rāma / Lakṣmaṇa duo. Sugrīva mistakes them to be spies or agents of Vāli and sends Hanumān to find out their credentials.

Hanumān on first sight recognizes the divinity in the two and talks to them endearingly from the word go. Post his pleasant enquiries, Lord Rāma sums up his thoughts of Hanumān in the following beautiful ślōkas. Read on -


अन् ऋग्वेद विनीतस्य अऽऽयजुर्वेद धारिणः
अऽऽसाम वेद विदुषः शक्यं एवं विभाषितुम् --२८
Na an r̥gvēda vinītasya na a̕̕yajurvēda dhāriṇaḥ |
na a̕̕sāma vēda viduṣaḥ śakyaṁ ēvaṁ vibhāṣitum || 4-3-28 ||

(na) = not; अन् ऋग्वेद विनीतस्य (an r̥gvēda vinītasya) = non, R̥g Vēda, knower of; (na) = not; अऽऽयजुर्वेद धारिणः (a̕̕yajurvēda dhāriṇaḥ) = non, Yajur Vēda, remembering; na = not; अऽऽसाम वेद विदुषः (na a̕̕sāma vēda viduṣaḥ) = non, Sāma Vēda, scholar; शक्यं (śakyaṁ) = possible; एवं विभाषितुम् (ēvaṁ vibhāṣitum) = this way, truly, to speak.

"One who is not well versed/ proficient in R̥k, Yajur or Sāma Vēda would not be able to speak in such a remarkable manner.” [4-3-28]

Lord Rāma thereby acknowledges that the knowledge level of Hanumān is of a high order and that his eloquence is thereby brilliant.

नूनं व्याकरणं कृत्स्नं अनेन बहुधा श्रुतम्
बहु व्याहरता अनेन किंचित् अप शब्दितम् --२९
Nūnaṁ vyākaraṇaṁ kr̥tsnaṁ anēna bahudhā śrutam |
bahu vyāharatā anēna na kin̄cit apa śabditam ||4-3-29 ||

नूनं (Nūnaṁ) = definitely; अनेन (anēna) = by him; व्याकरणं कृत्स्नं (vyākaraṇaṁ kr̥tsnaṁ) = grammar, comprehensively; बहुधा श्रुतम् (bahudhā śrutam) = severally, heard [learnt]; बहु व्याहरता अनेन(bahu vyāharatā anēna) = much, said, by him; किंचित् (na kin̄cit) = not, a single word; अप शब्दितम् (apa śabditam) = amiss, verbiage.

"It is certain that he has detailed and comprehensive knowledge of grammar and though he has spoken quite a bit, not a single word in his language is amiss.” [4-3-29]

Hanumān’s diction and speech delivery is meticulous and flawless!

मुखे नेत्रयोः अपि ललाटे भ्रुवोः तथा
अन्येषु अपि सर्वेषु दोषः संविदितः क्वचित् --३०
Na mukhē nētrayōḥ ca api lalāṭē ca bhruvōḥ tathā |
an'yēṣu api ca sarvēṣu dōṣaḥ sanviditaḥ kvacit || 4-3-30 ||

मुखे नेत्रयोः अपि (mukhē nētrayōḥ ca(vā) api) = on face, in eyes, or even; ललाटे (lalāṭē) = on forehead; तथा भ्रुवोः (tathā bhruvōḥ) = like that, on eyebrows; अन्येषु अपि (an'yēṣu api ca) = other parts [of face,] even, also; सर्वेषु क्वचित् दोषः संविदितः (sarvēṣu kvacit dōṣaḥ na sanviditaḥ) = in all [faculties,] at the least, fault, is not, found.

"On his face or eyes, or on forehead or brows, or on other faculties of expression no fault is found...even at the least... [4-3-30]

Hanumān is perfect in expression and body language!

अविस्तरं असंदिग्धं अविलम्बितं अव्यथम्
उरः स्थं कण्ठगं वाक्यं वर्तते मध्यमे स्वरम् --३१
Avistaraṁ asandigdhaṁ avilambitaṁ avyatham |
uraḥ sthaṁ kaṇṭhagaṁ vākyaṁ vartatē madhyamē svaram || 4-3-31||

वाक्यं (vākyaṁ) = [his] sentence; अविस्तरं (avistaraṁ) = un expanded; असंदिग्धं (asandigdhaṁ) = not doubtful; अविलम्बितं(avilambitaṁ) = non delaying; अव्यथम् (avyatham) = non dissonant; उरः स्थं कण्ठगं (uraḥ sthaṁ kaṇṭhagaṁ) = seated in chest, in throat; वर्तते मध्यमे स्वरम् (vartatē madhyamē svaram) = comports, [speech,] in medium, tone.

"Crisp, unequivocal, timely and harmonious is the tenor of his speech, and it springs forth from his chest and throat in a balanced tone!” [4-3-31]

Hanumān’s voice is mellifluous; intonation and tonal quality is supreme. Makes one long to hear him speak!

(More... Kannada Version follows)

ರಾಮ-ಲಕ್ಷ್ಮಣರನ್ನು ಹನುಮಂತ ಮೊದಲಬಾರಿ ಭೇಟಿಯಾದ ಹಿನ್ನೆಲೆಯ ಒಂದು ನೋಟ :

ಸೀತೆಯನ್ನು ಅರಸುತ್ತಾ ಲಂಕೆಗೆ ತೆರಳುವ ಮಾರ್ಗಮಧ್ಯೆ ರಾಮ-ಲಕ್ಷ್ಮಣರಿಬ್ಬರೂ ಕಿಷ್ಕಿಂದಾವನಕ್ಕೆ ಪ್ರವೇಶಮಾಡಿದ್ದಾರೆ. ಆ ಸಂದರ್ಭದಲ್ಲೇ ಅಣ್ಣ ವಾಲಿಯಿಂದ ರಾಜ್ಯವನ್ನೂ, ತನ್ನ ಪತ್ನಿಯನ್ನೂ ಕಳೆದುಕೊಂಡು ಹೊರದೂಡಲ್ಪಟ್ಟವನಾದ ಸುಗ್ರೀವ ಕೂಡ ತನ್ನ ಗುಪ್ತನೆಲೆ ಕಂಡುಕೊಂಡದ್ದು ಆ ಕಿಷ್ಕಿಂದೆಯಲ್ಲೇ. ರಾಮ-ಲಕ್ಷ್ಮಣರ ಬರುವನ್ನು ದೂರದಿಂದಲೇ ವೀಕ್ಷಿಸಿದ  ಸುಗ್ರೀವ, ಅವರು ವಾಲಿಯಿಂದ ಕಳಿಸಲ್ಪಟ್ಟ ಗೂಢಚಾರರಿರಬೇಕೆಂಬ ತಪ್ಪು ಗ್ರಹಿಕೆಯಿಂದಜೊತೆಗಿದ್ದ ಹನುಮಂತನನ್ನು ಅವರ ರುಜುವಾತುಗಳ ಬಗೆಗೆ ತಿಳಿಯಲಪೇಕ್ಷಿಸಿ ಅವರ ಬಳಿಗೆ ಕಳಿಸಿಕೊಡುತ್ತಾನೆ.

ಹನುಮಂತನದರೋ, ನೆಟ್ಟ ಮೊದಲ ದೃಷ್ಟಿಯಲ್ಲೇ ಇವರೀರ್ವರಲ್ಲಿರುವ ದೈವತ್ವವನ್ನು ಗುರುತಿಸಿ, ಬಾಯಿ ತೆರೆಯುತ್ತಲೇ ಅತ್ಯಂತ ಪ್ರೀತಿಯಿಂದ ಮಾತನಾಡಿಸಿದ. ಹನುಮಂತನ ವಿನಯಪೂರ್ವಕ ವಿಚಾರಣೆಯ, ಆಹ್ಲಾದಕರ ಮಾತುಗಳನ್ನಾಲಿಸಿದ ಪ್ರಭು ರಾಮಚಂದ್ರ, ಸಂತೋಷಗೊಂಡು ಹನುಮಂತನ ಬಗೆಗೆ ಆಡಿದ ಮಾತುಗಳನ್ನು ವಾಲ್ಮೀಕಿಗಳು ಈ ಕೆಳಗಿನ ಸುಂದರವಾದ ಶ್ಲೋಕದಲ್ಲಿ ಸೆರೆಹಿಡಿದಿದ್ದಾರೆ : 

ನ ಅನ್ಋಗ್ವೇದ ವಿನೀತಸ್ಯ ನ ಅಯಜುರ್ವೇದ ಧಾರಿಣಃ
ನ ಅಸಾಮವೇದ ವಿದುಷಃ ಶಕ್ಯಂ ಏವಂ ವಿಭಾಷಿತುಮ್  ೪-೩-೨೮

ನ ಅನ್ಋಗ್ವೇದ ವಿನೀತಸ್ಯ - ಋಗ್ವೇದದಲ್ಲಿ ಪ್ರಾವೀಣ್ಯತೆ ಪಡೆಯದವನ ; ನ ಅಯಜುರ್ವೇದ ಧಾರಿಣಃ - ಯಜುರ್ವೇದವನ್ನು ಕರಗತ ಮಾಡಿಕೊಳ್ಳದವನ ; ನ ಅಸಾಮವೇದ ವಿದುಷಃ - ಸಾಮವೇದದ ನಾದಾನುಸಂಧಾನದಲ್ಲಿ ವಿದ್ವತ್ತು ಹೊಂದದವನ; ಶಕ್ಯಂ ಏವಂ ವಿಭಾಷಿತುಮ್ - (ಬಾಯಲ್ಲಿ) ಇಂಥಹ ಅಸಾಧಾರಣವಾದ ಮಾತುಗಾರಿಗೆ ಸಾಧ್ಯವೇ?

ರಾಮಚಂದ್ರ ಹೇಳಿದ : "ಯಾರಿಗೆ ಮೂರು ವೇದಗಳಲ್ಲಿ (ಋಕ್, ಯಜುಸ್, ಸಾಮ) ಅಸಾಮಾನ್ಯ ತಿಳುವಳಿಕೆ ಸಾಧ್ಯವಿಲ್ಲವೋ ಅಂಥವರ ಬಾಯಲ್ಲಿ ಅಧ್ಬುತ ಮಾತುಗಾರಿಕೆ, ತನ್ನಷ್ಟಕ್ಕೆ ಹೊರ ಹೊಮ್ಮುವ ಪದಪುಂಜಗಳ ಜೋಡಣೆ ಸಾಧ್ಯವಿಲ್ಲ.... " 
ಹಾಗೆ ಮುಂದುವರೆಯುತ್ತಾ , ಪ್ರಭು ರಾಮಚಂದ್ರ ಹನುಮಂತನ ಜ್ಞಾನದ ಎತ್ತರವನ್ನು, ಅವನ ಅಧ್ಬುತ ಮಾತುಗಾರಿಕೆಯನ್ನು ಮುಂದಿನ ಶ್ಲೋಕದಲ್ಲಿ ಪರಿಚಯಿಸುತ್ತಾನೆ :

ನೂನಮ್ ವ್ಯಾಕರಣಮ್ ಕೃತ್ಸ್ನಮ್ ಅನೇನ ಬಹುಧಾ ಶೃತಮ್
ಬಹು ವ್ಯಾಹರತಾ ಅನೇನ ನ ಕಿಂಚಿತ್ ಅಪಶಬ್ದಿತಮ್ ೪-೩-೨೯

ನೂನಮ್ ಅನೇನ - ಖಂಡಿತವಾಗಿಯೂ  ಅವನಿಂದ ವ್ಯಾಕರಣಮ್ ಕೃತ್ಸ್ನಮ್- ಸಮಗ್ರ ವ್ಯಾಕರಣವು ; ಬಹುಧಾ ಶೃತಮ್ - ಅನೇಕ ಬಾರಿ ಕೇಳಿಯಾಗಿರಬೇಕು ;
ಬಹು ವ್ಯಾಹರತಾ ಅನೇನ - ಅವನ ಅನೇಕ ಮಾತುಗಾರಿಕೆಯ ನಡುವೆಯೂ ನ ಕಿಂಚಿತ್ ಅಪಶಬ್ದಿತಮ್ -  ಒಂದೇ ಒಂದು ಅಪಶಬ್ದವೂ (ಬಾಯಿಂದ) ಹೊರಬೀಳಲಿಲ್ಲ ... 

ರಾಮಚಂದ್ರ ಹೇಳಿದ :-  "ಹನುಮಂತ, ಖಂಡಿತವಾಗಿಯೂ ಸಮಗ್ರ ವ್ಯಾಕರಣ ಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿರಲೇಬೇಕು, ಅನೇಕ ಬಾರಿ ಮನನ ಮಾಡಿದ್ದರಿಂದಲೇ, ಅವನಾಡಿದ ಅನೇಕ ಮಾತುಗಳ ನಡುವೆ, ಒಂದೇ ಒಂದು ಅಪಶಬ್ದವೂ ಅವನ ಮುಖದಿಂದ ಹೊರಬೀಳಲಿಲ್ಲ... "

ಹನುಮಂತನ ವಾಗ್ವೈಖರಿ, ದೋಷರಹಿತವಾದ ಅಸ್ಖಲಿತ ವಾಗ್ಝರಿಯನ್ನು ಮುಂದಿನ ಶ್ಲೋಕ ಹೀಗೆ ಬಣ್ಣಿಸಿದೆ : 

ನ ಮುಖೇ ನೇತ್ರಯೋಃ ಚ ಅಪಿ ಲಲಾಟೆ ಚ ಭ್ರುವೋ ತಥಾ
ಅನ್ಯೇಷು ಅಪಿ ಚ ಸರ್ವೇಷು ದೋಷಃ ಸಂವಿದಿತಃ ಕ್ವಚಿತ್  ೪-೩-೩೦

ನ ಮುಖೇ ನೇತ್ರಯೋಃ - ಮುಖದಲ್ಲಾಗಲಿ, ಕಣ್ಗಳಲ್ಲಾಗಲಿ ಚ ಅಪಿ ಲಲಾಟೆ - ಹಣೆಯಲ್ಲಿ ಕೂಡ ಚ ಭ್ರುವೋ ತಥಾ - ಹಾಗೆಯೇ ಹುಬ್ಬುಗಳಲ್ಲಿಯಾಗಲಿ ; ಅನ್ಯೇಷು ಅಪಿ ಚ ಸರ್ವೇಷು- ದೇಹದ ಯಾವುದೇ (ಅಂಗಾಂಗಗಳಲ್ಲಿನ) ಹಾವಭಾವಗಳಲ್ಲಿ ಕೂಡ ದೋಷಃ ಸಂವಿದಿತಃ ಕ್ವಚಿತ್ - ಕಿಂಚ್ಚಿತ್ತಾದರೂ ನ್ಯೂನತೆ ಅಥವಾ ಕೊರತೆ ಅಥವಾ ದೋಷ  ಕಂಡು ಬರಲಿಲ್ಲ... ಹನುಮಂತ ರಾಮನೊಂದಿಗೆ ಮಾತನಾಡುವಾಗ, ರಾಮ ಹನುಮಂತನಲ್ಲಿ ಯಾವ ದೋಷವನ್ನೂ ಗುರುತಿಸಲಾಗಲಿಲ್ಲ ಎಂಬುದನ್ನು ಸುಂದರವಾಗಿ ಚಿತ್ರಿಸಿದ್ದಾರೆ ವಾಲ್ಮೀಕಿಗಳು - " ಹನುಮಂತ ಮಾತನಾಡುವಾಗ , ಅವನ ಮುಖದಲ್ಲಾಗಲಿ, ಕಣ್ಗಳಲ್ಲಾಗಲಿ, ಹಣೆಯಲ್ಲಿ - ಹುಬ್ಬುಗಳಲ್ಲಿಯಾಗಲಿ, ಯಾವುದೇ ಮುಖಭಾವನೆಯಲ್ಲಾಗಲಿ ಕಿಂಚಿತ್ತೂ ಕೊರತೆ ಕಂಡು ಬರುತ್ತಿರಲಿಲ್ಲ"...
ಹನುಮಂತ ತನ್ನ ವ್ಯಕ್ತಿತ್ವದ ಅಭಿವ್ಯಕ್ತಿಯಲ್ಲಿ ಮತ್ತು ದೇಹ ಭಾಷೆಯಲ್ಲಿ ಅತ್ಯಂತ ಪರಿಪೂರ್ಣ !

ಅವಿಸ್ತರಮ್  ಅಸಂಧಿಗ್ಧಮ್ ಅವಿಲಂಬಿತಮ್ ಅವ್ಯಥಮ್
ಉರಸ್ಥಮ್ ಕಂಠಗಮ್ ವಾಕ್ಯಮ್ ವರ್ತತೇ ಮಧ್ಯಮೇ ಸ್ವರಮ್   ೪-೩-೩೧

ಅವಿಸ್ತರಮ್ - ಅತಿ ವಿಸ್ತಾರ ಇಲ್ಲದ ; ಅಸಂಧಿಗ್ಧಮ್ - ಯಾವುದೇ ಸಂಶಯ ಇಲ್ಲದ ; ಅವಿಲಂಬಿತಮ್ - ತಡವರಿಸಿ ತಡಮಾಡದ ; ಅವ್ಯಥಮ್ - ಅಸಂಗತವಾಗಿರದ ಉರಃ ಸ್ಥಮ್ ಕಂಠಗಮ್ ವಾಕ್ಯಮ್- ಎದೆಯಾಳದಿಂದ, ಕಂಠದ ಮೂಲಕ ಹೊರಬಂದ ಮಾತು ವರ್ತತೇ ಮಧ್ಯಮೇ ಸ್ವರಮ್ - ಸದಾ ಮಧ್ಯಮ ಸ್ವರದಲ್ಲಿ ಇರುತ್ತಿತ್ತು . 
ರಾಮಚಂದ್ರ ಹೇಳಿದ : "ಹೆಚ್ಚು ವಿಸ್ತಾರವಿಲ್ಲದ, ಖಚಿತತೆಯಿಂದ ಕೂಡಿದ ಮಾತುಸಕಾಲಕ್ಕೆ ಬೇಕಾದ ಪದಪುಂಜಗಳ ಹೊಳೆವುಗಳಿಂದ ಕೂಡಿದ ಮತ್ತು ಸಾಮರಸ್ಯ ಮೂಡಿಸುವ ನುಡಿಮುತ್ತುಗಳು, ಹನುಮಂತನ ಹೃದಯದಿಂದ ಬುಗ್ಗೆಯಂತೆ ಹೊರಚಿಮ್ಮುತ್ತಾ ಕಂಠಸ್ತರದಲ್ಲಿ ಸಮತೋಲನವನ್ನು ಕಾಯ್ದುಕೊಂಡು ಮಧುರವಾದ ಧ್ವನಿಯ ಮೂಲಕ ಕಿವಿಗಿಂಪಿತ್ತಿತು" 
ಹನುಮಂತನ ಮಾತಿನ ಧ್ವನಿ ಇಂಪಾಗಿದ್ದು , ಉಚ್ಚಾರದ ಗುಣ ಸರ್ವೋತ್ಕೃಷ್ಟವಾಗಿದ್ದು, ಕೇಳುಗರನ್ನು ಮತ್ತಷ್ಟು ಕೇಳಬಯಸುವಂತೆ ಮಾಡುತ್ತದೆ ಎಂಬುದನ್ನು ಮುಂದಿನ ಶ್ಲೋಕ ವಿವರಿಸುತ್ತದೆ....

ಸಂಸ್ಕಾರ ಕ್ರಮ ಸಂಪನ್ನಾಮ್  ಅಧ್ಬುತಮ್ ಅವಿಲಂಬಿತಾಮ್
ಉಚ್ಚಾರಯತಿ ಕಲ್ಯಾಣೀಮ್ ವಾಚಮ್ ಹೃದಯ ಹರ್ಷಿಣೀಮ್  ೪-೩-೩೨

ಸಂಸ್ಕಾರ ಕ್ರಮ ಸಂಪನ್ನಾಮ್ - ಕ್ರಮಬದ್ಧವಾದ, ಪರಿಷ್ಕರಣೆಗೊಂಡ ಮಾತುಗಾರಿಕೆ ; ಅಧ್ಬುತಮ್ ಅವಿಲಂಬಿತಾಮ್ - ತಡೆಯಿರದ, ಅಸ್ಕಲಿತ ಧ್ವನಿಯ ಮೂಲಕ ಎಲ್ಲರ ಗಮನವನ್ನೂ  ತನ್ನತ್ತ ಸೆಳೆಯುವ ಮಾತುಗಾರಿಕೆ ಉಚ್ಚಾರಯತಿ ಕಲ್ಯಾಣೀಮ್ ವಾಚಮ್ - ಮಂಗಳಕರವಾದ ಪದಪುಂಜಗಳ ಮಾತು ... ಹೃದಯ ಹರ್ಷಿಣೀಮ್ - ಕೇಳುಗರ ಮನತುಂಬಿ ಉಲ್ಲಾಸವನ್ನು ನೀಡುವುದು...

"ಹನುಮಂತನ ಮಾತುಗಾರಿಕೆಯೆಂದರೆ, ಪರಿಷ್ಕರಣೆಗೊಂಡ, ಕ್ರಮಬದ್ಧವಾದ, ಅಸ್ಕಲಿತ ವಾಣಿಯಿಂದ ಹೊರಹೊಮ್ಮುವ ಪದಪುಂಜಗಳು, ಕೇಳುಗರನ್ನು ಮೈಮರೆಯುವಂತೆ ಮಾಡಿ, ಮಂಗಳಕರವಾದ ಧ್ವನಿ, ಕೇಳುಗರ ಹೃದಯ ತುಂಬಿ ಮನೋಲ್ಲಾಸವನ್ನು ನೀಡುವಂತ್ತಿದ್ದಿತು" ...


(English/Devanagari version by Shri Prasad B.S. / Kannada Version by Shri Harish B.S.)

No comments:

Post a Comment

ಗೋ-ಕುಲ Go-Kula